ಭೂತಾಯಿಗೆ ನಮಿಸಿ ಕೃಷಿಗೆ ಮುಂದಾದ ರೈತ

0
102

ಬಳ್ಳಾರಿ /ಹೊಸಪೇಟೆ ಜೂನ್ ತಿಂಗಳ ಮೊದಲ ಮಳೆ ಸುರಿದಿದ್ದು, ರೈತರಲ್ಲಿಉತ್ಸಾಹ ಮೂಡಿದೆ. ಸತತ ಮೂರುವರ್ಷಗಳಿಂದ ಸಮರ್ಪಕವಾಗಿ ಮಳೆಯಾಗದೆ ಕಂಗಾಲಾಗಿದ್ದ ರೈತರು ಕೃಷಿಚಟುವಟಿಕೆಗಳಲ್ಲಿತೋಡಗಿದ್ದಾರೆ.

ಮೊನ್ನೆ ದಿನ ಸಂಜೆ ಕೆಲಹೊತ್ತುಗಳ ಕಾಲ ಸುರಿದ ಮಳೆಗೆ ಇಂದು ಮಳೆಯಾಶ್ರಿತ ರೈತರು ತಮ್ಮ ಹೊಲಗಳಲ್ಲಿ ಎತ್ತು ಹಾಗು ಟ್ರಾಕ್ಟರ್ ನ ಮೂಲಕ ಗಳೆ ಮಾಡಿದರು  ಹಾಗು ಜಮೀನುಗಳನ್ನ ಹಸನುಮಾಡಿ ಬಿತ್ತನಗೆ ಅಣಿಯಾಗಿದ್ದಾರೆ. ಕಳೆದಬಾರಿಬಿತ್ತನೆ ಸಮಯಕ್ಕೆ ನೀರಿಲ್ಲದೆಬೆಳೆಹಾಳಾಗಿ ಸಂಕಷ್ಟಎದುರಿಸಬೇಕಾಗಿತ್ತು. ಈ ಬಾರಿ  ವರುಣ ದಯೆತೋರಿ ಒಳ್ಳೆ ಮಳೆಸುರಿದಿರುವುದು ಹೊಸಪೇಟೆಯ ನಲ್ಲಾಪುರ, ಸೀತಾರಾಮ ತಾಂಡಾ, ಮೆಟ್ರಿ, ನಾಸರೆಡ್ಡಿ ಕ್ಯಾಂಪ್,  ಚಿನ್ನಾಪುರ  ಸೇರಿದಂತೆ ಹತ್ತಾರು ಗ್ರಾಮಗಳ ಮಳೆಯಾಶ್ರಿತ ರೈತರುಭೂತಾಯಿಗೆ ನಮಿಸಿ ಜಮಿನುಗಳನ್ನ ಹಸನು ಮಾಡಿಬಿತ್ತನೆ ಕಾರ್ಯಕ್ಕೆಮುಂದಾಗುತ್ತಿದ್ದಾರೆ

LEAVE A REPLY

Please enter your comment!
Please enter your name here