ಮತದಾನ ಮಹತ್ವದ ಜಾಗೃತಿ ಅಭಿಯಾನ..

0
142

ಬೆಂಗಳೂರು ಗ್ರಾಮಾಂತರ/ದೇವನಹಳ್ಳಿ:ವಿಧಾನಸಭಾ ಕ್ಷೇತ್ರದಲ್ಲಿ ನೂರಕ್ಕೆ ನೂರರಷ್ಟು ಮತದಾನ ಆಗಬೇಕು ಮತದಾನ ಮಹತ್ವ ಜಾಗೃತಿ ಜಾತ ಅಭಿಯಾನ ಮತ್ತು ಸಹಿ ಸಂಗ್ರಹದ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ದೇವನಹಳ್ಳಿ ಪಟ್ಟಣದ ಟಿಪ್ಪು ವೃತ್ತದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶಾಲಾ ಮಕ್ಕಳು ಮತ್ತು ಸಾರ್ವಜನಿಕರ ಸಹಾಯದಿಂದ ಮತದಾನ ಜಾಗೃತಿ ಅಭಿಯಾನ ಜಾತ ಕಾರ್ಯಕ್ರಮ ನಡೆಯಿತು .ಇದೇ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ನಿರ್ವಹಣಾಧಿಕಾರಿ ಶ್ರೀನಿವಾಸ ಮೂರ್ತಿ ಮಾತನಾಡಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರ ಕ್ಷೇತ್ರದ ಎಲ್ಲಾ ಗ್ರಾಮ ಪಂಚಾಯಿತಿಯಲ್ಲೂ ಈ ಕಾರ್ಯಕ್ರಮವನ್ನು ನಡೆಸಲಾಗಿದೆ ಜನರಲ್ಲಿ ಮತದಾನ ನಿಮ್ಮ ಹಕ್ಕು ಕಡ್ಡಾಯವಾಗಿ ಮತ ಚಲಾಯಿಸಿ ಯಾವುದೇ ಕಾರಣಕ್ಕೂ ಮತದಾನ  ವಂಚಿತರಾಗಬೇಡಿ ಎನ್ನುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಮಾಡಲಾಗಿದೆ ಹಾಗೂ ಪ್ರತಿ  ಹಳ್ಳಿಗಳಲ್ಲಿಯೂ ಬೀದಿ ನಾಟಕ ಪ್ರದರ್ಶಿಸಿ ಮತದಾನದ ಮಹತ್ವ  ತಿಳಿಸಲಾಗುತ್ತಿದೆ ಹಾಗೂ ಮಿಂಚಿನ ನೋಂದಣಿ ಕಾರ್ಯಕ್ರಮದಲ್ಲಿ ೧೩೦೬ ಅರ್ಜಿಗಳು ಹೊಸ ಸೇರ್ಪಡೆಗೆ ಬಂದಿವೆ ಎಂದು ತಿಳಿಸಿದರು .೪೫ದಿನಗಳಿಂದ  ಸ್ವಫ ಕಾರ್ಯಕ್ರಮದ ಅಡಿ ಮತದಾರರ ಪಟ್ಟಿ ಪರೀಕ್ಷಣೆ ಕಾರ್ಯ ಆಗಿದೆ ಎಲ್ಲ ಗ್ರಾಮಗಳಲ್ಲಿ ಆಟೋ ಪ್ರಚಾರ ,ಬೀದಿ ನಾಟಕ ,ತಮಟೆ ಡಂಗೂರ ಮತ್ತು ಕರಪತ್ರಗಳ ಮೂಲಕ ಹೀಗೆ ಎಲ್ಲ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮತದಾನ ಜಾಗೃತಿ ಕಾರ್ಯಕ್ರಮ ನಡೆಸಲಾಗಿದೆ ಎಂದರು .
ಇದೇ ತಿಂಗಳ ೧೪ ನೇ ತಾರೀಕಿನವರೆಗೆ ಅವಕಾಶ ವಿರುತ್ತದೆ ಮತದಾನ ಪಟ್ಟಿಯಲ್ಲಿ ಕೈಬಿಟ್ಟಿರುವ ಹಾಗೂ ಹೊಸ ಸೇರ್ಪಡೆ ತಿದ್ದುಪಡಿಗೆ ಅವಕಾಶ ಇರುತ್ತದೆ .ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರೂ ಇದೇ ಸಂದರ್ಭದಲ್ಲಿ ಶಿಕ್ಷಣಾಧಿಕಾರಿ ಗಾಯತ್ರಿ. ಮತ್ತು ದೇವನಹಳ್ಳಿ ಪುರಸಭಾ ಮುಖ್ಯಾಧಿಕಾರಿ ಅಂಬಿಕಾ ಹಾಗೂ ತಾಲೂಕು ದಂಡಾಧಿಕಾರಿ ರಾಜಣ್ಣ .ಮತ್ತು ಪುರಸಭೆ ಸಿಬ್ಬಂದಿ ಹಾಗೂ ಶಾಲಾ ಮಕ್ಕಳು ಶಿಕ್ಷಕರು ಹಾಗೂ ಸಾರ್ವಜನಿಕರು ಹಾಜರಿದ್ದರು..

LEAVE A REPLY

Please enter your comment!
Please enter your name here