ಮದುವೆಗೆ ಬಂದವರಿಗೆ ಸಸಿನೀಡಿದ ವಧು-ವರ..

0
292

ಅಕ್ಷತೆ ಬದಲು ಪುಷ್ಪದಳ ಅರ್ಪಣೆ.
ಮದುವೆಗೆ ಬಂದವರಿಗೆ ಸಸಿನೀಡಿದ ವಧು-ವರ..

ಬಾಗಲಕೋಟೆ: ನಗರದ ನೀಲಕಂಠೇಶ್ವರ ಕಲ್ಯಾಣ ಮಂಟಪದಲ್ಲಿ ಮಲ್ಲಿಕಾರ್ಜುನ ಹಾಸನ್ ಅವರು ತಮ್ಮಮದುವೆಯನ್ನ ವಿಶಿಷ್ಟತೆಯಿಂದ ಮಾಡಿ ಕೊಂಡ್ರು. ವಿವಾಹಕ್ಕೆ ಬಂದಿರುವ ಪ್ರತಿಯೊಬ್ಬರಿಗೂ ಒಂದೊಂದು ಸಸಿ ನೀಡಿ ಪರಿಸರ ಬಗ್ಗೆ ಜಾಗೃತಿಯನ್ನೂ ಮೂಡಿಸಿದ್ರು.ಇದು ಮದುವೆ ಸಂಭ್ರಮ, ಆದರೂ ಇಲ್ಲಿ ವಧು-ವರನಿಗೆ ಅಕ್ಷತೆ ಹಾಕಲಿಲ್ಲ,ಬದಲಾಗಿ ಪುಷ್ಪದಳ ಹಾಕಲಾಯಿತು.ಮಲ್ಲಿಕಾರ್ಜುನ ಮತ್ತು ಸೌಜನ್ಯ ವಿಶಿಷ್ಟವಾಗಿ ದಾಂಪತ್ಯಕ್ಕೆ ಕಾಲಿಟ್ಟಿದ್ದಲ್ಲದೆ, ಪರಿಸರಜಾಗೃತಿ ಮೂಡಿಸಿದ್ದು ಎಲ್ಲರ ಮೆಚ್ಚುಗೆ ಕಾರಣ ವಾಯಿತು.

ಅಲ್ಲದೆ ಅನ್ನದಾನವನ್ನು ಉಳಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವುದು ಅಲ್ಲದೆ, ದೇಶ ಪ್ರೇಮದ ಬಗ್ಗೆ, ಆಹಾರ ಉಳಿಸುವ ಹಾಗೂ ರಕ್ತದಾನ ಮಾಡುವಂತಹ ನಾಮಫಲಕ ಹಾಕಿ ಗಮನ ಸೆಳೆಯಲಾ ಯಿತು. ಒಟ್ಟಿನಲ್ಲಿ ದುಂದುವೆಚ್ಚ ಹಾಗೂ ಆಡಂಬರದ ಮದುವೆಗಳ ಮಧ್ಯೆ ಈ ರೀತಿಯಾಗಿ ವಿವಾಹ ಮಾಡಿಕೊಳ್ಳುವ ಮೂಲಕ ಇತರರಿಗೆ ಈ ನವಜೋಡಿ ಮಾದರಿಯಾ ಗಿದ್ದು ವಿಶೇಷ.

LEAVE A REPLY

Please enter your comment!
Please enter your name here