ಭಗೀರಥ ಜಯಂತೋತ್ಸವ

0
159

ಬೆಂಗಳೂರು ಗ್ರಾಮಾಂತರ/ದೊಡ್ಡಬಳ್ಳಾಪುರ: ನಗರದ ತಾಲ್ಲೂಕು ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿವತಿಯಿಂದ ಭಗೀರಥ ಜಯಂತೋತ್ಸವವನ್ನು ಬಾವಚಿತ್ರಕ್ಕೆ ಪೂಜೆಸಲ್ಲಿಸಿ ಸಿಹಿಹಂಚಿ ಸರಳವಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ತಾಲ್ಲೂಕು ಭಗೀರಥ ಉಪ್ಪಾರ ಸಂಘದ ಆಧ್ಯಕ್ಷ ಪಿ ಎಂ.ಪ್ರಕಾಶ್ ಕುಮಾರ್ ಮಾತನಾಡುತ್ತಾ ಮೊದಲನೆಯದಾಗಿ ನಮ್ಮಭಗೀರಥ ಉಪ್ಪಾರ ಸಮುದಾಯದ ವತಿಯಿಂದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಕೃತಜ್ಞತೆ ಸಲ್ಲಿಸ ಬೇಕಾಗುತ್ತದೆ ಕಾರಣ ರಾಜ್ಯದ ವಿವಿಧ ಭಾಗಗಳಲ್ಲಿ ಅಲ್ಪಸಂಖ್ಯಾತರಲ್ಲಿ ಅಲ್ಸಸಂಖ್ಯಾತರಂತೆ ಹೆಚ್ಚಿನದಾಗಿ ಕೂಲಿ ಕಾರ್ಮಿಕರಾಗಿ ವಾಸಿಸುತ್ತಿರುವ ನಮ್ಮ ಸಮುದಾಯ ದವರನ್ನು ಗುರುತಿಸಿ, ನಮ್ಮ ಉಪ್ಪಾರ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಸಮುದಾಯದ ಮೂಲಪುರುಷ ಶ್ರೀಭಗೀರಥ ಮಹರ್ಷಿಗಳ ಜಯಂತೋತ್ಸವವನ್ನು ಸರ್ಕಾರದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಗೆ ಸೇರಿಸಿ ಆಡಳಿತದ ವತಿಯಿಂದ ಜಯಂತೋತ್ಸವನ್ನು ಆಚರಿಸಿತ್ತಿರುವುದು ಸಂತಸ ತಂದಿದೆ ಎಂದರು.ಘನ ಸರ್ಕಾರದಿಂದ ಶೈಕ್ಷಣಿಕ, ಆರ್ಥಿಕವಾಗಿ,ಹಾಗೂ ರಾಜಕೀಯವಾಗಿ ಹಿಂದುಳಿದಿರುವ ಉಪ್ಪಾರ ಸಮುದಾಯದ ಏಳ್ಗೆಗೆ ಪೂರಕವಾಗುವಂತಹ ಯೋಜನೆಗಳನ್ನು ರೂಪಿಸುವಂತಹ ಕಾರ್ಯ ಆಗಬೇಕಿದೆ ಎಂದರು.ಸ್ಥಳೀಯವಾಗಿ ಸಮುದಾಯ ಭವನಕ್ಕೆ ನಿವೇಶನದ ಅವಶ್ಯಕತೆ ಇದ್ದು ಮಾನ್ಯ ತಹಶಿಲ್ದಾರರ ಗಮನಕ್ಕೆ ತಂದು ಮನವಿಯನ್ನು ನೀಡಿದ್ದೇವೆ ದಯವಿಟ್ಟು ಮುಂದಿನ ಭಗೀರಥ ಜಯಂತೋತ್ಸವದ ವೇಳೆಗಾದರೂ ನಮಗೆ ಸಮುದಾಯ ಭವನ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ತಹಶಿಲ್ದಾರ್ ಮೋಹನ್ ಕುಮಾರ್,ಬಿಇಒ,ಹನುಮಂತಪ್ಪ,ಮತ್ತು ನಗರಸಭಾ ಅಧ್ಯಕ್ಷ ಕೆಬಿ.ಮುದ್ದಪ್ಪ ಉಪಾಧ್ಯಕ್ಷೆ ಜಯಲಕ್ಷ್ಮಿ, ತಾಲ್ಲೂಕು ಭಗೀರಥ ಉಪ್ಪಾರ ಸಂಘದ ಗೌರವಾಧ್ಯಕ್ಷ ಕೃಷ್ಣಪ್ಪ,ಕಾರ್ಯದರ್ಶಿ ನಾರಾಯಣಪ್ಪ, ಸಹಕಾರ್ಯದರ್ಶಿ ಚಂದ್ರಶೇಖರ್. ಡಿ.ಉಪ್ಪಾರ್. ಖಜಾಂಚಿ ಡಿಕೆ.ಉಮೇಶ್ ಸೇರಿದಂತೆ ಪದಾಧಿಕಾರಿಗಳು ಸೇರಿದಂತೆ ಸಮುದಾಯದ ಮುಖಂಡರು, ಸಂಘಟನೆಗಳ ಮುಖಂಡರು, ರಾಜಕೀಯಮುಖಂಡರನೇಕರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here