ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಣೆ

0
149

ಮಹದೇವಪುರ: ಮಕ್ಕಳು ಶಿಕ್ಷಣದಿಂದ ವಂಚಿತರಾದರೆ ದೇಶದ ಬೆಳವಣಿಗೆಗೆ ಮಾರಕವಾಗಲಿದೆ ಎಂದು ಶಾಸಕ ಅರವಿಮದ ಲಿಂಬಾವಳಿ ಹೇಳಿದರು.
ಕ್ಷೇತ್ರದ ದೊಡ್ಡಗುಬ್ಬಿ, ಯರಪ್ಪನಹಳ್ಳಿ ಮತ್ತು ಕಾಡಸೊಣಪ್ಪನಹಳ್ಳಿ ಗ್ರಾಮಗಳ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಿ ನಂತರ ಮಾತನಾಡಿದ ಅವರು ಕೌಟುಂಬಿಕ ಸಮಸ್ಯೆಗಳು, ಬಡತನದಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗುವ ಸಾದ್ಯತೆ ಹೆಚ್ಚು ದೇಶದ ಮುಂದಿನ ಪ್ರಜೆಗಳಾದ ಮಕ್ಕಳಿಗೆ ಉತ್ತಮ ಶಿಕ್ಷಣ ಕಲ್ಪಿಸಿ ಅವರ ಭವಿಷ್ಯವನ್ನು ಉಜ್ವಲಗೊಳಿಸುವಲ್ಲಿ ಸಂಘ ಸಂಸ್ಥೆಗಳು, ಸ್ಥಳೀಯ ಮುಖಂಡರು ಕಾರ್ಯಪ್ರವೃತ್ತರಾಗಬೇಕೆಂದು ಹೇಳಿದರು.
ಆರ್ಥಿಕವಾಗಿ ಹಿಂದುಳಿದ ದೇಶದ ಪ್ರಜೆಗಳ ಜೀವನ ಸುಧಾರಣೆಯೂ ಸಹ ಶಿಕ್ಷಣದಿಂದ ಸಾಧ್ಯ, ಸರ್ಕಾರಿ ಶಾಲೆಯಲ್ಲೇ ವ್ಯಾಸಾಂಗ ಮಾಡಿರುವ ಹಲವು ಗಣ್ಯರು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವುದು ಇಂದಿನ ಪೀಳಿಗೆಗೆ ಪ್ರೇರಣೆಯಾಗಿದೆ, ಪ್ರಜ್ಞಾವಂತ ಪ್ರಜೆಗಳು ದೇಶದ ಮುಂದಿನ ಸಾರಥಿಗಳಾಗಬೇಕೆಂದರು.ದೇಶ ಪ್ರಗತಿ ಸಾಧಿಸಲು ಪ್ರಜೆಗಳು ಪ್ರಜ್ಞಾವಂತರಗುವುದು ಅವಶ್ಯಕವಾಗಿದೆ, ಪ್ರಜ್ಞಾವಂತ ಪ್ರಜೆಗಳ ನಿರ್ಮಾಣಕ್ಕೆ ಶಿಕ್ಷಣವೂ ಸಹ ಅಷ್ಟೆ ಮುಖ್ಯವಾದ ಕಾರಣವಾಗಿದೆ. ಮುಂದಿನ ಪ್ರಜೆಗಳಾಗಿರುವ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು ತಿಳಿಸಿದರು.ದೂರದ ಊರುಗಳಿಂದ ಶಾಲೆಗಳಿಗೆ ಬರುವ ಮಕ್ಕಳಿಗೆ ಸರ್ಕಾರ ವಿತರಿಸುವ ಸೈಕಲ್ ಸದುಪಯೋಗವಾಗಲಿದೆ ಎಂದರು.ಈ ಸಂದರ್ಭದಲ್ಲಿ ಜಿ.ಪಂ ಸದಸ್ಯೆ ಮಾಲ ಮಾರುತಿಕುಮಾರ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾರುತಿಕುಮಾರ್, ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ನಟರಾಜ್, ತಾ.ಪಂ ಮಾಜಿ ಉಪಧ್ಯಕ್ಷೇ ಲಕ್ಷ್ಮಮ್ಮನಂಜೇಗೌಡ, ಸೇರಿದಂತೆ ಶಿಕ್ಷಕ ವೃಂಧದವರು, ವಿಧ್ಯಾರ್ಥಿಗಳು ಹಾಜರಿದ್ದರು.ಸುದ್ದಿಚಿತ್ರ 31ಎಮ್‍ಹೆಚ್‍ಪುರ1ರಲ್ಲಿ ಮಹದೇವಪುರ ಕ್ಷೇತ್ರದ ದೊಡ್ಡಗುಬ್ಬಿಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಾಸಕ ಅರವಿಂದ ಲಿಂಬಾವಳಿ ವಿಧ್ಯಾರ್ಥಿಗಳಿಗೆ ಸೈಕಲ್ ವಿತರಿಸಿದರು.

LEAVE A REPLY

Please enter your comment!
Please enter your name here