ಮತಯಾಚನೆಗೆ ಚಾಲನೆ…

0
170

ಬೆಂಗಳೂರು/ಮಹದೇವಪುರ:- ಮಹದೇವಪುರ ವಿಧಾನಸಭಾಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರವಿಂದ ಲಿಂಬಾವಳಿ ಪ್ರಚಾರ ಅಭಿಯಾನಕ್ಕೆ ಕ್ಷೇತ್ರದ ಬೆಳಂದೂರು ವಾರ್ಡಿನ ಶ್ರೀ ಸೋಮೇಶ್ವರ ಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಕ್ಷೇತ್ರದಲ್ಲಿ ಕಳೆದ ಐದು ವರ್ಷಗಳಲ್ಲಿ ಅಭಿವೃದ್ಧಿ ಕೆಲಸದ ಸಾಧನಾ ಕೈಪಿಡಿ ಪುಸ್ತಕವನ್ನು ಮತ ದಾರರಿಗೆ ನೀಡುವ ಮುಕಾಂತರ ಮತಯಾಚನೆ ಮಾಡಿದರು.
ಪ್ರಚಾರದ ವೇಳೆ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಅರವಿಂದ್ ಲಿಂಬಾವಳಿ ಕ್ಷೇತ್ರದಲ್ಲಿ ಮುಖ್ಯವಾಗಿ ಐದು ಸಮಸ್ಯಗಳು ಕಾಡುತ್ತದೆ, ರಾಜ್ಯ ಸರ್ಕಾರಕ್ಕೆ ಎಷ್ಟೋ ಬಾರಿ ಮನವಿ ಮಾಡಿದರು ಯಾವದೆ ರೀತಿಯಲ್ಲಿ ಸ್ಪಂದಿಸಿಲ್ಲ ಎಂದರು.
ಟ್ರಾಫಿಕ್, ಕೆರೆಗಳು, ಜನರ ರಕ್ಷಣೆಗಾಗಿ ಸಿಸಿ ಟಿವಿ ಅಳವಡಿಕೆ, ಬಾಂಗ್ಲಾದೇಶ ಪ್ರಜಗಲನ್ನು ಗಡಿ ಪಾರು ಮಾಡುವುದು ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಬಗೆಹರಿಸ ಬೇಕಾದರೆ ಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕಾಗಿದೆ ಎಂದರು.
ಕ್ಷೇತ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ಮಾತ್ರ ಅಭಿವೃದ್ಧಿ ಸಾಧ್ಯವಾಗುತ್ತದೆ ತಿಳಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಬಿಜೆಪಿ ಅಧ್ಯಕ್ಷ ರಾಜಾರೆಡ್ಡಿ, ನಟರಾಜ್, ಪಾಲಿಕೆ ಸದಸ್ಯರು ಆಶಾ ಸುರೇಶ್, ಪುಷ್ಪ ಮಂಜುನಾಥ್, ಶ್ವೇತ ವಿಜಯ್ ಕುಮಾರ್, ಮುನಿಸ್ವಾಮಿ, ಮುಖಂಡರು ಜಯಚಂದ್ರ ರೆಡ್ಡಿ, ವೆಂಕಟಸ್ವಾಮಿ ರೆಡ್ಡಿ, ಮಹೇಂದ್ರ ಮೋದಿ, ಚನ್ನಸಂದ್ರ ಚಂದ್ರಶೇಖರ್, ಸುರೇಶ್, ಮಂಜುನಾಥ್ ಸೇರಿದಂತೆ ನೂರಾರು ಹಾಜರಿದ್ದರು.

LEAVE A REPLY

Please enter your comment!
Please enter your name here