ಬೆಸ್ಕಾಂ ಇಂಜಿನಿಯರ್ ಎಸಿಬಿ ಬಲೆಗೆ

0
162

ಬೆಂಗಳೂರು (ಮಹದೇವಪುರ): ಲಂಚ ಪಡೆಯುತ್ತಿದ್ದ ವೇಳೆ ಬೆಸ್ಕಾಂ ಇಂಜಿನಿಯರ್ ಎಸಿಬಿ ಬಲೆಗೆ ಬಿದ್ದಿದ್ದಾರೆ. ಬೆಸ್ಕಾಂನ ಕೊರಮಂಗಲದ ಡಿವಿಷನ್ ನಾಗರಾಜ್ ಎಸಿಬಿ ಬಲೆಗೆ ಬಿದ್ದ ಸಹಾಯಕ ಇಂಜಿನಿಯರ್.

ಮಾರತ್ತಹಳ್ಳಿಯ ಆನಂದನಗರದ ಸಮೀಪ ವಿದ್ಯುತ್ ಕಂಬ ಹಾಗು ಲೈನ್ ಬದಲಿಸಲು ಗುತ್ತಿಗೆದಾರ ಪ್ರವೀಣ್ ಎಂಬುವರ ಬಳಿ 3ಲಕ್ಷಕ್ಕೆ ಬೇಡಿಕೆ ಇಟ್ಟಿದ್ದು 1.75 ಸಾವಿರಕ್ಕೆ ಮಾತುಕತೆಯಾಗಿದ್ದು. ನಂತರ ಈ ಸಂಬಂದ ಪ್ರವೀಣ್ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದಾರೆ ಇಂದು 80 ಸಾವಿರ ಪಡೆಯುವ ವೇಳೆ ಐದು ಜನ ಎಸಿಬಿ ಅಧಿಕಾರಿಗಳ ತಂಡ ಬೆಸ್ಕಾಂ ಇಂಜಿನಿಯರ್‍ನನ್ನು ಬಂಧಿಸಿದ್ದಾರೆ. ಆರೋಪಿಯನ್ನು ಆರೋಗ್ಯ ತಪಾಸಣೆಗೊಳಪಡಿಸಿ ನಂತರ ವಿಚಾರಣಗೆ ಒಳಪಡಿಸಿದ್ದಾರೆ.

LEAVE A REPLY

Please enter your comment!
Please enter your name here