ಮತದಾರರ ಜಾಗೃತಿ ಅಭಿಯಾನ.

0
183

ವಿಜಯಪುರ/ಸಿಂದಗಿ:ಮತದಾರ ಗುರುತಿನ ಚೀಟಿ ಇದ್ದರೆ ಸಾಲದು ಮತದಾರ ಪಟ್ಟಿಯಲ್ಲಿ ಹೆಸರು ಕೂಡ ಇರಬೇಕೆಂದು ಶಿರಸ್ತೆದಾರ ಸುರೇಶ ಮ್ಯಾಗೇರಿ ಅವರು ಹೇಳಿದರು.ಸಿಂದಗಿ ಪಟ್ಟಣದ ವಿವೇಕಾನಂದ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಮತದಾರರ ಜಾಗ್ರತಿ ಅಭಿಯಾನ ನಡೆಸಿ ಮಾತನಾಡಿದ ಅವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಮತದಾನದ ಹಕ್ಕು ಲಭಿಸಬೇಕು ಎಂಬುದು ಚುನಾವಣಾ ಆಯೋಗದ ಆಶಯವಾಗಿದ್ದು, ಈ ಕುರಿತು ಜಾಗೃತಿ ಮೂಡಿಸಿ 18 ವರ್ಷ ಮೇಲ್ಪಟ್ಟವರು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವ ಅಗತ್ಯವಿದೆ ಎಂದರು.ಸಿ.ಎಮ್ ಮನಗೂಳಿ ಕಾಲೇಜಿನಿಂದ ಆರಂಭಗೊಂಡ ಮತದಾರರ ಜಾಗ್ರತಿ ಅಭಿಯಾನ ಜಾಥಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮತದಾನ ಮಹಾದಾನ, ಮತದಾನ ಪವಿತ್ರ ಹಕ್ಕು ಎಂದು ಘೋಷಣೆಗಳನ್ನು ಕೂಗುತ್ತ ಸಾಗಿದ ಸಿ.ಎಮ್ ಮನಗೂಳಿ ಕಾಲೇಜಿನ ವಿದ್ಯಾರ್ಥಿ/ನಿಯರು ವಿವಿದ ಶಾಲೆಗಳ ವಿದ್ಯಾರ್ಥಿಗಳು ಸಾರ್ವಜನಿಕರ ಗಮನ ಸೆಳೆದರು.ಇದೆ ಸಂದರ್ಭದಲ್ಲಿ ತಹಶೀಲದಾರ ವೀರೇಶ ಬಿರಾದಾರ, ಹೆಬ್ಬಾಳ ಸಿ.ಎಮ್ ಮನಗೂಳಿ ಕಾಲೇಜಿನ ಪ್ರಾಂಶುಪಾಲ ಡಾ| ವಿ.ವಿ ಸಾಲಿಮಠ, ಉಪನ್ಯಾಸಕರಾದ ಅರವಿಂದ ಮನಗೂಳಿ, ಶಶಿಕಾಂತ ಪೂಜಾರಿ, ಬಿ.ಜಿ. ಮಠ, ಜಿ.ಜಿ. ಕಾಂಬಳೆ, ಬಿ.ಡಿ ಮಾಸ್ತಿ, ಎಸ್.ಎಮ್. ಬಿರಾದಾರ ಎಸ್.ಎಸ್. ಪಾಟೀಲ, ಎಮ್.ಎಸ್ ಹೊಸಮನಿ, ಡಾ| ಎ.ಬಿ ಸಿಂದಗಿ, ಎಂ.ಜಿ. ಬಿರಾದಾರ ಜಾಥಾ ನೇತ್ರತ್ವ ವಹಿಸಿಕೊಂಡಿದ್ದರು..

ನಮ್ಮೂರು ಟಿವಿ ನಂದೀಶ ಹಿರೇಮಠ. ಸಿಂದಗಿ

LEAVE A REPLY

Please enter your comment!
Please enter your name here