ಮಂಗಳಮುಖಿಯರಿಂದ ಗಂಧೋತ್ಸವ ಅರ್ಪಣೆ.

0
68

ಚಿಕ್ಕಬಳ್ಳಾಪುರ/ಚಿಂತಾಮಣಿ:- ತಾಲೂಕಿನ ಹಿಂದೂ-ಮುಸ್ಲಿಂ ಪವಿತ್ರ ಯಾತ್ರಾಸ್ಥಳವಾದ ಮುರುಗಮಲ್ಲ ಅಮ್ಮಾಜಾನ್ ಮತ್ತು ಬಾಬಾಜಾನ್ ದರ್ಗಾದ ಉರುಸ್ ನಲ್ಲಿ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಮಂಗಳಮುಖಿಯರ ತಂಡ ಅವರಿಗೆ ಬಂದ ಭಕ್ತರಿಗೆ ಮತ್ತು ಬಡವರಿಗೆ ಅನ್ನದಾನ ಮತ್ತು ಬಡವರಿಗೆ ವಸ್ತ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗುಲಾಂ ಮೈನುದ್ದೀನ್ ಸುನಿತಮ್ಮ ಮಂಗಳಮುಖಿಯರ ತಂಡದ ನಾಯಕಿ ರಾಜ್ಯ ಸೇರಿದಂತೆ ಕೇರಳ ಆಂಧ್ರಪ್ರದೇಶ ಮಹಾರಾಷ್ಟ್ರ ತಮಿಳುನಾಡಿನ ನಮ್ಮ ತಂಡದವರು ಪ್ರತಿವರ್ಷ ಮುರುಗಮುಲ್ಲಾ ಅಮ್ಮ ಜಾನ ಮತ್ತು ಬಾವಾ ಜಾನ್ ದರ್ಗಾಕ್ಕೆ ಬಂದು ಅನ್ನ ದಾನ ಮಾಡಿ ಹೋಗುತ್ತಿದ್ದರು ಹೇಳಿದರು.

ಸುಮಾರು 22 ವರ್ಷಗಳಿಂದ ನಾವು ಈ ಸೇವೆ ಮಾಡುತ್ತಿದ್ದೇವೆ ಪ್ರತಿವರ್ಷ ನಮಗೆ ಅಮಜಾನ್ ಮತ್ತು ಬಾಬಾಜಾನ ಆಶೀರ್ವಾದ ಸಿಗುತ್ತಿದೆ ಹೆಚ್ಚು ಸೇವೆ ಮಾಡಲು ಅನುಕೂಲವಾಗುತ್ತದೆ ಜನರಿಗೆ ಆರೋಗ್ಯ ಮತ್ತು ಒಳ್ಳೆಯ ಮಳೆ ಬೆಳೆ ಬೆಳೆಯಲು ಸಂತೋಷದಿಂದ ಇರುವಂತೆ ಪ್ರಾರ್ಥನೆ ಮಾಡುವುದಾಗಿ ಹೇಳಿದರು.

ಇದಕ್ಕೂಮುನ್ನ ಆಗಮಿಸಿದ ಮಂಗಳಮುಖಿ ಯರು ಡೋಲ್ ಬಾರಿಸಿ ವಿವಿಧ ಹಾಡುಗಳಿಂದ ದರ್ಗಾ ಆವರಣದಲ್ಲಿ ನೃತ್ಯ ಪ್ರದರ್ಶಿಸಿದ್ದು ಅಪಾರ ಸಂಖ್ಯೆಯಲ್ಲಿ ಜನ ಸೇರಿ ಅವರನ್ನು ಚಪ್ಪಾಳೆ ಮೂಲಕ ಮತ್ತಷ್ಟು ಕುಣಿಯಲು ಹುರಿದುಂಬಿಸಿದರು.

LEAVE A REPLY

Please enter your comment!
Please enter your name here