ಮಕ್ಕಳ ಗ್ರಾಮ ಸಭೆ..

0
452

ಚಿಕ್ಕಬಳ್ಳಾಪುರ/ಶಿಡ್ಲಘಟ್ಟ:ಮಕ್ಕಳ ಗ್ರಾಮ ಸಭೆ ಹಾಗೂ ಚೀಮಂಗಲ ಸರ್ಕಾರಿ ಪ್ರೌಢ ಶಾಲೆಯಲ್ಲಿ ಗ್ರಂಥಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಗೋಪಾಲ್ ಮಾತನಾಡಿ ಮಕ್ಕಳು ಬಹಳ ಎಚ್ಚರಿಕೆಯಿಂದ ಹಾಗೂ ಚಾಣಾಕ್ಷತನದಿಂದ ಬದುಕುವಂತ ಹೊಣೆಗಾರಿಕೆ ಮಕ್ಕಳದಾಗಿದೆ ಅಪರಿಚಿತರಿಂದ ದೂರ ಉಳಿಯಬೇಕು ಈಗಿನ ದಿನಗಳಲ್ಲಿ ಮಕ್ಕಳು ಎಂದರು.ಮಕ್ಕಳ ದೌರ್ಜನ್ಯ ಮತ್ತು ಹಕ್ಕುಗಳ ಕುರಿತು ವಕೀಲ ರಾಮೇಗೌಡರು ತಿಳಿಸಿದರು. ಜ್ಞಾನ ಸಂಪದನೆ ವೃದ್ಧಿಯಾಗಲು ಪ್ರತಿಯೊಬ್ಬರು ಗ್ರಂಥಾಲಯದಲ್ಲಿರು ಪುಸ್ತಕಗಳನ್ನು ಬಳಸಿಕೊಳ್ಳಬೇಕು ಎಂದರು. ಮಕ್ಕಳ ಗ್ರಾಮ ಸಭೆಯಲ್ಲಿ ವಿದ್ಯಾಭ್ಯಾಸ ಮಾಡಲು ಮತ್ತು ಶಾಲಾ ಆವರಣದಲ್ಲಿ ಆಗುತ್ತಿರುವ ತೊಂದರೆಗಳು ಸರಿಪಡಿಸುವಂತೆ ವಿದ್ಯಾರ್ಥಿಗಳು ತಿಳಿಸಿದರು. ಕಾರ್ಯಕ್ರಮದಲ್ಲಿ ಚೀಮಂಗಲ ಗ್ರಾಮ ಪಂಚಾಯಿತಿ ಅದ್ಯೆಕ್ಷೆ ಸುಮ ಮಂಜುನಾಥ್, ಶಾಲೆಯ ಮುಖ್ಯ ಶಿಕ್ಷಕ ಶಿವಶಂಕರ್, ಶಾಲಾ ಸಿಬ್ಬಂದಿ ಹಾಗೂ ಮುಂತಾದವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here