ಭಗ್ನ ಪ್ರೇಮಿಯ ಹುಚ್ಚುತನಕ್ಕೆ ಬಲಿಯಾದ ಬಡಪಾಯಿ ಹುಡುಗಿ..

0
103

ಪೊಲೀಸರ ನಿರ್ಲಕ್ಷ್ಯಕ್ಕೆ ಭವಿಷ್ಯದ ಉಜ್ವಲ ಬದುಕು ಕಂಡಿದ್ದ ಬಾಲೆಯ ಬರ್ಬರ ಕೊಲೆ- ಭಗ್ನ ಪ್ರೇಮಿಯ ಹುಚ್ಚುತನಕ್ಕೆ ಬಲಿಯಾದ ಬಡಪಾಯಿ ಹುಡುಗಿ

ಬೆಂಗಳೂರು ಗ್ರಾಮಾಂತರ/ದೊಡ್ಡಬಳ್ಳಾಪುರ: ಆ ಬಾಲೆಗೆ ಪ್ರಪಂಚದ ಆಗುಹೋಗುಗಲೇ.. ಗೊತ್ತಿಲ್ಲ. ಆದರೆ ಪ್ರೇಮ ಪಾಶದ ಬಲೆ ಬೀಸಿದ ಭಗ್ನ ಪ್ರೇಮಿ, ತನ್ನುಡುಗಿ ಬೇರೆಯರವ ಜೊತೆ ಸಲುಗೆಯಿಂದ ಮಾತಾಡ್ತಿದ್ದಾಳೆಂದು ಮುನಿಸಿಕೊಂಡು ಮಚ್ಚಿನಿಂದ ಬರ್ಬರವಾಗಿ ಕೊಚ್ಚಿ ಹಾಕಿದ್ದಾನೆ. ಪುಟ್ಪಾತ್ ನಲ್ಲಿ ಜೀವನ ಕಂಡುಕೊಂಡಿದ್ದ ಬಡಜೀವಗಳ ಕರುಳಕುಡಿಯೊಂದು ಕಳಚಿಬಿದ್ದಿದ್ದು, ಪೊಲೀಸರ ನಿರ್ಲಕ್ಷ್ಯಕ್ಕೆ ಬಡ ಕುಟುಂಬ ನೋವಿನಲ್ಲಿ ನರಳುವಂತಾಗಿದೆ…..

ಬರ್ಬರವಾಗಿ ಕೊಲೆಯಾಗಿ ರಕ್ತದ ಮಡುವಿನಲ್ಲಿ‌ ಬಿದ್ದಿರುವ ಬಾಲಕಿ ಹೆಸರು ಕೀರ್ತನಾ ಅಂತ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರ ನಿವಾಸಿಯಾಗಿರುವ ಕೀರ್ತನಾ, ಹುಟ್ಟು ಬಡತನದಲ್ಲೇ ಬೆಳೆದರೂ, ನಾಲ್ಕಕ್ಷರ ಕಲಿತು ಹೆತ್ತವರಿಗೆ ಹೆಗಲಾಗಬೇಕೆಂಬ ಆಸೆ ಹೊಂದಿದ್ದವಳು. ಆದರೆ ತನ್ನ ಅಕ್ಕನ ಗಂಡನ ಸೋದರನ ಪ್ರೇಮ ಪಾಶಕ್ಕೆ ಸಿಲುಕಿದ ಪರಿಣಾಮ ಇಂದು ಹೆಣವಾಗಿ ಬೀಳುವಂತಾಗಿದೆ.

ದೊಡ್ಡಬಳ್ಳಾಪುರದ ವಿನಾಯಕ ನಗರದ ಬಿಎಸ್ಎ ಶಾಲೆಯಲ್ಲಿ ಹತ್ತನೇ ತರಗತಿ ಓದ್ತಿದ್ದ ಕೀರ್ತನಾ
ಎಂದಿನಂತೆ ಶಾಲೆಗೆ ಹೋಗುತ್ತಿರಬೇಕಾದರೆ ಕೀರ್ತನಾಳನ್ನ ಹಿಂಬಾಳಿದ ಭಗ್ನ ಪ್ರೇಮಿ ನವೀನ್, ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿ ಬಳಿಕ ತಾನೂ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೀರ್ತನಾ ಬೇರೆ ಹುಡುಗರ ಜೊತೆ ಸಲುಗೆಯಿಂದ ಮಾತನಾಡುತ್ತಿದ್ದೇ ಹತ್ಯೆಗೆ ಕಾರಣ ಎಂದು ತಿಳಿದು ಬಂದಿದೆ. ಬೆಳ್ಳಂಬೆಳಿಗ್ಗೆ ನಡೆದ ಬಾಲಕಿ ಕೊಲೆ ದೊಡ್ಡಬಳ್ಳಾಪುರ ಜನತೆಯನ್ನ ಬೆಚ್ಚಿ ಬೀಳಿಸಿದೆ….

ಕೀರ್ತನಾಳ ಅಕ್ಕ ವೈಶಾಲಿ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನ ತೊಂಡೇಬಾವಿ ನಿವಾಸಿ ಪ್ರವೀಣ್ ಎಂಬುವರನ್ನ ಪ್ರೀತಿಸಿ ಮದುವೆಯಾಗಿದ್ದಳು. ಇದರಿಂದ ಪ್ರವೀಣನ ಸಹೋದರ ನವೀನ್ ಕೀರ್ತನಾಳ ಹಿಂದೆ ಬಿದ್ದಿದ್ದ. ಕೀರ್ತನಾಳ ಅಕ್ಕ ಅನ್ಯಜಾತಿಯವರನ್ನ ಮದುವೆಯಾಗಿದ್ದು, ಕೀರ್ತನಾ ಕೂಡ ಅನ್ಯ ಜಾತಿಯ ಮದುವೆ ಬೇಡ ಎಂಬ ಪೋಷಕರು ಈ ವಿಚಾರವಾಗಿ ಹಿಂದೆ ಗಲಾಟೆ ನಡೆದು, ಆರೋಪಿ ನವೀನ್ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿ ಕೀರ್ತನಾ ಪೋಷಕರು ದೊಡ್ಡಬಳ್ಳಾಪುರ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಪೊಲೀಸರ ನಿರ್ಲಕ್ಷ್ಯ ಕೀರ್ತನಾ ಸಾವಿಗೆ ಕಾರಣವಾಯಿತು ಅನ್ನೋ ವೇದನೆ ಮೃತಳ ಪೋಷಕರದು.

ಒಟ್ನಲ್ಲಿ ಏನೂ ಅರಿಯದ ಮುಗ್ದ ಬಾಲಕಿ ಪಾಗಲ್ ಪ್ರೇಮಿಯ ಹುಚ್ಚಾಟಕ್ಕೆ ಬಲಿಯಾಗಿದ್ದಂತೂ ವಿಪರ್ಯಾಸವೇ ಸರಿ. ಇನ್ನೂ ಕೀರ್ತನಾಳ ಬಡತನವನ್ನೇ ಬಂಡವಾಳ ಮಾಡಿಕೊಂಡ ಆರೋಪಿ ನವೀನ್ ಗೆ ತಕ್ಕ ಶಿಕ್ಷೆಯಾಗಬೇಕೆಂಬುದು ಸಾರ್ವಜನಿಕರ ಆಗ್ರಹ……

ಚಂದ್ರಶೇಖರ್.ಡಿ.ಉಪ್ಪಾರ್.ದೊಡ್ಡಬಳ್ಳಾಪುರ

LEAVE A REPLY

Please enter your comment!
Please enter your name here