ಮಂಚ ,ಹಾಸಿಗೆಗಳಿಲ್ಲವೇ ಸಂಡೂರು ಆಸ್ಪತ್ರೆಯಲ್ಲಿ?

0
218

ಬಳ್ಳಾರಿ ಸಂಡೂರು ಆಸ್ಪತ್ರೆ ಎಂದರೆ ಸಾಮಾನ್ಯವಾಗಿ ಸುಚಿತ್ವದಿಂದ ಕೂಡಿದ ವಾರ್ಡುಗಳಲ್ಲಿ, ಉತ್ತಮ ಹಾಸಿಗೆಯಿಂದ ಕೂಡಿದ ಬೆಡ್ ಮೇಲೆ ಮಲಗಿ ಚಿಕಿತ್ಸೆ ಪಡೆಯುವುದು ಸಹಜ. ಆದರೆ ಗಣಿನಾಡು ಸಂಡೂರಿನಲ್ಲಿ ಬಾಣಂತಿ ಮಹಿಳೆಯರು ಮತ್ತು ಹಸುಗೂಸುಗಳು ಕಲ್ಲು ಮಣ್ಣಿನ ಮಧ್ಯೆ ಮಲಗಿ ಚಿಕಿತ್ಸೆ ಪಡೆಯುವ ಪರಿಸ್ಥಿತಿ ಬಂದಿದೆ.

ಸಂಡೂರಿನಲ್ಲಿ ನೂರು ಹಾಸಿಗೆಗಳ ಆಸ್ಪತ್ರೆ ಅಭಿವೃದ್ಧಿ ಕಾರ್ಯ ನಡೆಯುತ್ತಲೇ ಇದೆ. ಹೆಸರಿಗೆ ನೂರು ಹಾಸಿಗೆಗಳು ಲೆಕ್ಕವಿದ್ದರೂ, ಅಷ್ಟು ಹಾಸಿಗಗಳು ಮಾತ್ರ ಆಸ್ಪತ್ರೆಯಲ್ಲಿಲ್ಲ. ವೈದ್ಯರು ಚಿಕಿತ್ಸೆಯನ್ನು ಉತ್ತಮವಾಗಿ ನೀಡುತ್ತಿದ್ದಾರೆ. ಆದರೆ ಆಸ್ಪತ್ರೆಯ ಸೌಲಭ್ಯಗಳು ಮಾತ್ರ ಅಷ್ಟಕ್ಕಷ್ಟೇ ಎನ್ನುವಂತಿವೆ.

ಜನಸಂಖ್ಯೆ ನಿಯಂತ್ರಣದ ನಿಟ್ಟಿನಲ್ಲಿ ಸಂತಾನ ಹರಣ ಶಸ್ತ್ರಚಿಕಿತ್ಸೆ ನಡೆಯಿತು. ಇದರಲ್ಲಿ ಸಂಡೂರು ತಾಲೂಕಿನ 36 ಜನ ಬಾಣಂತಿಯರು ಈ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಆ ನಂತರ ಅವರಿಗೆ ಚಿಕಿತ್ಸೆ ಪಡೆಯಲು ಮಾತ್ರ ಸರಿಯಾದ ಸೌಲಭ್ಯವಿಲ್ಲದೆ, ವಾರ್ಡ್ ಒಂದರಲ್ಲಿ ಸಂಗ್ರಹಿಸಿರುವ ಕಲ್ಲು ಮಣ್ಣಿನ ರಾಶಿ ಮಧ್ಯೆ ಬಾಣಂತಿಯರು ಮತ್ತು ಹಸುಗೂಸುಗಳು  ಚಿಕಿತ್ಸೆ ಪಡೆಯುತ್ತಿದ್ದಾರೆ.

ಚಿಕಿತ್ಸೆ ನೀಡಲು ಸ್ಥಳ ಇಲ್ಲದಿದ್ದರೆ ಕನಿಷ್ಟ ಪಕ್ಷ ಇಲ್ಲಿರುವ ಕಲ್ಲು ಮಣ್ಣಿನ ಸಂಗ್ರಹ ಮತ್ತಿತರೇ ಕಟ್ಟಡ ಸಾಮಾಗ್ರಿಯನ್ನು ತೆರವುಗೊಳಿಸಿ ಅಲ್ಲಿ ಅವರಿಗೆ ಚಿಕಿತ್ಸೆ ನೀಡಬಹುದಿತ್ತು.

ಈ ಬಗ್ಗೆ ಆಸ್ಪತ್ರೆಯ ವೈದ್ಯಾಧಿಕಾರಿ ರಾಮಶೆಟ್ಟಿ ಅವರನ್ನು ಕೇಳಿದರೆ, ಅಂಗನವಾಡಿ, ಹಾಸ್ಟಲ್‍ಗಳ ಮೂಲಕ ಯುವತಿಯರಿಗೆ ವಿತರಿಸಲು ಕಳಿಸಿರುವ ಶುಚಿ ಪ್ಯಾಡ್‍ಗಳನ್ನು ವಾರ್ಡುಗಳಲ್ಲಿ ಸಂಗ್ರಹಿಸಿದ್ದು ಅವುಗಳ ವಿತರಣೆ ಆಗದಿರುವುದರಿಂದ, ಅನಿವಾರ್ಯವಾಗಿ ಬಾಣಂತಿಯರಿಗೆ ಶಸ್ತ್ರಚಿಕಿತ್ಸೆ ಮಾಡಿ ಹೊಸ ವಾರ್ಡಿನಲ್ಲಿ ಚಿಕಿತ್ಸೆ ನೀಡಲಾಗಿದೆ. ದುರಸ್ಥಿ ಕಾರ್ಯ ನಡೆದಿರುವುದುರಿಂದ ಮಣ್ಣು ಕಲ್ಲಿನಲ್ಲೆ ಚಿಕಿತ್ಸೆ ನೀಡುವಂತಾಗಿದೆ

LEAVE A REPLY

Please enter your comment!
Please enter your name here