ಮಂದಗತಿ ಕಾಮಗಾರಿ – ಸಾರ್ವಜನಿಕರ ಆಕ್ರೋಶ

0
163

ಬೆಂಗಳೂರು (ಕೃಷ್ಣರಾಜಪುರ): ಆರು ತಿಂಗಳಲ್ಲಿ ಮುಗಿಯಬೇಕಿದ್ದ ರೈಲ್ವೆ ಕೆಳಸೇತುವೆ ಕಾಮಗಾರಿಯು ಮಂದಗತಿಯಲ್ಲಿ ಸಾಗುತ್ತಿರುವುದರಿಂದ ವಾಹನ ಸಾವಾರರು ಮತ್ತು ಸಾರ್ವಜನಿಕರು ನಿತ್ಯ ಪರದಾಡುವಂತಾಗಿದೆ. ಕ್ಷೇತ್ರದ ಹೊರಮಾವು ಸಮೀಪ ಬಿಡಿಎ ಅನುದಾನದಲ್ಲಿ ರೈಲ್ವೆ ಇಲಾಖೆ ಕೈಗೊಂಡಿರುವ ರೈಲ್ವೆ ಕೆಳಸೇತುವೆ ಕಾಮಗಾರಿಯು ಮಂದಗತಿಯಲ್ಲಿ ಸಾಗುತ್ತಿರುವುದರಿಂದ ಸುತ್ತಮುತ್ತಲ ಪ್ರದೇಶದ ನಿವಾಸಿಗಳು 7ರಿಂದ 8 ಕಿ.ಮೀ ಸುತ್ತುವಂತಾಗಿದ್ದು ನಿತ್ಯ ಸಂಚಾರದಟ್ಟಣೆಯಲ್ಲಿ ವನವಾಸ ಪಡುವಂತಾಗಿದೆ. ಹೊರ ವರ್ತುಲ ರಸ್ತೆಯಿಂದ ಹೊರಮಾವು. ಕಲ್ಕೆರೆ. ಬಿದರಹಳ್ಳಿ, ಆವಲಹಳ್ಳಿ ಮೂಲಕ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತಿದ್ದವು,  ನಗರ ಮತ್ತು ಗ್ರಾಮೀಣ ಪ್ರದೇಶಕ್ಕೆ ಸಂಪರ್ಕ ಕೊಂಡಿಯಾಗಿರುವ ಈ ರಸ್ತೆಯಲ್ಲಿ ಪ್ರತಿ ಅರ್ದ ಗಂಟೆ ಗಳಿಗೊಮ್ಮೆ ರೈಲುಗಳು ಸಂಚರಿಸುತ್ತೆ ಹೀಗಾಗಿ ಕೀಮೀಗಟಲ್ಲೆ ಸಂಚಾರ ದಟ್ಟಣೆ ಉಂಟಾಗಿ ಗಂಟೆಗಟ್ಟಲೇ ನಿಲ್ಲುವಂತಾಗಿತ್ತು. 30 ವರ್ಷಗಳ ಬೇಡಿಕೆಯಾಗಿದ್ದ ರೈಲ್ವೆ ಕೆಳಸೇತುವೆ ನಿರ್ಮಾಣದ ಯೋಜನೆ ರೂಪು ರೇಷವನ್ನು ಸಿದ್ದಪಡಿಸಿ ಕಳೆದ ಜುಲೈ 16 ರಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ 25ಕೋಟಿ ವೆಚ್ಚದಲ್ಲಿ ರೈಲ್ವೆ ಕೆಳಸೇತುವೆ ಹಾಗೂ ಸಂಪರ್ಕ ರಸ್ತೆಗಳ ನಿರ್ಮಾಣ ಕಾಮಗಾರಿಗೆ ಶಾಸಕ ಬಿ.ಎ.ಬಸವರಾಜ ಭೂಮಿ ಪೂಜೆ ನೆರವೇರಿಸಿ ಆರು ತಿಂಗಳಲ್ಲಿ ಪೂರ್ಣಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಕೊಡಲಾಗವುದು ಎಂದು ಭರವಸೆ ನೀಡಿದ್ದರು. ಆದರೆ ಕಾಮಗಾರಿಯು ಮಂದಗತಿಯಲ್ಲಿ ಸಾಗುತ್ತಿರುವುದು ಸ್ಥಳೀಯರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಇಲ್ಲಿನ ಮುಖ್ಯರಸ್ತೆಯನ್ನು ಮುಚ್ಚಿ ಪರ್ಯಾಯ ರಸ್ತೆಗಳನ್ನು ಬಳಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ, ಇದರಿಂದ ಪರ್ಯಾಯ ರಸ್ತೆಗಳಾದ ಟಿ.ಸಿ.ಪಾಳ್ಯ ಮುಖ್ಯರಸ್ತೆ ಹಾಗೂ ಬಾಬುಸಪಾಳ್ಯ ಮುಖ್ಯರಸ್ತೆಯನ್ನು ಅವಲಂಬಿಸಲಾಗಿದ್ದು 7ರಿಂದ 8 ಕಿಮೀ ಸುತ್ತಬೇಕಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಾಹನ ಚಾಲಕ ಸುರೇಶ್ ಬೇಸರ ವ್ಯಕ್ತಪಡಿಸುತ್ತಾರೆ. ಪರ್ಯಾಯ ಮುಖ್ಯರಸ್ತೆಗಳಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತಿರುವುದರಿಂದ ಗಂಟೆಗಟ್ಟಲೆ ಸಂಚಾರದಟ್ಟಣೆ ಉಂಟಾಗುತ್ತದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು ನೌಕರರಿಗಂತೂ ನಿತ್ಯ ತೊಂದರೆ ತಪ್ಪಿದ್ದಲ್ಲ, ದೂರದ ಗ್ರಾಮಗಳಿಗೆ ಪ್ರಯಾಣ ಬೆಳಸುವ ಪ್ರಯಾಣಿಕರಿಗೆ ಬೇರೆ ವಿಧಿಯಿಲ್ಲದೆ ದುಪ್ಪಟ್ಟು ಹಣ ಕೊಟ್ಟು ತೆರಳಬೇಕಾದ ಅನಿರ್ವಾಯ ಎದುರಾಗಿದೆ. ಪರ್ಯಾಯ ರಸ್ತೆಗಳ ಮೂಲಕ ಪ್ರಯಾಣಿಕರು ಹೋಗುವುದರಿಂದ ಆಟೋಗಳಿಗೆ ಬರುವವರ ಸಂಖ್ಯೆ ಅತಿವಿರಳವಾಗಿದೆ ಅವರ ವ್ಯಾಪಾರದಲ್ಲೂ ಇಳಿಮುಖವಾಗಿ ಸಾಕಷ್ಟು ತೊಂದರೆಗೊಳಪಟ್ಟಿದ್ದಾರೆ. ಕಾಮಗಾರಿಯ ವಿಷಯದಲ್ಲಿ ವಿಳಂಬ ದೋರಣೆ ಅನುಸರಿಸದೆ ಆದಷ್ಟೂ ಬೇಗ ಪೂರ್ಣಗೊಳಸಿ ವಾಹನ ಸಂಚಾರಕ್ಕೆ ಅನುವುಮಾಡಿಕೊಡಬೇಕೆಂದು ಸ್ಥಳೀಯ ನಿವಾಸಿ ವಿನೋದ್ ಆಗ್ರಹಿಸಿದರು.

LEAVE A REPLY

Please enter your comment!
Please enter your name here