ಭೀಕರ ಕಾರು ಅಪಘಾತ

0
201

ಬಳ್ಳಾರಿ :ಭೀಕರ ಕಾರು ಅಪಘಾತ ದಿಂದಾಗಿ ಬಳ್ಳಾರಿಯ ಒಂದೇ ಕುಟುಂಬದ ನಾಲ್ವರ ದುರ್ಮರಣ ನಡೆದ ದಾರುಣ ಘಟನೆ ನಡೆದಿದೆ.
ವಿದ್ಯಾನಗರದ ಒಂದೇ ಕುಟುಂಬದ ನಾಲ್ವರು ನಿನ್ನೆ ಆಂಧ್ರದಲ್ಲಿ ಇರುವ ತಮ್ಮ ಗ್ರಾಮಕ್ಕೆ ತೆರಳಿ ವಾಪಸ್ಸು ಬರುತ್ತಿರುವಾಗ ಸಂಜೆ ಕಣೆಕಲ್ ಬಳಿಯ ಎರ್ರಗುಂಟ ಸಮೀಪ ಸಂಭವಿಸಿದ ಕಾರು ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ.
ಆಂಧ್ರ ಪ್ರದೇಶದ ಉರುವಕೊಂಡ ತಾಲೂಕಿನ ತಮ್ಮ ಮೂಲ ಗ್ರಾಮವಾದ ತಗ್ಗಪರ್ತಿ ಗ್ರಾಮದ ಸತ್ಯನಾರಾಯಣ ಕುಟುಂಬದೊಂದಿಗೆ ಕಳೆದ ಹಲವು ವರ್ಷಗಳಿಂದ ಬಳ್ಳಾರಿಯಲ್ಲೇ ನೆಲಸಿದ್ದರು. ತಮ್ಮ ಗ್ರಾಮಕ್ಕೆ ತೆರಳಿ ವಾಪಸ್ಸು ಬರುವಾಗ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಅಪ್ಪಳಿಸಿದೆ. ಅದರಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಕಾರು ಚಾಲನೆ ಮಾಡುತ್ತಿದ್ದ ಸತ್ಯನಾರಾಯಣ (26), ಆತನ ಪತ್ನಿ ಮಮತ (22), ತಾಯಿ ರಂಗಮ್ಮ (54) ಮತ್ತು ದೊಡ್ಡಪ್ಪ ಆದಿನಾರಾಯಣ ಸಾವನ್ನಪ್ಪಿದವರು ಎಂದು ತಿಳಿದು ಬಂದಿದೆ.

ಘಟನೆ ವಿಷಯ ತಿಳಿದು ಕುಟುಂದ ಸದಸ್ಯರು ಆಘಾತಗೊಂಡಿದ್ದಾರೆ. ಇತ್ತ ತಮ್ಮ ಬಳ್ಳಾರಿ ಮನೆಯಲ್ಲಿ ವರಮಹಾಲಕ್ಷ್ಮಿ ಪೂಜೆಗೆ ನಾರಾಯಣ ಅವರ ತಾಯಿ ಮತ್ತು ಪತ್ನಿ ಸಿದ್ಧತೆ ನಡೆಸಲು ಯೋಜಿಸಿದ್ದರು ಅಂತ ಸಂಬಂಧಿಗಳು ತಿಳಿಸಿದ್ದಾರೆ. ಆದ್ರೆ, ವಿಧಿ ಅವರನ್ನು ಈ ಮೂಲಕ ಸೆಳೆದುಕೊಂಡಿರುವುದು ವಿಪರ್ಯಾಸ.

LEAVE A REPLY

Please enter your comment!
Please enter your name here