ಮದುಮಗಳಂತೆ ಶೃಂರಗೊಂಡ ಕನ್ನಡ ವಿಶ್ವವಿದ್ಯಾಲಯ

0
559

ಬಳ್ಳಾರಿ/ ಹೊಸಪೇಟೆ:ನಾಳೆಯಿಂದ ಸೆ.18ರ ವರೆಗೆ ಸಡಗರ ಸಂಭ್ರಮದಿಂದ ಕನ್ನಡ ವಿವಿಯಲ್ಲಿ ನಡೆಯುವ 25 ವರ್ಷದ ಬೆಳ್ಳೆ ಹಬ್ಬಕ್ಕೆ ಬಣ್ಣ ಬಣ್ಣದ ಲೈಟ್ ಗಳಿಂದ ಶೃಂಗರಿಸಿದ್ದು, ವಿಶ್ವವಿದ್ಯಾಲಯದ ಸೌಂದರ್ಯ ಇನ್ನಷ್ಟು ಹೆಚ್ಚಿದೆ. ದೇಶ ವಿದೇಶಗಳಿಂದ ಪ್ರತಿ ದಿನ ಸಹಸ್ರಾರು ಪ್ರವಾಸಿಗರ ಆಗಮಿಸುವ ತಾಣ ಹಂಪಿ ಪರಿಸರದಲ್ಲಿ ನೆಲೆಸಿದ ಕವಿವಿ ಬೆಳ್ಳಿ ಮಹೋತ್ಸವಕ್ಕೆ ಭರ್ಜರಿ ಸಿದ್ದತೆ ನಡೆದಿದೆ. ವಿವಿಧ ಬಗೆಯ ಸಾಂಸ್ಕೃತಿಕ ಮೆರಗು ಸಾರುವ ಭಿತ್ತಿ ಚಿತ್ರಗಳಂತು ವಿವಿಗೆ ಆಗಮಿಸುವರ ಹೃದಯ ಕದೆಯುವಂತಿವೆ. ಕಳೆದ ನಾಲ್ಕೈದು ದಿನಗಳಿಂದ ತಾಯರಾಗುವ ಕವಿವಿ ತೇಟ್ ಮದುಮಗಳಂತೆ ಕಾಣುತ್ತಿದ್ದು ದೃಷ್ಟಿ ತೆಗೆಯಬೇಕಿದೆ.
ಈ ಸುಂದರ ಬೆಳ್ಳಿ ಹಬ್ಬಕ್ಕೆ ರಾಜ್ಯದ ಮುಖ್ಯಮಂತ್ರಿ ಸಿದ್ಯರಾಮಯ್ಯನವರು ಚಾಲನೆ ನೀಡುತ್ತಿರುವುದು ಒಂದೆಡೆ ಯಾದರೆ ಸ್ಥಳೀಯ ಕಲಾವಿದರ, ಕವಿಗಳ, ಸಾಹಿತಿಗಳು, ಚಿಂತಕರ, ವಾಗ್ಮೀಗಳ ಅಂತರಾಳದ ಅನುಭವ ಅನಾವರಣಗೊಳ್ಳಲು ಈ ಹಬ್ಬ 6 ದಿನಗಳ ವೇದಿಕೆಯಾಗಿದೆ. ಇನ್ನೂ ಇದೆ ವಿಶ್ವ ವಿದ್ಯಾಲಯವನ್ನು ಕಟ್ಟಿ ಬೆಳಸಿ ಪೋಷಿಸಿದವರಿಗೆ ಸನ್ಮಾನಗಳು ನಡೆಯಲಿವೆ. ಒಟ್ನಲ್ಲಿ ಈ. 6 ದಿನಗಳಲ್ಲಿ ವಿಜಯನಗರ ಸಾಮ್ರಾಜ್ಯದ ನೆನಪುಗಳಾಗುವುದಂತು ಸತ್ಯ.

LEAVE A REPLY

Please enter your comment!
Please enter your name here