ಭಗೀರಥ ಜಯಂತಿ

0
161

ಬಳ್ಳಾರಿ / ಹೊಸಪೇಟೆ :ಭಗೀರಥ ಮಹರ್ಷಿ ಗಂಗೆಯನ್ನು ಧರೆಗೆ ತಂದ ಮಹಾನ್ ಪುರುಷ. ಉಪ್ಪಾರ ಜನಾಂಗದ ಮೂಲ ಪುರಷ ಭಗೀರಥ ಮಹರ್ಷಿ ಎಂದು ನಗರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಟಿ.ಮಂಜುನಾಥ ಹೇಳಿದರು. ನಗರದ ತಾಲೂಕು ಕಚೇರಿಯ ಪತ್ರಿಕಾಭವನದಲ್ಲಿ ತಾಲೂಕು ಆಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ತಾಲೂಕು ಉಪ್ಪಾರ ಸಮುದಾಯ ಜಂಟಿಯಾಗಿ ಮಂಗಳವಾರ ಅಯೋಜಿಸಿದ್ದ ಭಗೀರಥ ಮಹರ್ಷಿಗಳ ಜಯಂತಿಯಲ್ಲಿ ಉಪನ್ಯಾಸದಲ್ಲಿ ಮಾತನಾಡಿದರು.

ಭಗೀರಥ ಮಹರ್ಷಿರವರು ಕಠಿಣ ತಪ್ಪಸ್ಸಿಗ್ಗೆ ಮೆಚ್ಚಿ ಗಂಗೆ ಭೂಮಿಗೆ ಬರುತ್ತಾಳೆ. ಭಗೀರಥ ಸಾಧನೆಗೆ ಸರಿಸಾಟಿಯಿಲ್ಲ. ಧೈರ್ಯ, ಛಲ, ಸತತ ಪ್ರಯತ್ನದಿಂದ ಸಾಧಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಅದು ಎಲ್ಲರಿಗೂ ಸ್ಪೂರ್ತಿದಾಯಕವಾಗಿದೆ. ಭೂಮಿಯಲ್ಲಿ ನೀರಿನ ಕೊರತೆ ಇದ್ದು, ಎಲ್ಲರೂ ಮಿತವಾಗಿ ಬಳಸಬೇಕು. ಉಪ್ಪಾರ ಜನಾಂಗದವರನ್ನು ವಿವಿಧ ಹೆಸರುಗಳಿಂದ ಕರೆಯುತ್ತಾರೆ ಎಂದು. ಗ್ರೇಡ್-2 ತಹಸೀಲ್ದಾರ್ ಎಂ.ರೇಣುಕಾ ಉದ್ಘಾಟಿಸಿದರು. ತಾಲೂಕು ಉಪ್ಪಾರ ಸಂಘಧ ಅಧ್ಯಕ್ಷ ಯು.ಅಶ್ವಥಪ್ಪ, ಮುಖಂಡರಾದ ವೆಂಕಟೇಶ, ಯು.ಆಂಜನೇಯಲು, ವೈ.ಯಮುನೇಶ ಸೇರಿ ಇತರರು ಇದ್ದರು.

LEAVE A REPLY

Please enter your comment!
Please enter your name here