ಮಂಗಮ್ಮನಿಗೆ ಹುಟ್ಟಿದ್ದು ಜೋಡಿಕಂದಮ್ಮಗಳು…!!

0
198

ಬಳ್ಳಾರಿ/ಹೊಸಪೇಟೆ: ಹಂಪಿಯಲ್ಲೀಗ ಕಳೆದೊಂದು ದಶಕದ ಇತ್ತೀಚೆಗೆ ವಾನರ ಸೇನೆಯ ಸಂಖ್ಯೆ  ಕೊಂಚ ಇಳಿಮುಖವಾಗಿದ್ದರ ಬೆನ್ನಲ್ಲೇ ಇದೀಗ  ಹಂಪಿಯ  ಮಂಗಮ್ಮ ಒಟ್ಟಿಗೆ ಎರಡು ಕಂದಮ್ಮಗಳಿಗೆ ಜನ್ಮ ನೀಡುವ ಮೂಲಕ ವಾನರ ಸಂತತಿ ಅಭ್ಯುದಯಕ್ಕೆ ಕಾರಣಳಾಗಿದ್ದಾಳೆ.

ಇದರಿಂದ ವಾನರ ಕುಟುಂಬದಲ್ಲಿ ಸಂತಸ ಮನೆಮಾಡಿದೆ. ಅಂದಹಾಗೆ, ವಾನರ ಕುಟುಂಬದ ಸದಸ್ಯೆ  ಈ ಮಂಗಮ್ಮ ಕಳೆದ ಮೂರು ದಿನಗಳಹಿಂದೆ ಎರಡುಮರಿಗಳಿಗೆ ಜನ್ಮ ನೀಡುವಮೂಲಕ ಮಹಾತಾಯಿಯಾಗಿಗೋಚರಿಸಿದ್ದಾಳೆ. ಸಾಮಾನ್ಯವಾಗಿ ಕೋತಿಗಳುಒಂದೇ ಮರಿಗೆ ಜನ್ಮ ನೀಡುವುದು ವಾಡಿಕೆ.ಪಶು ವೈದ್ಯರು ಹೇಳುವ ಪ್ರಕಾರ ಪ್ರತಿಸಾವಿರಕ್ಕೊಂದು ಕೋತಿ ಈ ರೀತಿ ಎರಡು ಮರಿಗಳಿಗೆ ಜನ್ಮ ನೀಡುವುದು ಸಹಜ.ಹಂಪಿಯ ಈ ಮಂಗಮ್ಮನಿಗೆ  ಇದೀಗ ಎರಡುಪುಟ್ಟ ಮರಿಗಳು ಜನಿಸಿದ್ದರಿಂದ ಈಕೆಯಆನಂದಕ್ಕೆ ಪಾರವೇ ಇಲ್ಲ. ಪ್ರತಿನಿತ್ಯ ಹಂಪಿಯಕಲ್ಲು ಬಂಡೆಗಳ ನಡುವೆ ಮರಿಗಳೊಂದಿಗೆತಾಯಿಯ ಮಮತೆ ಮತ್ತು ವಾತ್ಸಲ್ಯತೋರುತ್ತಿದ್ದಾಳೆ. ಬಿಸಿಲು  ಇರುವುದರಿಂದ ಸಧ್ಯಕ್ಕೆ ಹೇಮ ಕೂಟದ  ಬಂಡೆಗಳ  ನಡುವೆಯೇವಾಸ ಮಾಡಿಕೊಂಡಿದ್ದಾಳೆ.ಸಂಜೆಯಾಗುತ್ತಿದ್ದಂತೆಯೇ ಕಲ್ಲು ಬಂಡೆಗಳಿಂದ ಆಚೆಗೆ ಬರುತ್ತಾಳೆ. ಈ ಮಹಾತಾಯಿ ಮಂಗಮ್ಮನಿಗೆ  ಪ್ರವಾಸಿಗರೂ ಕೂಡ ಬಿಸ್ಕತ್ತು,ಮಾವ, ಬಾಳೆಹಣ್ಣು  ಇತ್ಯಾದಿ ಹಣ್ಣುಗಳನ್ನುನೀಡುವ ಮೂಲಕ ಮಾನವೀಯತೆಮೆರೆಯುತ್ತಿದ್ದಾರೆ. ಸಧ್ಯಕ್ಕೆ ಹಂಪಿಯ ಹೇಮ ಕೂಟದ ದೇವಾಲಯಗಳ ಗುಚ್ಛದ ಬಳಿಈ ಮಂಗಮ್ಮ ತನ್ನೆರಡು ಮಕ್ಕಳೊಂದಿಗೆ ವಾಸ್ತವ್ಯ ಮಾಡಿಕೊಂಡಿದ್ದು ಎಲ್ಲರ ಗಮನಸೆಳೆಯುತ್ತಿದ್ದಾಳೆ.

ತಾಯಿ ಮತ್ತು ಮರಿಗಳ ಒಡನಾಟ ಕಣ್ತುಂಬಿ ಕೊಂಡು ನಲಿಯುತ್ತಿದ್ದಾರೆ. ತಮ್ಮ ಕೈನಲ್ಲಿದ್ದ ಹಣ್ಣು-ಹಂಪಲು ನೀಡುವ ಮೂಲಕ ಖುಷಿ  ಅನುಭವಿಸುತ್ತಿದ್ದಾರೆ. ಮರಿಗಳ ಪ್ರೇಮದ ಆನಂದದ  ಅಪ್ಯಾಯಮಾನತೆ, ಮುದ್ದುಮುದ್ದು  ಆಲಿಂಗನದ  ಸವಿ ಅನುಭವಿಸುತ್ತಿರುವ ಈ ಮಂಗಮ್ಮ ನನ್ನು  ನೋಡಲು ಎರಡು  ಕಣ್ಣುಸಾಲದು ಎನ್ನುತ್ತಾರೆ  ಪ್ರವಾಸಿ ಮಾರ್ಗದರ್ಶಿಗಳು

LEAVE A REPLY

Please enter your comment!
Please enter your name here