ಭುಗಿಲೆದ್ದ ಭಿನ್ನಮತ…

0
142

ಚಾಮರಾಜನಗರ/ಕೊಳ್ಳೇಗಾಲ:ಪಟ್ಟಣದಲ್ಲಿ ಬಿಜೆಪಿ  ಪರಿವತ೯ನಾ ಯಾತ್ರೆ ಕಾಯ೯ಕ್ರಮ  ಪ್ರಾರಂಭಕ್ಕೂ ಮುನ್ನವೇ ಬಿಜೆಪಿ ಪಾಳೇಯದಲ್ಲಿ  ಗುಂಪುಗಾರಿಕೆ, ಭಿನ್ನಮತ  ಉದ್ಭವಿಸಿದ್ದು ಭಾನುವಾರ ಬೆಳಗ್ಗೆ ವೇದಿಕೆ ಮುಂಭಾಗದಲ್ಲಿ   ಕೊಳ್ಳೇಗಾಲ ಕ್ಷೇತ್ರದಿಂದ  ಪ್ರಭಲ ಟಿಕೇಟ್ ಆಕಾಂಕ್ಷಿಯಾಗಿದ್ದ ಚಂದ್ರಕಲಾಬಾಯಿ ಅವರ ಪ್ಲೇಕ್ಸ್ ಹಾಗೂ ಬ್ಯಾನರ್ ಅನ್ನು ಮಾಜಿ ಶಾಸಕ ನಂಜುಂಡಸ್ವಾಮಿ ಅವರ ಬೆಂಬಲಿಗರು  ತೆಗೆಸಿ ಗುಂಪುಗಾರಿಕೆಗೆ ಆಸ್ಪದ ಮಾಡಿಕೊಟ್ಟಿದ್ದಾರೆ.  ಜಿ.ಎನ್.ನಂಜುಂಡಸ್ವಾಮಿ ಅವರ ಕಟ್ಟಾ ಬೆಂಬಲಿಗ ಎಂದೇ ಗುರುತಿಸಿಕೊಂಡಿರುವ ಜಿ.ಪಿ. ಶಿವಕುಮಾರ್ ಬ್ಯಾನರ್ ತೆರವಿಗೆ ಸೂಚಿಸಿದ್ದಾರೆ. ಈ ಸಂದಬ೯ದಲ್ಲಿ ಏಕೆ ಬ್ಯಾನರ್ ತೆಗೆಸುತ್ತಿರಾ? ಎಂದು ಪ್ರಶ್ನಿಸಿದ ನಗರಸಭೆ ಮಾಜಿ ಸದಸ್ಯ ಸಿಂಗಾರಿ ಪರಮೇಶ್,

ನಂಜಪ್ಪ, ಮುಳ್ಳೂರು ಚೇತನ್ ಸೇರಿದಂತೆ ಹಲವ ವಿರುದ್ದ ಶಿವಕುಮಾರ್ ಕೆಟ್ಟ ಪದ ಬಳಸಿ ನಿಂದಿಸಿದ್ದಾರೆ ಎನ್ನಲಾಗಿದೆ. ಈಸಂದಭ೯ದಲ್ಲಿ ಮಾತಿನ
ಚಕಮಕಿ ನಡೆದಿದೆ.  ಈ ವೇಳೆ ಕೆಟ್ಟ ಭಾಷೆಯಲ್ಲಿ ಶಿವಕುಮಾರ್ ಪರಮೇಶ್ ಅವರನ್ನು ನಿಂದಿಸಿದ್ದಾರೆ. ಮತ್ತೋವ೯ ನಂಜುಂಡಸ್ವಾಮಿ ಬೆಂಬಲಿಗ
ನಾವು ಏನೇ ಬಂದರೂ ಹೆದರಿಸುತ್ತೆವೆ, ನಿನಗೆ ಬೇಡದ ವಿಚಾರ ಸುಮ್ಮನಿರಿ ಇಲ್ಲದಿದ್ದರೆ ಪರಿಣಾಮ ನೆಟ್ಟಗಾಗಲ್ಲ  ಎಂದು  ವೇದಿಕೆ ಸಮೀಪದಲ್ಲೆ ಸಾವ೯ಜನಿಕರ ಸಮ್ಮುಖದಲ್ಲಿ
ಎಚ್ಚರಿಕೆ ಸಂದೇಶ ನೀಡುವ ಮೂಲಕ ಧಮಕಿ ಹಾಕಿದ್ದಾರೆ.  ಅಲ್ಲದೆ ತಳ್ಳಾಟ, ನೂಕಾಟ ಸಹಾ ನಡೆದಿದೆ ಎಂದೇ ಹೇಳಲಾಗುತ್ತಿದೆ.
ಚಂದ್ರಕಲಾ ಬಾಯಿ ಜಿಲ್ಲಾ ಮಹಿಳಾ ಮೋಚಾ೯ ಅಧ್ಯಕ್ಷರು. ರಾಜ್ಯ ಕಾಯ೯ಕಾರಿಣಿ ಖಾಯಂ ಆಹ್ವಾನಿತರು, ಜಿಪಂನ ಮಾಜಿ ಸದಸ್ಯರು, ಹಾಲಿ ಪಕ್ಷದ ರಾಜ್ಯಾಧ್ಯಕ್ಷ
ಯಡಿಯೂರಪ್ಪ ಪಾಳೇಯದಲ್ಲಿ ಗುರುತಿಸಿಕೊಂಡವರು. ಅವರು ಲಂಬಾಣಿ ಮಹಿಳೆ, ಕೊಳ್ಳೇಗಾಲ ಟಿಕೇಟ್ ಆಕಾಂಕ್ಷಿ ಎಂಬ ಕಾರಣಕ್ಕೆ ಈ ಈಗಾಗಲೇ ಹಲವು ಸಭೆ, ಕಾಯ೯ಕ್ರಮಗಳಿಂದಲೂ
ದೂರವಿಡುವ ತಂತ್ರ ನಡೆದಿತ್ತು, ಇಂದು ಪರಿವತ೯ನಾ ಯಾತ್ರೆಗೂ ಮುನ್ನ ವೇದಿಕೆಯ ಸುತ್ತಮುತ್ತಲಿದ್ದ ಬ್ಯಾನರ್ ತೆಗೆಸಿ ಹಾಕಿಸಿರುವುದು ಈಗ ಚಚೆ೯ಯ ವಿಚಾರವಾಗಿದೆ.
ಬ್ಯಾನರ್ ತೆಗೆಸಿ ಬೀಸಾಡುವ ದೖಶ್ಯವನ್ನು ಎಂಜಿಎಸ್ ವಿ ಕಾಲೇಜಿನಲ್ಲಿ ವಿಹಾರಾಥ೯ವಾಗಿ ಬಂದಿದ್ದ ನೂರಾರು ಮಂದಿ ವೀಕ್ಷಿಸಿ ವಿವಿಧ ರೀತಿಯಲ್ಲಿ ಚಚೆ೯ ನಡೆಸುತ್ತಿದ್ದ  ದೖಶ್ಯ ಕಂಡು ಬಂತು.
ಬಟ್ಟೆ ಬ್ಯಾನರ್ ಅಲ್ಲ ಎಂದು ತೆಗೆಸಲಾಗಿದೆ-
ಚಂದ್ರಕಲಾ ಹಾಕಿಸಿದ್ದು ಬಟ್ಟೆ ಬ್ಯಾನರ್ ಅಲ್ಲ, ಪ್ಲಾಸ್ಟಿಕ್ ಬ್ಯಾನರ್ ಹಾಗೂ ಪ್ಲೇಕ್ಸ್ ಎಂದು ತೆರವು ಮಾಡಲಾಗಿದೆ. ನಗರಸಭೆಯವರು ತೆರವು ಮಾಡಿಸುವ ಮುನ್ನ ನಾವು
ತೆರವು ಮಾಡಿಸಿದ್ದೆವೆ ಎಂದು  ನಂಜುಂಡಸ್ವಾಮಿ ಬೆಂಬಲಿಗರು ಸಮಥಿ೯ಸಿಕೊಂಡಿದ್ದಾರೆ.  ಏತನ್ಮದ್ಯೆ ನಮ್ಮೂರ ಟಿವಿ ಜೊತೆ ಮಾತನಾಡಿದ ಮಂಡಲ ಅಧ್ಯಕ್ಷ ರಮೇಶ್ ನಮ್ಮ ಪಕ್ಷದವರು ಚಂದ್ರಕಲಾ
ಅವರು  ಪ್ಲೇಕ್ಸ್ ತೆಗೆಸಿದ ಕ್ರಮ ಸರಿಯಲ್ಲ ಎಂದು ಪ್ರತಿಕ್ರಿಸಿದ್ದಾರೆ.ಪ್ಲೇಕ್ಸ್ ಅನ್ನು ತೆರವು ಗೊಳಿಸಲು ಶಿವಕುಮಾರ್ ಸಂದಭ೯ದಲ್ಲಿ  ನನಗೂ ಅವರಿಗೂ ಮಾತುಕತೆ ನಡೆಯಿತು. ಏಕೆ ಎಂದು ಪ್ರಶ್ನಿಸಿದೆ.
ಈಸಂದಭ೯ದಲ್ಲಿ ಅವರು ನನ್ನನ್ನು ಏಕ ವಚನದಲ್ಲಿ ನಿಂದಿಸಿದರು.  ಕೆಟ್ಟ ಪದ ಬಳಸಿ ಧಮಕಿ ಹಾಕಿದರು, ಆಗಾದರೆ
ಪ್ಲೇಕ್ಸ್ ತೆರವು ಕ್ರಮ ಪ್ರಶ್ನಿಸಿದ್ದೆ ತಪ್ಪಾ, ಇದೇನಾ ಇವರ  ಗೂಂಡಾ ಸಂಸ್ಕೖತಿ ?
-ಸಿಂಗಾರಿ ಪರಮೇಶ್, ನಗರಸಭೆ ಮಾಜಿ ಸದಸ್ಯ.

LEAVE A REPLY

Please enter your comment!
Please enter your name here