ಮಕ್ಕಳ ಕಳ್ಳರ ವದಂತಿ, ಅಪರಿಚಿತರನ್ನು ಥಳಿಸಿದ ಘಟನೆ

0
203

ರಾಯಚೂರು: .ಮಕ್ಕಳನ್ನು ಅಪಹರಿಸಲು ಕಳ್ಳರು ಬಂದಿದ್ದಾರೆ ಎಂಬ ವದಂತಿ ಹರಡುತ್ತಿದ್ದಂತೆಯೇ ಆತಂಕಗೊಂಡ ಜಿಲ್ಲೆಯ ಜನರು ಭಯ ಬೀತರಾಗಿದ್ದು ನಿನ್ನೆ ರಾತ್ರಿ ಅಪರಿಚಿತ ತಂಡವನ್ನು ನಗರ ನಿವಾಸಿಗಳು ಥಳಿಸಿದ ಘಟನೆ ನಡೆದಿದೆ.

ರಾಜ್ಯದ ಕೆಲ ಜಿಲ್ಲೆಯಲ್ಲಿ ಮಕ್ಕಳ ಕಳ್ಳರು ಬಂದಿದ್ದಾರೆ.ಎಂಬ ವದಂತಿ ಹಬ್ಬಿದ ಬೆನ್ನಲ್ಲೆ ಜಿಲ್ಲೆಯಲ್ಲಿ ಕೆಲ ಗ್ರಾಮಗಳಲ್ಲಿ ಜನರು ರಾತ್ರಿ ಇಡಿ ಬಡಿಗೆಗಳನ್ನು ಹಿಡಿದು ಜಾಗರಣೆ ಮಾಡಿದ್ದಾರೆ.
ರಾಯಚೂರು ನಗರದ ಎಲ್.ಬಿ.ಎಸ್ ನಗರ ಮತ್ತು ಸಿಯಾತಲಾಬ್ ಸೇರಿದಂತೆ ಹಲವು ಬಡಾವಣೆಗಳಲ್ಲಿ ಜನರು ರಾತ್ರಿ ನಿದ್ದೆಗೆಟ್ಟು ಕಾದು ಕುಳಿತಿದ್ದಾರೆ. ಅಪರಿಚಿತರನ್ನು ಅವರೆ ಮಕ್ಕಳ ಕಳ್ಳರು ಎಂದು ಶಂಕಿಸಿ ನಾಲ್ಕೈದು ಜನರನ್ನು ಥಳಿಸಿದ್ದಾರೆ.

ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಅಪರಿಚಿತರನ್ನು ಥಳಿಸಿದ ವೇಳೆ ಪೋಲಿಸರು ಜನರನ್ನು ಚದುರಿಸಲು ಲಘು ಲಾಠಿ ಬೀಸಿದರು.ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಯೂ ಜನರು ಜಾಗರಣೆ ಮಾಡುತ್ತಿದ್ದಾರೆ.

ಸುದ್ದಿ ಹೆಚ್ಚು ಹರಡುತ್ತಿದ್ದಂತೆಯೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ತುರ್ತು ಪತ್ರಿಕಾಗೋಷ್ಠಿಯನ್ನು ಕರೆದಿದ್ದಾರೆ. ಮಕ್ಕಳ ಕಳ್ಳರ ವದಂತಿ ಸತ್ಯ ಅಥವಾ ಸುಳ್ಳು ಎಂಬ ಮಾಹಿತಿಯನ್ನು ನೀಡಲಿದ್ದಾರೆ.

LEAVE A REPLY

Please enter your comment!
Please enter your name here