ಬ್ರಹ್ಮರಥೋತ್ಸವ

0
209

ಚಿಕ್ಕಬಳ್ಳಾಪುರ/ಕೈವಾರ: ಹೋಬಳಿಯ ಅಟ್ಟೂರು ಗ್ರಾಮದಲ್ಲಿ ಲಕ್ಷ್ಮಿನರಸಿಂಹಸ್ವಾಮಿ  ಬ್ರಹ್ಮ ರಥೋತ್ಸವವು ಪೂಜಾ ಕಾಯ೯ಗಳೊಂದಿಗೆ ಭಕ್ತಿ ಪ್ರಧಾನ ಸಡಗರ ಸಂಭ್ರಮದಿಂದ ನೆರವೇರಿತು.

ಇತಿಹಾಸ ಪ್ರಸಿದ್ದವಾದ ಲಕ್ಷ್ಮಿನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಮತ್ತು ಎರಡು ದಿನಗಳ ಜಾತ್ರೆ ಅಂಗವಾಗಿ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ದೇವಾಲಯದಲ್ಲಿ ವಿಶೇಷ ಅಲಂಕಾರ ಹಾಗೂ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ರಥೋತ್ಸವದ ಅಂಗವಾಗಿ ಆಗಮಿಸಿದ್ದ ಭಕ್ತರಿಗೆ ಸುತ್ತಮುತ್ತಲಿನ ಗ್ರಾಮಗಳ ಜನರು ಪಾನಕ, ಮಜ್ಜಿಗೆ, ಕೋಸಂಬರಿಯನ್ನು ವಿತರಿಸಿದರು.

ತಮಟೆವಾದ್ಯ, ವೀರಗಾಸೆ ನೃತ್ಯ, ಕೋಲಾಟ, ಭಜನಾ ತಂಡಗಳು, ಡೊಳ್ಳುಕುಣಿತ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜನತೆಗೆ ಮನರಂಜನೆ ನೀಡಿದವು.

ಉತ್ಸವಮೂರ್ತಿಯನ್ನು ಮಂಗಳವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ತಂದು ಅಲಂಕೃತವಾಗಿ ಮೆರವಣಿಗೆ ಮಾಡುವ ಮೂಲಕ ಚಾಲನೆ ನೀಡಲಾಯಿತು

ವಿವಿಧ ಬಗೆಯ ತಿಂಡಿ ತಿನುಸುಗಳ ಅಂಗಡಿ ಮತ್ತು ಇತರೆ ಆಟಿಕೆ ಸಾಮಾನುಗಳ ಅಂಗಡಿಗಳು ವಿಶೇಷವಾಗಿತ್ತು. ಸಾವಿರಾರು ಜನ ಭಕ್ತರು ರಥವನ್ನು ಎಳೆದು ಸಂತಸಪಟ್ಟರು.

LEAVE A REPLY

Please enter your comment!
Please enter your name here