ಬೆಸ್ಕಾಂ ಕಚೇರಿಗೆ ರೈತರಿಂದ ಮುತ್ತಿಗೆ…

0
121

ಚಿಕ್ಕಬಳ್ಳಾಪುರ / ಶಿಡ್ಲಘಟ್ಟ : ಬೆಸ್ಕಾಂ ಉಪ ವಿದ್ಯುತ್ ವಿತರಣಾ ಕೇಂದ್ರಕ್ಕೆ ನೂರಾರು ರೈತರು ಮುತ್ತಿಗೆ ಹಾಕಿ ನ್ಯಾಯಾಲಯ ಉಲ್ಲಂಘನೆ ಮಾಡಿತ್ತಿರುವ ಅಧಿಕಾರಿಗಳ ವಿರುದ್ದ ಘೋಷಣೆ ಕೂಗಿ ಪ್ರತಿದಿನ 8 ಗಂಟೆಗಳ ಕಾಲ ವಿದ್ಯುತ್ ರೈತರಿಗೆ ನೀಡಬೇಕೆಂದು ಒತ್ತಾಯಿಸಿ ವೈ.ಹುಣಸೇನಹಳ್ಳಿ ಬೆಸ್ಕಾಂ ಕಛೇರಿ ಬಳಿ ಚಿಂತಾಮಣಿ ಹಾಗೂ ಶಿಡ್ಲಘಟ್ಟ ತಾಲ್ಲೂಕಿನ ರೈತರು ಪ್ರತಿಭಟನೆ ನಡೆಸಿದರು.

ಕೋಲಾರ ಬೆಸ್ಕಾಂ ಸುಪರಿಡೆಂಟ್ ಇಂಜಿನಿಯರ್ ಚೌಡಪ್ಪ, ಎಕ್ಸಕ್ಯೋಟಿವ್ ಇಂಜಿನಿಯರ್ ದತ್ತಾತ್ರೆಯ ಪಾಟೀಲ್ , ಶಿಡ್ಲಘಟ್ಟ ಇಇ ಅನ್ಸರ್ ಪಾಷಾ,ಎಡಬಲ್ಇ ನಾರಾಯಣಸ್ವಾಮಿ, ಶ್ರೀನಿವಾಸ್ ಮುಂತಾದ ಅಧಿಕಾರಿಗಳನ್ನು ಪ್ರತಿಭಟನೆಯಲ್ಲಿ ರೈತರು ತೀವ್ರ ತರಾಟೆಗೆ ತೆಗೆದುಕೊಂಡರು.

ಪ್ರತಿಭಟನೆಯಲ್ಲಿ ಪಶುಭಾಗ್ಯ ನಿರ್ದೇಶಕ ಆಜಿಂನೇಯ ರೆಡ್ಡಿ,‌ ಮಾನವ ಹಕ್ಕು ಆಯೋಗ ಜಿಲ್ಲಾದ್ಯಕ್ಷ ಕೆಂಪರೆಡ್ಡಿ, ಮಡಿವಾಳ ಸಂಘದ ಅದ್ಯಕ್ಷ ವೆಂಕಟಾಚಲಪತಿ, ಹಾಲು ನಾರಾಯಣ ಸ್ವಾಮಿ, ಮಂಜುನಾಥ್, ವೆಂಕಟಸ್ವಾಮಿ ರೆಡ್ಡಿ, ಶಿವಾನಂದ, ಸುಭ್ರಮಣಿ, ಹಾಗೂ ಹಲವಾರು ರೈತರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here