ಬೈಕ್ ಗೆ ಬಸ್ ಡಿಕ್ಕಿ ಸವಾರ ಸಾವು

0
307

ಬೈಕ್ ಗೆ ಬಸ್ ಡಿಕ್ಕಿ ಸವಾರ ಸಾವು, ಇನ್ನೊರ್ವನಿಗೆ ಗಾಯ. ಸಾರ್ವಜನಿಕರಿಂದ ಬಸ್ ಗೆ ಕಲ್ಲು ಗಾಜು ಪುಡಿಪುಡಿ.

ಕೊಪ್ಪಳ :ಬೈಕ್ ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಸವಾರನೊರ್ವನು ಸ್ಥಳದಲ್ಲೆ ಸಾವನಪ್ಪಿ ಇನ್ನೊರ್ವನಿಗೆ ಸಣ್ಣ ಪುಟ್ಟ ಗಾಯಗಳಾದ ಘಟನೆ ಕೊಪ್ಪಳ ನಗರದಲ್ಲಿ ನಡೆದಿದೆ. ನಗರದ ಗಡಿಯಾರ ಕಂಬದ ಬಳಿ ಈ ಘಟನೆ ನಡೆದಿದ್ದು
ರಿಯಾಜ್ (19) ಬೈಕ್ ಸವಾರ ಸ್ಥಳದಲ್ಲೆ ಸಾವನಪ್ಪಿದ್ದಾನೆ. ಇನ್ನೊರ್ವ ಬೈಕ್ ಸವಾರ ಅಜಮೀರ್ ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಅಪಘಾತ ವಾದ ಬಳಿಕ
ಬಸ್ ಸ್ಥಳದಲ್ಲಿಯೇ ಬಿಟ್ಟು ಚಾಲಕ ಹಾಗೂ ನಿರ್ವಾಹಕ ನೇರವಾಗಿ ಪೋಲಿಸ್ ಠಾಣೆಗೆ ಹೊಗಿ ಶರಣಾಗಿದ್ದಾರೆ. ಈ ಬಸ್ಸು ಕೊಪ್ಪಳದಿಂದ ಗೊಂಡಬಾಳ ಕಡೆ ಹೊರಟಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ಇನ್ನು ಅಲ್ಲೆ ಸ್ಥಳದಲ್ಲಿದ್ದ ಜನರು ರೊಚ್ಚಿಗೆದ್ದು ಬಸ್ ಗೆ ಕಲ್ಲು ತೂರಾಟ ಮಾಡಿ ಬಸ್ ಗಾಜುಗಳನ್ನು ಸಂಪೂರ್ಣವಾಗಿ ಪುಡಿಪುಡಿಗೊಳಿಸಿದ್ದಾರೆ. ಇನ್ನು ಕಪಾಲಿ ಬಡಾವಣೆಯಿಂದ ದಿಡ್ಡಿಕೇರಿ ಬಡಾವಣೆಗೆ ಈ ಬೈಕ್ ಸವಾರರು ಹೊರಟಿದ್ದರು ಎನ್ನಲಾಗುತ್ತಿದೆ. ಈ ಕುರಿತು ಕೊಪ್ಪಳ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ…

ಬೈಟ್ : ಅಜಮೀರ್ , ಬೈಕ್ ಸವಾರ ಗಾಯಗೊಂಡವ

LEAVE A REPLY

Please enter your comment!
Please enter your name here