ಭ್ರಷ್ಟಾಚಾರದ ಬಗ್ಗೆ ಮಾತನಾಡಬೇಡಿ ಮೋದಿಜಿ. ..!

0
145

ರಾಯಚೂರು:ಭ್ರಷ್ಟಾಚಾರಿಗಳನ್ನು ಇಟ್ಟುಕೊಂಡು ಭ್ರಷ್ಟಾಚಾರದ ಬಗ್ಗೆ ಮಾತನಾಡಬೇಡಿ ಮೋದಿಗೆ ಸಲಹೆ
ರಾಯಚೂರು- ಐದು ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ ಯಾವುದೇ ಹಗರಣದಲ್ಲಿ ಭಾಗಿ ಯಾಗಿಲ್ಲ ಕರ್ನಾಟಕದ ಘನತೆ, ಗೌರವದ ಬಗ್ಗೆ ಮಾತಾಡುವುದು ಬಿಡಿ ಕರ್ನಾಟಕದ ಜನತೆ ಸಿಎಂ, ಪರಮೇಶ್ವರ್ ಬಗ್ಗೆ ಅಭಿಮಾನ ಇಟ್ಟಿದ್ದಾರೆ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.

ಜನಾಶಿರ್ವಾದ ಯಾತ್ರೆಯ ನಿಮಿತ್ತ ಸಿಂಧನೂರು ಪಟ್ಟಣದಲ್ಲಿ ಬಹಿರಂಗ ಸಭೆ ಉದ್ದೇಶಿಸಿ ಮಾತ ನಾಡಿದರು. ಪ್ರಧಾನಿ ಮೋದಿ ಬಸವಣ್ಣ ನವರ ಹೆಸರು ಹೇಳಿತ್ತಿರಿ ಬಸವಣ್ಣನವರು ಕಾಯಕವೇ ಕೈಲಾಸ ಎಂದಿದ್ದಾರೆ ಅದನ್ನು ಅನುಷ್ಠಾನಕ್ಕೆತಂದು ನಮ್ಮ ಮುಂದೆ ಮಾತನಾಡಿ, ನೀವು ಕರ್ನಾಟಕಕ್ಕೆ ಬಂದಾಗ ಯಡಿಯೂರಪ್ಪ ಕುಳಿತಿರುತ್ತಾರೆ
ಎಡ-ಬಲ ಭ್ರಷ್ಟ ನಾಯಕರನ್ನು ಕೂಡಿಸಿಕೊಂಡು ಭ್ರಷ್ಟಚಾರದ ಬಗ್ಗೆ ಮಾತನಾಡಬೇಡಿ ಎಂದು ಮೋದಿಗೆ ಸಲಹೆ ನೀಡಿದರು.

ಬರಿ ಸುಳ್ಳು ಮಾತನಾಡುವದನ್ನು ಬಿಟ್ಟು ರಾಜ್ಯದ ರೈತರ ಹಿತ ದೃಷ್ಟಿಯಿಂದ ರಾಷ್ಟ್ರೀಕೃತ ಬ್ಯಾಂಕು ಗಳ ಸಾಲ ಮನ್ನಾ ಮಾಡುವದರ ಮೂಲಕ ನಿಮ್ಮ ಪ್ರಾಮಾಣಿಕತೆಯನ್ನು ತೋರಿಸಿ ನಂತರ ಮಾತನಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ರೈತರ ಸಾಲ ಮನ್ನಾ ಮಾಡಿ ಸಂಕಷ್ಟದಲ್ಲಿರುವ ರೈತರಿಗೆ ನೆರವು ನೀಡಿದ್ದಾರೆ. ರೈತರು, ಹಿಂದುಳಿದ, ಬಡವರು, ಶ್ರಮಿಕರು ಎಲ್ಲರ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ರೂಪಿಸಿ ಜಾರಿ ಗೊಳಿಸಿದ್ದಾರೆ. ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಬೆಂಬಲಿಸುವಂತೆ ರಾಹುಲ್ ಅವರು ಜನರಲ್ಲಿ ಈ ಸಂದರ್ಭದಲ್ಲಿ ಮನವಿ ಮಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ, ಜಿಲ್ಲಾ ಉಸ್ತುವಾರಿ ಸಚಿವ ರೇವಣ್ಣ ಮಾಜಿ ಮುಖ್ಯ ಮಂತ್ರಿ ವೀರಪ್ಪ ಮೊಯ್ಲಿ, ವಿದಾನ ಪರಿಷತ್ ಸದಸ್ಯ ಎನ್ ಎಸ್ ಬೋಸರಾಜ್, ಬಸನಗೌಡ ಬಾದರ್ಲಿ ಸಚಿವ ಬಸವರಾಜರಾಯರೆಡ್ಡಿ, ಶಾಸಕ ಹಂಪನಗೌಡ ಬಾದರ್ಲಿ ಸೇರಿದಂತೆ ಸ್ಥಳೀಯ ಕಾಂಗ್ರೆಸ್ ನಾಯಕರು ಇದ್ದರು.

*ಮೋದಿಜೀ ಕಥೆ ಹೇಳಬೇಡಿ ಯುವ ಜನರಿಗೆ ಉತ್ತರ ಕೊಡಿ*

ರಾಯಚೂರು-ದೇಶದಲ್ಲಿ ನಿರುದ್ಯೋಗ ತಾಂಡವ ವಾಡುತ್ತಿದ್ದು, ದೇಶದ ಪ್ರಧಾನ ಮಂತ್ರಿಗಳೇ ಉದ್ಯೋಗ ಸೃಷ್ಠಿಸಿ ಕಥೆ ಹೇಳಬೇಡಿ ದೇಶದ ಯುವ ಜನರಿಗೆ ಉತ್ತರ ಕೊಡಿ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದರು.
ಜನಾಶೀರ್ವಾದ ಯಾತ್ರೆಯ ಹಿನ್ನೆಲೆ ನಗರದ ಗಂಜ್ ವೃತ್ತದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ನಮಗೆ ಪೈಪೋಟಿ ನೀಡುವ ಚೀನಾ ಪ್ರತಿ ದಿನಕ್ಕೆ 50ಸಾವಿರ ಉದ್ಯೋಗ ಸೃಷ್ಠಿಸುತ್ತಿದ್ದು ಕೇಂದ್ರ ಸರ್ಕಾರ ಕೇವಲ 450 ಉದ್ಯೋಗ ಸೃಷ್ಠಿ ಮಾಡುತ್ತಿದೆ. ಇದಕ್ಕಿಂತ ಹೆಚ್ಚು ನಮ್ಮ ಸಿದ್ದರಾಮಯ್ಯ ಸರ್ಕಾರ ಸೃಷ್ಠಿ ಮಾಡುತ್ತಿದೆ.
ಪ್ರಧಾನಿ ಮೋದಿಯವರು ಒಳ್ಳೆಯ ಭಾಷಣಕಾರರೆಂದು ಎಲ್ಲರಿಗೂ ತಿಳಿದ ವಿಷಯ ಭಾಷಣ ಮಾಡಬೇಡಿ ಉದ್ಯೋಗ ಸೃಷ್ಠಿಗೆ ಕ್ರಮ ಕೈಗೊಳ್ಳಿ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಪ್ರಧಾನ ಮಂತ್ರಿಗಳು ತಮ್ಮ ಅಕ್ಕ ಪಕ್ಕ ಕುಳಿತವರ್ಯಾರು ಎಂಬುದನ್ನು ಮೊದಲು ಅರಿತುಕೊಳ್ಳಿ. ಯಡಿಯೂರಪ್ಪ, ಸೇರಿದಂತೆ ಅವರ ಸಚಿವ ಸಂಪುಟದ ಸಚಿವರು ಭ್ರಷ್ಠಾಚಾರ ನಡೆಸಿ ಜೈಲಿಗೆ ಹೋಗಿ ಬಂದವರು. ಅಲ್ಲದೆ ತಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು 50ಸಾವಿರವನ್ನು 3 ತಿಂಗಳಲ್ಲಿ 80ಲಕ್ಷ ಮಾಡಿದ ಮಾರ್ಗೊಪಾಯ ಬಹಿರಂಗಪಡಿಸಿ ಎಂದು ಸವಾಲು ಹಾಕಿದರು.
ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಭ್ರಷ್ಟಾಚಾರ ರಹಿತ ಆಡಳಿತ ನೀಡಿದ ಕೀರ್ತಿ ನಮ್ಮದಾಗಿದ್ದು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದರ ಜೊತೆಯಲ್ಲಿ ರೈತರು ಸಂಕಷ್ಟಕ್ಕೆ ಧಾವಿಸಿದ ಸರ್ಕಾರ ನಮ್ಮದಾಗಿದೆ.
ರಾಜ್ಯದಲ್ಲಿ ಕಳೆದ 5ವರ್ಷಗಳಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳೇ ನಮಗೆ ಶ್ರೀರಕ್ಷೆಯಾಗಲಿದ್ದು ರಾಜ್ಯದಲ್ಲಿ ಮುಂಬರುವ ಸರ್ಕಾರವೂ ಕಾಂಗ್ರೆಸ್ ಸರ್ಕಾರ ಬರಲಿದ್ದು ಇನ್ನೂ ಉತ್ತಮ ರೀತಿಯ ಆಡಳಿತ ನೀಡುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ರಾಜ್ಯಾಧ್ಯಕ್ಷ ಡಾ.ಜಿ.ಪರಮೇಶ್ವರ, ರವಿ ಬೋಸರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.

*ದಾರಿಯ ಮದ್ಯ ಮಂಡಕ್ಕಿ ಸವಿದ ರಾಹುಲ್*

ರಾಯಚೂರು. ರಾಹುಲ್ ಗಾಂಧಿಯವರು ಜನಾಶಿರ್ವಾದ ಯಾತ್ರೆ ಮದ್ಯದಲ್ಲಿ ಹೋಟೆಲ್ ವೊಂದರಲ್ಲಿ ಮಿರ್ಚಿ ಮಂಡಕ್ಕಿ ಸವಿದರು.
ರಾಯಚೂರನಿಂದ ದೇವದುರ್ಗ ಕ್ಕೆ ಹೋಗುವ ದಾರಿಯ ಮದ್ಯದಲ್ಲಿ ತಾಲ್ಲೂಕಿನ ಕಲ್ಮಲಾ ಗ್ರಾಮ ದಲ್ಲಿ ಭದ್ರತೆ ನಡುವೆಯೂ ಬಸ್ ನ್ನು ಇಳಿದು ಹೋಟೆಲ್ ಗೆ ತೆರಳಿ ಮಿರ್ಚಿ ಮಂಡಕ್ಕಿ ಸವಿದರು.

ಇವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿ.ಪರಮೇಶ್ವರ,ಮುನಿಯಪ್ಪ ,ಮಲ್ಲಿಕಾರ್ಜುನ ಖರ್ಗೆ ವೀರಪ್ಪ ಮೋಯಿಲಿ,ಡಿ.ಕೆ.ಶಿವ ಕುಮಾರ್ , ಬೋಸರಾಜು ಸೇರಿ ಹಲವರು ಮಂಡಕ್ಕಿ ಯನ್ನು ಸವಿದರು. ನೂರಾರು ಸಂಖ್ಯೆಯಲ್ಲಿ ಜನರು ಭಾಗ ವಹಿಸಿದ್ದರು.

LEAVE A REPLY

Please enter your comment!
Please enter your name here