ಮತ್ತೆ,ಮತ್ತೆ ಗುದ್ದಲಿ ಪೂಜೆ…!?

0
71

ಮಂಡ್ಯ/ಮಳವಳ್ಳಿ: ಗುದ್ದಲಿ ಪೂಜೆ ಮಾಡಿದ ಕಾಮಗಾರಿಯನ್ನು ಮತ್ತೆ ಹಾಲಿ ಶಾಸಕರು ಗುದ್ದಲಿಪೂಜೆ ಮಾಡುತ್ತಿದ್ದಾರೆ ಎಂದು ಮಳವಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ. ಕೆ.ಜೆ ದೇವರಾಜು ಆರೋಪಿಸಿದರು.
ಮಳವಳ್ಳಿ ಪಟ್ಟಣದ ಪ್ರವಾಸಿಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಈಗಾಗಲೇ ಮಿಕ್ಕರೆ ಗ್ರಾಮವನ್ನು ಕಳೆದ ಬಾರಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಶಿಲಾನ್ಯಾಸ ಮಾಡಿದ್ದಾರೆ. ಅದನ್ನು ಹಾಲಿ ಶಾಸಕರು ಕಳೆದ ಮೂರು ದಿನಗಳ ಹಿಂದೆ ಗುದ್ದಲಿ ಪೂಜೆ ಮಾಡಿದ್ದಾರೆ ಇದಲ್ಲದೆ ಸರ್ಕಾರಿ ಕಾರ್ಯಕ್ರಮಗಳಿಗೆ ಶಿಷ್ಟಾಚಾರ ಅನುಸರಿಸ ಬೇಕು ಅದನ್ನು ಉಲ್ಲಂಘನೆ ಮಾಡಿದ್ದು , ಇದನ್ನು ಪ್ರಶ್ನಿಸಿದ ಕಾರ್ಯಕರ್ತರಿಗೆ ಉಡಾಫೆ ಉತ್ತರ ನೀಡಿದ್ದು ಸರಿಯಲ್ಲ,. ಅವರು ಇರುವುದು ಸಮ್ಮಿಶ್ರ ಸರ್ಕಾರ ಎನ್ನುವುದು ಶಾಸಕರು ಮರೆಯಬಾರದು ಒಂದು ವೇಳೆ ಇದೇ ರೀತಿ ಮುಂದುವರೆದರೆ ಪ್ರತಿಭಟನೆ ಮಾಡ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಇನ್ನೂ ತಾ.ಪಂ ಅಧ್ಯಕ್ಷ ಆರ್.ಎನ್ ವಿಶ್ವಾಸ್ ಮಾತನಾಡಿ, ಶಾಸಕರು ಪಿಡಿಒಗಳಿಗೆ ಒತ್ತಡ ತಂದು ಗುದ್ದಲಿ ಪೂಜೆ ಮಾಡಿದ್ದಾರೆ. ಒಬ್ಬ ತಾ.ಪಂ‌ ಅಧ್ಯಕ್ಷ ರಾಗಿರುವುದು ಶಾಸಕರು ಮರೆತು ನಮ್ಮನ್ನು ಕಾರ್ಯಕ್ರಮಗಳಿಗೆ ಕರೆದಿಲ್ಲ ಎಂದು ಆರೋಪಿಸಿದರು. ಇನ್ನೂ ಜಿ.ಪಂ ಸದಸ್ಯೆ ಸುಜಾತಪುಟ್ಟುರವರು ಸಹ. ಶಾಸಕರ ಬಗ್ಗೆ ಅಸಮಾದಾನ ವ್ಯಕ್ತಪಡಿಸಿದರು ಗೋಷ್ಠಿಯಲ್ಲಿ ತಾ.ಪಂ ಅಧ್ಯಕ್ಷ ಆರ್. ಎನ್ ವಿಶ್ವಾಸ್ . ಉಪಾಧ್ಯಕ್ಷ ಮಾದು, ಜಿ.ಪಂ ಸದಸ್ಯೆ ಸುಜಾತಪುಟ್ಟು, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪುಟ್ಟರಾಮು, ತಾ.ಪಂ ಸದಸ್ಯರಾದ ನಾಗೇಶ್, ಸುಂದರೇಶ್,ಪುಟ್ಟಸ್ವಾಮಿ, ರಾಜು ಸೇರಿದಂತೆ ಹಾಜರಿದ್ದರು

LEAVE A REPLY

Please enter your comment!
Please enter your name here