ಗಂಗಾ ಜಯಂತ್ಯೋತ್ಸವ

0
177

ಮಂಡ್ಯ/ ಮಳವಳ್ಳಿ: ಗಂಗಾ ಜಯಂತ್ಯೋತ್ಸವ ಅಂಗವಾಗಿ ದಶಗಂಗೆಯ ಬ್ರಹ್ಮಿಗಂಗೆಯನ್ನು ಮಹಿಳೆಯರು ಪೂಜೆ ಸಲ್ಲಿಸಿ ಮಳವಳ್ಳಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಮಳವಳ್ಳಿ ಪಟ್ಟಣ ಗಂಗಾ ಮತ ಬೀದಿಯ ಅಂಬಿಗರಚೌಡಯ್ಯಗೇರಿಯ ಯಜಮಾನ ಗಂಗರಾಜು ಮತ್ತು ಬಸಪ್ಪ ನೇತೃತ್ವದಲ್ಲಿ ಬ್ರಹ್ಮಿಗಂಗೆಯನ್ನು ಹೊಸನೀರು ತಂದು ಮಹಿಳೆಯರು ಮೆರೆವಣಿಗೆ ಮೂಲಕ ಗಂಗಾದೇವಿ ದೇವಸ್ಥಾನ ಕ್ಕೆ ತರಲಾಯಿತು. ಇದೇ ಸಂದಭ೯ದಲ್ಲಿ ಗಂಗಾ ಮತ ಜನಾಂಗದವರು ಮೀನು ಹಿಡಿಯುವ ಬಲೆ ಹಾಗೂ ಬೋಟು ಗಳನ್ನು ಪೂಜೆ ಸಲ್ಲಿಸಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಜನಾರ್ದನಸ್ವಾಮಿ, ಮಂಜಣ್ಣ,ನಂಜುಂಡಯ್ಯ, ಶಿವಮಾಧು, ಸೇರಿದಂತೆ ಮತ್ತಿತ್ತರರು ಇದ್ದರು

LEAVE A REPLY

Please enter your comment!
Please enter your name here