ಭ್ರಷ್ಟ ಅಧಿಕಾರಿ ವಿರುದ್ಧ ಕ್ರಮಕ್ಕೆ ಸದಸ್ಯರ ಒತ್ತಾಯ..

0
230

ಬೀದರ್/ಬಸವಕಲ್ಯಾಣ:ನಗರ ಸಭೆ ಸಾಮಾನ್ಯ ಸಭೆಯಲ್ಲಿ ಭ್ರಷ್ಟ ಅಧಿಕಾರಿ ವಿರುದ್ಧ ಕ್ರಮಕ್ಕೆ ಸದಸ್ಯರ ಒತ್ತಾಯ.ಬಸವಕಲ್ಯಾಣ: ನಗರ ಸಭೆಯಿಂದ ನಡೆಯಬೇಕಿದ್ದ ಕಾಮಗಾರಿ ಟೆಂಡರ್ ನಲ್ಲಿ ಅಕ್ರಮ ಎಸಗಿದ ಜೆಇ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಒತ್ತಾಯಿಸಿದ ಪ್ರಸಂಗ ಜರುಗಿತು. 

ನಗರ ಸಭೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಹಿರಿಯ ಸದಸ್ಯ ಅನೀಲ ಕುಲಕರಣಿ ಮಾತನಾಡಿ, ಟೆಂಡರ ಕರೆಯುವಲ್ಲಿ ಅಕ್ರಮ ಎಸಗಲಾಗಿದೆ ಎನ್ನುವ ಬಗ್ಗೆ ಆರೋಪ ಕೇಳಿ ಬಂದಾಗ ಇಲ್ಲಿಯ ಸಹಾಯಕ ಆಯುಕ್ತರನ್ನು ತನಿಖಾಧಿಕಾರಿ ಎಂದು ನೆಮಿಸಲಾಗಿತ್ತು. ಎಸಿ ಅವರು ತನಿಖೆ ನಡೆಸಿ ಕಳೆದ ಆರು ತಿಂಗಳ ಹಿಂದೆಯೇ ವರದಿ ಸಲ್ಲಿಸಿದ್ದಾರೆ, ಆದರೆ ಜೆಇ ವಿರುದ್ಧ ಇದುವರೆಗೂ ಯಾವ ಕ್ರಮನು ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಭೆಯಲಿದ್ದ ನಗರ ಸಭೆ ಪ್ರಭಾರಿ ಆಯುಕ್ತರು ಆದ ಎಸಿ ಶರಣಬಸಪ್ಪ ಕೊಟಪ್ಪಗೋಳ ಪ್ರತಿಕ್ರಿಯಿಸಿ, ವರದಿ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವದು ಎಂದು ಸಮುಜಾಹಿಸಿ ನೀಡಿದರು.ಮತ್ತೊಬ್ಬ ಹೀರಿಯ ಸದಸ್ಯ ರವಿ ಗಾಯಕವಾಡ ಮಾತನಾಡಿ, ನೀರು ಸರಬರಾಜು, ವಿದ್ಯುತ್ ರೀಪೆರಿ ಸೇರಿದಂತೆ ಇತರ ವಿಷಯಗಳಿಗಾಗಿ ನಗರ ಸಭೆಯಿಂದ ಲಕ್ಷಾಂತರ ರೂಪಾಯಿ ವೆಚ್ಚಮಾಡಲಾಗುತ್ತಿದೆ, ಆದರೆ ನಗರದಲ್ಲಿ ಸರಿಯಾಗಿ ನೀರು ಬರುತ್ತಿಲ್ಲ. ಕಂಬಗಳಿಗೆ ವಿದ್ಯುತ್ ದ್ವೀಪಗಳಿಲ್ಲ, ಖರ್ಚು ಮಾಡಿದ ಹಣ ಎಲ್ಲಿ ಹೊಗುತ್ತಿದೆ ಎಂದು ಪ್ರಶ್ನಿಸಿದರು, ಇದಕ್ಕೆ ಇತರ ಸದಸ್ಯರು ದ್ವನಿಗೂಡಿಸಿದರು.
ನಗರ ಸಭೆ ಅಧ್ಯಕ್ಷ ಅಜರಲಿ ನವರಂಗ, ಉಪಾಧ್ಯಕ್ಷೆ ಚಮ್ಮಾಬಾಯ ಮಾಲಗಾರ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here