ಭಾವೈಕ್ಯತಾ ಧರ್ಮಸಭೆ.

0
105

ವಿಜಯಪುರ/ದೇವರ ಹಿಪ್ಪರಗಿ:ತಾಲೂಕಿನ ಕಲಕೇರಿಯ ಶ್ರೀ ಗುರು ಮರುಳಾರಾದ್ಯಾ ಹಿರೇಮಠದಲ್ಲಿ 63 ನೇ ಶರಣರ ಚರಿತಾಮೃತಾ ಪ್ರವಚನದ ಮಹಾ ಮಂಗಲ ಹಾಗೂ ಬಾವೈಕ್ಯತಾ ಧಮ೯ಸಭೆ ನಡೆಯಿತು.ಹಿರೇಮಠದ ಶ್ರೀ ಷ. ಬ್ರ. ಸಿದ್ದರಾಮ ಶಿವಾಚಾಯ೯ರ ಅದ್ಯಕ್ಷತೆಯಲ್ಲಿ ಕಾಯ೯ಕ್ರಮ ನಡೆಯಿತು. ವೇದಿಕೆಯ ಸಾನಿದ್ಯ ವಹಿಸಿದ ದೇವದುಗ೯ ಶಿಖರಮಠದ ಶ್ರೀ ಕಪೀಲ ಸಿದ್ದರಾಮ ಶಿವಾಚಾಯ೯ರು ಮಾತನಾಡಿ ಮಾತೃ ಹೃದಯದ ಶ್ರೀ ಸಿದ್ದರಾಮ ಶಿವಾಚಾಯ೯ರನ್ನು ಪಡೆದ ಕಲಕೇರಿ ಗ್ರಾಮಸ್ಥರು ಪುಣ್ಯವಂತರು ಎಂದರು .ವೇದಿಕೆಯನ್ನುದ್ದೇಶಿಸಿ ಮಾತನಾಡಿದ ಚಾಣಕ್ಯಕರಿಯರ್ ಅಕಾಡಮಿ ಮುಖ್ಯಸ್ಥ ನಿಂಗನಗೌಡ ಬಿರಾದಾರ ಅವರು ಮಕ್ಕಳಿಗೆ ಶಿಕ್ಷಣ ನೀಡಿದರೆ ಸಾಲದು ಅವರ ಮನಸ್ಸಿನಲ್ಲಿ ಆದ್ಯಾತ್ಮದ ಅರಿವನ್ನು ಮೂಡಿಸಬೇಕು. ಆದ್ದರಿಂದ ಪಾಲಕರು ಮತ್ತು ಪೋಷಕರು ತಮ್ಮ ಮಕ್ಕಳನ್ನು ಚಿತ್ರ ಮಂದಿರಗಳಿಗೆ ಕರೆದುಕೊಂಡು ಹೊಗುವುದನ್ನು ಬಿಟ್ಟು ಇಂತಹ ಆದ್ಯಾತ್ಮಿಕ ಪ್ರವಚನ ಕಾಯ೯ಕ್ರಮಗಳಿಗೆ ಕರೆದುಕೊಂಡು ಹೋದರೆ ಮಾತ್ರ ಅವರನ್ನ ಸಮಾಜದಲ್ಲಿ ಉತ್ತಮ ನಾಗರಿಕನ್ನಾಗಿ ಮಾಡಲು ಸಾದ್ಯ ಎಂದರು. ವೇದಿಕೆಯ ದಿವ್ಯಾ ಸಾನಿದ್ಯವನ್ನು ಮಾಗಣಗೇರಿಯ ವಿಶ್ವರಾದ್ಯ ಶಿವಾಚಾಯ೯ರು ವಹಿಸಿದ್ದರು.ಇನ್ನು ವೇದಿಕೆಯ ಮೇಲೆ ಅಬಿನವ ಮುನಿಂದ್ರ ಶಿವಾಚಾಯ೯ರು, ಜವಳಕೂಟದ ಶಿವಾನಂದ ಶಿವಾಚಾಯ೯, ನಾವದಗಿ ಶ್ರೀಗಳು ಹಾಗೂ ಗಣ್ಯರು ಭಾಗವಹಿಸಿದ್ದರು. ಕಾಯ೯ಕ್ರಮದಲ್ಲಿ ಗ್ರಾಮದ ಸುತ್ತಮುತ್ತಲಿನ ನೂರಾರು ಭಕ್ತರು ಹಾಜರಿದ್ದರು.

ನಮ್ಮೂರು ಟಿವಿ ನಂದೀಶ ಹಿರೇಮಠ.

LEAVE A REPLY

Please enter your comment!
Please enter your name here