ಮಂಗಳೂರು ಚಲೋ ಬೈಕ್ ರ‌್ಯಾಲಿ ಬಿಜೆಪಿ ಕಾರ್ಯಕರ್ತರ ಅರೆಸ್ಟ್

0
210

ಬಳ್ಳಾರಿ /ಬಳ್ಳಾರಿ: ಮಂಗಳೂರಿನಲ್ಲಿ ನಡೆಯಲಿರುವ ಬೈಕ್ ರ‌್ಯಾಲಿ ಅಂಗವಾಗಿ ಹಮ್ಮಿಕೊಂಡಿದ್ದ ಬಳ್ಳಾರಿ ಬೃಹತ್ ಬೈಕ್ ರ‌್ಯಾಲಿ ವೇಳೆ ಪೊಲೀಸರು ಮಾಜಿ ಶಾಸಕ ಜಿ.ಸೋಮಶೇಖರ್ ರೆಡ್ಡಿ ಅವರನ್ನು ಬಂಧಿಸಿದ್ದಾರೆ.

ಬಿಜೆಪಿ ಜಿಲ್ಲಾ ಯುವ ಮೋರ್ಚಾ ವತಿಯಿಂದ ಮುನಿಸಿಪಲ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ
ಬೈಕ್ ರ‌್ಯಾಲಿ ವೇಳೆ ಮಾಜಿ ಶಾಸಕ ರೆಡ್ಡಿ ಅವರೊಂದಿಗೆ ಬಿಜೆಪಿಯ ಅನೇಕ ಕಾರ್ಯಕರ್ತರನನು ಬಂಧಿಸಿ ರ‌್ಯಾಲಿ ತಡೆ ಹಿಡಿದಿದ್ದಾರೆ.

ಡಿಎಸ್ಪಿ ಉಮೇಶ್ ಈಶ್ವರ್ ನಾಯಕ್ ನೇತೃತ್ವದಲ್ಲಿ ಬ್ರೂಸ್ ಪೇಟೆ, ಗಾಂಧಿನಗರದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ರ‌್ಯಾಲಿ ನಡೆಸಲು ಜಿಲ್ಲಾ ರಕ್ಷಣಾಧಿಕಾರಿಗಳು ಅನುಮತಿ ನೀಡಿಲ್ಲ. ಹೀಗಾಗಿ, ನಿಮ್ಮನ್ನು ಅರೆಸ್ಟ್ ಮಾಡುತ್ತೇವೆ ಎಂದು ಹೇಳಿದಾಗ, ಪಟ್ಟು ಬಿಡದ ಕಾರ್ಯಕರ್ತರು ರ‌್ಯಾಲಿ ನಡೆಸಲು ಮುಂದಾದರು. ಈ ಸಂದರ್ಭದಲ್ಲಿ ಮುನಿಸಿಪಲ್ ಕಾಲೇಜು ಮೈದಾನ ಆವರಣಲ್ಲಿ ಕಾರ‌್ಯಕರ್ತರನ್ನು ಕೂಡಿ ಹಾಕಿದ ಪೊಲೀಸರು ಪೊಲೀಸ್ ವಾಹನದಲ್ಲಿ ಬಂಧಿಸಿ ಕರೆದೊಯ್ದರು.

ಈವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಜಿ.ಸೋಮಶೇಖರ್ ರೆಡ್ಡಿ ಅವರು, ಬುದ್ಧಿವಂತರ ನಾಡೆಂದು ಕರೆಯುವ ಮಂಗಳೂರಿನಲ್ಲಿ ಕಾಂಗ್ರೆಸ್ ಆಡಳಿತ ಕೋಮು ಸೌಹಾರ್ದತೆ ಕದಡುತ್ತಿದೆಯಲ್ಲದೆ, ಹಿಂದುಗಳ ಹತ್ಯೆ ನಡೆಸುತ್ತಿದೆ. ಶರತ್ ಮಡಿವಾಳ್ ಸೇರಿದಂತೆ ಹಲವರನ್ನು ಹತ್ಯೆಗೀಡು ಮಾಡಿದೆ. ಇದರಿಂದ ಶಾಂತಿಯ ಜಿಲ್ಲೆಯಾದ ಮಂಗಳೂರಿನಲ್ಲಿ ಅಶಾಂತಿ ತಲೆದೋರಿದೆ. ಕೆಲ ಹಿಂದು ವಿರೋಧಿ ಸಂಘಟನೆಗಳಿಗೆ ಕುಮ್ಮಕ್ಕು ನೀಡುವ ಮೂಲಕ ಹಿಂದುಗಳ ಮೇಲೆ ಸವಾರಿ ನಡೆಸುತ್ತಿದೆ. ಸಚಿವ ರಮಾನಾಥ್ ರೈ ಅವರ ಪ್ರೋತ್ಸಾಹವೇ ಇದಕ್ಕೆಲ್ಲ ಕಾರಣ. ಕೂಡಲೇ ರೈ ರಾಜೀನಾಮೆ ನೀಡಬೇಕು. ಸಿದ್ಧರಾಮಯ್ಯ ಸರ್ಕಾರಕ್ಕೆ ಇನ್ನು ಉಳಿಗಾಲವಿಲ್ಲ. ರಾಜ್ಯದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

*ರ‌್ಯಾಲಿಯಲ್ಲಿ ಪಾಲ್ಗೊಳ್ಳುತ್ತೇವೆ:*

ಪೊಲೀಸರು ನಮ್ಮನ್ನು ಈಗ ಅರೆಸ್ಟ್ ಮಾಡಿರಬಹುದು. ಆದರೆ, ಸೆ.7 ರಂದು ನಡೆಯಲಿರುವ ರ‌್ಯಾಲಿಯಲ್ಲಿ ಪಕ್ಷದ ಕಾರ್ಯಕರ್ತರು ಪಾಲ್ಗೊಳ್ಳುತ್ತಾರೆ. ಇಂದು ಸಂಜೆ ಅಥವಾ ನಾಳೆ ಬೆಳಿಗ್ಗೆ ಬೈಕ್ ರ‌್ಯಾಲಿ ಮೂಲಕ ಹಾಸನಕ್ಕೆ ತೆರಳಿ, ಅಲ್ಲಿಂದಲೇ ನಮ್ಮ ಕಾರ್ಯಕರ್ತರು ಮಂಗಳೂರು ತಲುಪಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎಸ್.ಗುರುಲಿಂಗನಗೌಡ, ಯುವ ಮೋರ್ಚಾ ಅಧ್ಯಕ್ಷ ಪ್ರಕಾಶ್ ರೆಡ್ಡಿ, ಮುಖಂಡರಾದ ಕೆಎ ರಾಮಲಿಂಗಪ್ಪ, ಜಿ.ರಾಮಚಂದ್ರಯ್ಯ, ಶಿವಕುಮಾರ್, ಶಾಮ್, ಅಶೋಕ್, ಹನುಮಂತು, ಪಾಲಿಕೆ ಸದಸ್ಯ ಮೋತ್ಕರ್ ಸೇರಿದಂತೆ ಹಲವು ಮುಖಂಡರು ಇದ್ದರು

LEAVE A REPLY

Please enter your comment!
Please enter your name here