ಸ್ಮಶಾನ ಭೂಮಿಗಾಗಿ ಪ್ರತಿಭಟನೆ

0
171

ಮಂಡ್ಯ/ ಮಳವಳ್ಳಿ: ತಾಲ್ಲೂಕಿನಾದ್ಯಂತ ಬರದ ಬವಣೆಯಲ್ಲಿ ಬೆಂದಿರುವ ರೈತ ಕೂಲಿಕಾರರಿಗೆ ಬರಪರಿಹಾರ ನೀಡಲು, ಉದ್ಯೋಗ ಖಾತ್ರಿ ಯೋಜನೆ ಸಮರ್ಪಕ ಜಾರಿ ಮಾಡಲು ಹಾಗೂ ಎಲ್ಲಾ ಹಳ್ಳಿಗಳಿಗೂ ಕಡ್ಡಾಯವಾಗಿ ಸ್ಮಶಾನ ಭೂಮಿ ನೀಡಲು ಒತ್ತಾಯಿಸಿ ಕನಾ೯ಟಕ ಪ್ರಾಂತ ಕೂಲಿಕಾರರ ಸಂಘ ವತಿಯಿಂದ ಮಳವಳ್ಳಿ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು . ಇದೇ ಸಂದಭ೯ದಲ್ಲಿ ಕೂಲಿಕಾರರ ಸಂಘದ ಜಿಲ್ಲಾದ್ಯಕ್ಷ ಪುಟ್ಟ ಮಾದು. ಮಾತನಾಡಿ. ರೈತ ಕೂಲಿಕಾರರಿಗೆ ತಕ್ಷಣವೇ ಬರಿಪರಿಹಾರ ಹಣ ಮತ್ತು ಬ್ಯಾಂಕ್ ಸಾಲ ವಿತರಿಸಬೇಕು. ದನ ಎಮ್ಮೆ ಆಡು, ಕುರಿಗಳಿಗೆ ಮೇವು ಮತ್ತು ನೀರುಒದಗಿಸಬೇಕು. ವಸತಿ ರಹಿತರಿಗೆ ವಸತಿ ಕಲ್ಪಿಸಬೇಕು ಹಾಗೂ ಅಕ್ರಮವಾಗಿ ಸರ್ಕಾರಿ ಭೂಮಿಯಲ್ಲಿ ವಾಸವಿರುವವರಿಗೆ ಸಕಾ೯ರಿ ಹಕ್ಕು ಪತ್ರ ನೀಡಿ ಮನೆ ನಿರ್ಮಿಸಬೇಕು ಸೇರಿದಂತೆ ವಿವಿದ ಬೇಡಿಕೆಗಳನ್ನು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ತಾಲ್ಲೂಕು ಅದ್ಯಕ್ಷ ಶಿವಮಲ್ಲು, ಕಾರ್ಯದರ್ಶಿ ಸರೋಜಮ್ಮ, ಕೆಂಪರಾಜು. ಹನುಮೇಗೌಡ, ಸೇರಿದಂತೆ ನೂರಾರು ಮಂದಿ ಇದ್ದರು

LEAVE A REPLY

Please enter your comment!
Please enter your name here