ಬೈಕ್ ಮೇಲೆ ಮಗುಚಿ ಬಿದ್ದ ಕಂಟೈನರ್….!?

0
119

ಬೆಂಗಳೂರು ಗ್ರಾಮಾಂತರ/ ದೊಡ್ಡಬಳ್ಳಾಪುರ: ತಾಲ್ಲೂಕಿನ ದೊಡ್ಡ ಬೆಳವಂಗಲ ವ್ಯಾಪ್ತಿಯಲ್ಲಿ ನಡೆದ ಅಪಘಾತ.ಕಂಟೈನರ್ ಅಡಿ ಸಿಲುಕಿ ಇಬ್ಬರು ಬೈಕ್ ಸವಾರರ ದುರ್ಮರಣ ಹೊಂದಿದ ಘಟನೆ ನಡೆದಿದೆ.

ಚಿಕ್ಕಬೆಳವಂಗಲದ ರಾ.ಹೆ ರ 207 ಬಳಿ ಘಟನೆ ಸಂಭವಿಸಿದ್ದು,ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ದೊಡ್ಡಬೆಳವಂಗಲ ಪೊಲೀಸರು. ಹದಗೆಟ್ಟ ರಸ್ತೆಯ ದುಸ್ಥಿತಿ ಯಿಂದ ಘಟನೆ.ಬುಲೆಟ್ ಗಾಡಿಯಲ್ಲಿ ತೆರಳುತ್ತಿದ್ದ ಬೈಕ್ ಸವಾರನ ಮೇಲೆ ಮುಗುಚಿ ಬಿದ್ದ ಕಂಟೈನರ್. ಕೆಳಗೆ ಸಿಲುಕಿದ್ದ ಬೈಕ್ ಸವಾರ ವಿಜಯಕುಮಾರ್ ( 40) ಸಾವು

ಅರ್ಧಕ್ಕೆ ನಿಂತ ಕಾಮಾಗಾರಿಯಿಂದ ಸರಣಿ ಅಪಘಾತಗಳು ಸಂಭವಿಸುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿತ್ತಿರುವ ಸಾರ್ವಜನಿಕರು. ವರ್ಷಗಳು ಕಳೆದರೂ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತ ಕಾರಣ ಪದೇ ಪದೇ ಸಂಭವಿಸುತ್ತಿರುವ ಅಪಘಾತಗಳಿಗೆ ಜನಸಾಮಾನ್ಯರ ಬಲಿ. ಕೂಡಲೇ ರಸ್ತೆ ಸರಿಪಡಿಸುವಂತೆ ಸಾರ್ವಜನಿಕರ ಒತ್ತಾಯ.ನಿರ್ಲಕ್ಷ್ಯ ವಹಿಸಿದರೆ ರಸ್ತೆತಡೆದು ಉಗ್ರಹೋರಾಟ ಮಾಡುವುದಾಗಿ ಸ್ಥಳೀಯರಿಂದ ಎಚ್ಚರಿಕೆ.
ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

LEAVE A REPLY

Please enter your comment!
Please enter your name here