ಭಾರಿ ಮಳೆಗೆ ನೀರಿನಲ್ಲಿ ‌ಮುಳುಗಿದ‌ ಸಾರಿಗೆ‌ ಬಸ್..!

0
482

ಬಳ್ಳಾರಿ:ಇಂದು ಸಂಜೆ ಧಾರಾಕಾರವಾಗಿ ಮಳೆ ಸುರಿದಿದೆ. ಸುಮಾರು ಎರಡು ಗಂಟೆಗಳ ಕಾಲ ಗುಡುಗು ಸಿಡಿಲಯ ಸಮೇತ ಸುರಿದ ಭಾರಿ ಮಳೆಗೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಹಬ್ಬದ ಸಂಭ್ರಮದಲ್ಲಿ‌ ಜನರು ಮಳೆಯಿಂದ ಬನ್ನ ವಿತರಣೆ ಮಾಡದಂತಹ ಪರಿಸ್ಥಿತಿ ಮಳೆ ತಂದಿಟ್ಟಿದೆ. ಸುಮಾರು ಎರಡು ಗಂಟೆಗಳ ಕಾಲ ಸುರಿದ ಮಳೆಯಿಂದ ನಗರದ ತಗ್ಗುಪ್ರದೇಶದ ಮನೆಗಳೆಲ್ಲಾ ನೀರಿನಿಂದ ಆವೃತಗೊಂಡರೇ ಮತ್ತೊಂದೆಡೆ ನಗರದ ಮಧ್ಯ ಭಾಗ್ಯದಲ್ಲಿರುವ ಎರಡು ಅಂಡರ್ ಬ್ರಿಜ್ಡ್ಗಳು ನೀರಿನಲ್ಲಿ ಮುಳಗಿಹೋಗಿವೆ. ಹೀಗಾಗಿ ಮರಳಿ ಡಿಪೋಗೆ ತೆರಳುತ್ತಿದ್ದ ಎರಡು ಸಾರಿಗೆ ಬಸ್ ಗಳು ಅಂಡರ್ ಬಿಡ್ಜ್ ನಲ್ಲಿ ಅರ್ಧಕರ್ಧ ನೀರಿನಲ್ಲಿ ಮುಳುಗಿ ಹೋಗಿವೆ. ಹೀಗಾಗಿ ನಗರದ ದುರ್ಗಮ್ಮ ರಸ್ತೆ. ಸತ್ಯ ನಾಯಾರಣ ಪೇಟೆ ರಸ್ತೆ ಗಳ ಸಂಚಾರ ಸಂಪೂರ್ಣ ಟ್ರಾಫಿಕ್ ಜಾಮ್ ಗೆ ಒಳಗಾಗಿ ಪ್ರಯಾಣಿಕರು ಪರದಾಡುವಂತಾಗಿದೆ.

LEAVE A REPLY

Please enter your comment!
Please enter your name here