ಮಚ್ಚಿನಿಂದ ಭೀಕರ ಹಲ್ಲೆ ನಡೆಸಿ ಹತ್ಯೆ..

0
115

ಬೆಂಗಳೂರು ಗ್ರಾಮಾಂತರ/ಹೊಸಕೋಟೆ:ಬುಧವಾರ ತಡ ರಾತ್ರಿ ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆ ರಸ್ತೆಯ‌ ಲಕ್ಕೊಂಡನಹಳ್ಳಿ ಯಲ್ಲಿ ೬೬ವರ್ಷದ ವ್ಯಕ್ತಿಯನ್ನು ಮಚ್ಚಿನಿಂದ ಭೀಕರ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ.
ಲಕ್ಕೊಂಡನಹಳ್ಳಿಯ ಗ್ರಾಮದ ನಿವಾಸಿಯೇ ಆದ ನಾರಾಯಣಸ್ವಾಮಿ ೬೬ ಮೃತ ವ್ಯಕ್ತಿ, ತಾಲ್ಲೂಕಿನಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದ ನಾರಾಯಣಸ್ವಾಮಿ, ನಿನ್ನೆ ತಡ ರಾತ್ರಿ ಫೋನ್ ಕರೆ ಬಂದ ಹಿನ್ನೆಲೆ ನಾರಾಯಣಸ್ವಾಮಿ ಮನೆಯವರಿಗೆ ತಿಳಿಸಿ ಹೋರ ಹೋಗಿದ್ದು ಮುಂಜಾನೆ ರಾಜ್ಯ ಹೆದ್ದಾರಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಮೊದಲಿಗೆ ಅಪಘಾತ ಎಂದು ಭಾವಿಸಲಾಗಿತ್ತು ಘಟನಾ ಸ್ಥಳದಲ್ಲಿ ಮಚ್ಚು ಪತ್ತೆಯಾಗಿದ್ದು ಮೃತರ ಕುತ್ತಿಗೆ ಭಾಗದಲ್ಲಿ ಗಾಯದ ಗುರುತುಗಳು ಪತ್ತೆಯಾಗಿವೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ತನಿಖೆ ಮುಂದುವರೆದಿದೆ.
ಸಧ್ಯ ಪ್ರಕರಣ ದಾಖಲಿಸಿರುವ ಹೊಸಕೋಟೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಬೈಟ್: ಮಲ್ಲಿಕಾರ್ಜುನ ಬಲದಂಡೆ,
ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.

ಶಾಂತಮ್ಮ, ಮೃತನ ಪತ್ನಿ

ಕಾವ್ಯ, ಮೃತನ ಪುತ್ರಿ.

LEAVE A REPLY

Please enter your comment!
Please enter your name here