ಬ್ಲೇಡ್ ಕಂಪೆನಿ ಯಿಂದ ಸಾರ್ವಜನಿಕರಿಗೆ ವಂಚನೆ..?

0
553

ಚಿಕ್ಕಬಳ್ಳಾಪುರ/ಚಿಂತಾಮಣಿ: ಅರ್ಧ ಬೆಲೆಗೆ ಗೃಹೋಪಯೋಗಿ ವಸ್ತುಗಳನ್ನು ನೀಡುವುದಾಗಿ ಹೇಳಿ ಜನರಿಂದ ಲಕ್ಷಾಂತರ ಮುಂಗಡ ಹಣವನ್ನುಪಡೆದ ಬ್ಲೇಡ್ ಕಂಪೆನಿಯವರು ರಾತ್ರೋರಾತ್ರಿ ಪರಾರಿಯಾಗಿರುವ ಘಟನೆ ನಗರದ ಬಾಗೇಪಲ್ಲಿ ವೃತ್ತದಲ್ಲಿ ನಡೆದಿದೆ.

ವಂಚಕರು ತಮಿಳುನಾಡು ಮೂಲದವರೆಂದು ಜಯಂ ಟ್ರೇಡರ್ಸ್ ಹೆಸರಿನಲ್ಲಿ ಅಂಗಡಿ ತೆರೆದಿದ್ದರು ರಮೇಶ್ ಎಂಬುವನೇ ಅಂಗಡಿಯ ಮಾಲಿಕ ಎಂದು ತಿಳಿದು ಬಂದಿದೆ.

ಇಂತಹ ಅಂಗಡಿಗಳವರು ವಾಷಿಂಗ್ ಮೆಷಿನ್, ಟಿವಿ, ಫ್ರಿಡ್ಜ್ ,ಫ್ಯಾನ್ ,ಮಿಕ್ಸಿ ,ಮಲಗುವ ಮಂಚಗಳು, ಡೈವಿಂಗ್ ಟೇಬಲ್ , ಗ್ರೈಂಡರ್ , ಸೇರಿದಂತೆ ನಾನಾ ಕಂಪನಿಗಳು ಇತರೆ ಗೃಹೋಪಯೋಗಿ ವಸ್ತುಗಳನ್ನು ಅರ್ಧಬೆಲೆಗೆ ಮಾರಾಟ ಮಾಡುತ್ತಿದ್ದು,ವಸ್ತುಗಳಿಗೆ ಅರ್ಧ ಹಣವನ್ನು ಪಾವತಿ ಮಾಡಿದ 15 ದಿನಗಳ ನಂತರ ವಸ್ತುಗಳನ್ನು ನೀಡುವುದಾಗಿ ಆಸೆ ಹುಟ್ಟಿಸಿ, ನಾವು ಜಿಎಸ್ ಟಿ ಸಂಖ್ಯೆ ,ನಗರಸಭೆಯಿಂದ ಪರವಾನಿಗೆ ಮತ್ತು ಟಿನ್ ನಂ ಪಡೆದು ಕೊಂಡಿ ರುವುದಾಗಿ ತಿಳಿಸಿ ಆ ದಾಖಲೆ ಗಳನ್ನು ತೋರಿಸಿ ನಂಬಿಕೆ ಹುಟ್ಟಿಸಿ ಹೆಚ್ಚಿನ ಗ್ರಾಹಕರನ್ನು ಸೆಳೆದಿರುವುದಾಗಿ ವಂಚನೆಗೊಳಗಾದವರು ತಮ್ಮಾಅಳಲನ್ನು ತೋಡಿಕೊಂಡಿದ್ದಾರೆ. ಈ ರೀತಿ ದಿಢೀರ್ ಅಂಗಡಿಗೆ ಬೀಗ ಹಾಕಿ ರಾತ್ರೋರಾತ್ರಿ ಪರಾರಿ ಆಗುತ್ತಾರೆ ಎಂದು ತಿಳಿದಿದ್ದರೆ ನಾವು ದುಡ್ಡೇ ಕಟ್ಟುತ್ತಿರಲಿಲ್ಲ ಎಂದು ವಂಚಕರಿಗೆ ಸಾವಿರಾರುರೂಗಳನ್ನು ನೀಡಿದ ಅಮಾಯಕರು ತಮ್ಮ ನೋವನ್ನು ತೋಡಿ ಕೊಂಡಿದ್ದಾರೆ.

ನಗರದ ಕೆಲ ವ್ಯಾಪಾರಸ್ಥರು ಭಾನುವಾರ ಸಂಜೆ ಈ ಅಂಗಡಿಗೆ ಭೇಟಿ ನೀಡಿ, ಅರ್ಧ ಬೆಲೆಗೆ ವಸ್ತು ಗಳ ಮಾರಾಟ ಮಾಡುವುದರ ಬಗ್ಗೆ ಪ್ರಶ್ನಿಸಿದಲ್ಲದೆ ಜಿಎಸ್ ಟಿ ಸಂಖ್ಯೆ ಪಡೆದು ತಪಾಸಣೆಗೆ ನಡೆಸಿದಾಗ ಅದು ನಕಲಿ ಎಂಬುದು ತಿಳಿದಿದೆ.ಬಳಿಕ ಖರೀದಿ ಮಾಡಿರುವ ವಸ್ತುಗಳು ಬಿಲ್ ತೋರಿಸುವಂತೆ ಕೋರಿದಾಗ ಅವು ತೋರಿಸದೆ ವಂಚಕರು ಅಂಗಡಿ ಬಂದ್ ಮಾಡಿ ರಾತ್ರೋರಾತ್ರಿ ಊರುಬಿಟ್ಟಿದ್ದಾರೆ.

ವಿಷಯ ತಿಳಿದು ವಂಚನೆಗೊಳಗಾದವರೆಲ್ಲಾ ಅಂಗಡಿ ಮುಂದೇ ಜಮಾಯಿಸುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಅಂಗಡಿ ಮಳಿಗೆಯನ್ನು ಕಾನೂನು ರೀತಿ ಮಾಜರು ಮಾಡಿ ಸೀಜ್ಮಾಡಿದ್ದಾರಂತೆ.

ಕೇವಲ ವಂಚನೆ ಮಾಡಲೆಂದೆ ಇಂತಹ ಅರ್ಧಬೆಲೆಯ ವ್ಯಾಪಾರಕ್ಕೆ ನಮ್ಮರಾಜ್ಯಕ್ಕೆ ಬಂದು ಪದೇಪದೇ ಮುಗ್ದರನ್ನು ವಂಚಿಸುವ ಇಂಥಹ ಮೋಸಗಾರರಿಂದ ಅಡ್ಡದಾರಿಯಲ್ಲಿ ಹಣ ಪಡೆದು ಪೂರ್ವಾಪರ ತಿಳಿಯದೆ ವಾಣಿಜ್ಯಪರವಾನಗಿ ನೀಡಿರುವ ನಗರಸಭೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತಾಗಲಿ ಮತ್ತು ಪೊಲೀಸರಿಗೆ ಈವಂಚಕರ ವಂಚನೆಯ ಬಗ್ಗೆ ಸಾರ್ವಜನಿಕವಲಯ ಮತ್ತು ಮಾದ್ಯಮದವರಿಂದ ಸುಳಿವಿತ್ತಾದರೂ ಯಾವುದೋ ಅಮಿಷಕ್ಕೆ ಒಳಗಾಗಿ ವಂಚಕರವಿರುದ್ದ ಕ್ರಮಕ್ಕೆ ಮುಂದಾಗಿರಲಿಲ್ಲ ಎಂದು ಆರೋಪ ಕೇಳಿಬರುತಿದ್ದು ಆರೋಪವೇನೂ ತೆಗೆದು ಹಾಕುವಂತದಲ್ಲವಾದ್ದರಿಂದ ಸಂಬಂಧ ಪಟ್ಟ ಮೇಲಧಿಕಾರಿಗಳು ತನಿಖೆ ನಡೆಸಿ ವಂಚಕರಿಗೆ ಸಹಕರಿಸಿದವರ ವಿರುದ್ಧ ಸೂಕ್ತ ಕ್ರಮ ಜರುಗಿಸಲೇ ಬೇಕಿದೆ‌

LEAVE A REPLY

Please enter your comment!
Please enter your name here