ಭಗವಾನ್ ಶ್ರೀ ಮಹಾವೀರರ ಜಯಂತೋತ್ಸವ

0
164

ಬೆಂಗಳೂರು/ಕೃಷ್ಣರಾಜಪುರ: ಗುಂಡ್ಲುಪೇಟೆ ಮತ್ತು ನಂಜನಗೂಡು ಉಪಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಗಳು ಖಚಿತವಾಗಿ ಗೆಲುವು ಸಾಧಿಸಲಿದ್ದಾರೆಂದು ಜೌಳಿ ಮತ್ತು ಮುಜರಾಯಿ ಇಲಾಖೆ ಸಚಿವ ರುದ್ರಪ್ಪ ಲಮಾಣಿ ತಿಳಿಸಿದರು.

ಇಲ್ಲಿನ ತಾಲ್ಲೂಕು ಕಛೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಭಗವಾನ್ ಶ್ರೀ ಮಹಾವೀರರ 2616 ನೇ ಜಯಂತಿ ಮಹೋತ್ಸವ.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಚಿವ ರುದ್ರಪ್ಪ ಲಮಾಣಿ ಜೈನ ಮತ್ತು ಬೌದ್ದ ಧರ್ಮಗಳು ಪುರಾತನವಾಗಿದ್ದು ಅಹಿಂಸೆಯೇ ಪರಮಧರ್ಮ ಎಂಬ ತತ್ವಗಳನ್ನು ಸಾರಿದೆ
34 ತೀರ್ಥಂಕರರಾದ ಶ್ರೀ ಮಹಾವೀರ ಜೈನರು ಧರ್ಮದ ಶ್ರೇಷ್ಠ ಗುರುಗಳಾಗಿದ್ದಾರೆ. ಜೀವಿಸು ಇತರರನ್ನು ಜೀವಿಸಲು ಬಿಡು ಎಂಬುದು ಈ ಧರ್ಮದ ಮೂಲ ತತ್ವವಾಗಿದೆ. ಸಮಾಜದಲ್ಲಿ ಶಾಂತಿ ನೆಲೆಸುವ ಸಲುವಾಗಿ ಮತ್ತು ಜಾತಿ ವ್ಯವಸ್ಥೆ ಪ್ರಾಣಿ ಬಲಿಯಿಂದ ಸಮಾಜವನ್ನು ಮುಕ್ತಗೊಳಿಸಲು ಉಗಮವಾಗಿದ್ದು ಶ್ರೀ ಮಹಾವೀರ ಜೈನರ ತತ್ವ ಪಾಲನೆ ಸಮಾಜವನ್ನು ಶಾಂತಿಧಾಮವನ್ನಾಗಿಸಲು ಉಪಕಾರಿಯಾಗಲಿದೆ ಎಂದರು.
ಶಾಸಕ ಬೈರತಿ ಬಸವರಾಜು ಮಾತನಾಡಿ ಕಆರ್ ಪುರದಲ್ಲಿ ಜೈನ ಸಮೂದಾಯ ಧರ್ಮ ಮಂದಿರಕ್ಕೆ ಎಂದು 8 ಗುಂಟೆ ಸ್ಥಳವನ್ನು ಕೊಡಲು ತೀರ್ಮಾನಿಸಿದ್ದು ಸ್ಥಳ ಗುರುತಿಸಲು ತಹಶೀಲ್ದಾರ್ ತೇಜಸ್ ಕುಮಾರ್ ರವರಿಗೆ ಸೂಚಿಸಲಾಗಿದೆ ಎಂದರು. ಸಮಾಜದಲ್ಲಿ ಸರ್ವ ಧರ್ಮಗಳು ಸಮಾನವೆಂದು ಹೇಳಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ತೇಜಸ್ ಕುಮಾರ್, ವರ್ಧಮಾನ ಸಂಘದ ಅಧ್ಯಕ್ಷ ಮೋತಿಲಾಲ್, ಪದ್ಮರಾಜು, ಅಶೋಕ್ ಸೇರಿದಂತೆ ಮತ್ತಿತರರಿದ್ದರು.

LEAVE A REPLY

Please enter your comment!
Please enter your name here