ಮದ್ಯದಂಗಡಿಗಳ ವಿರುದ್ದ ಬೀದಿಗಿಳಿದ ಮಹಿಳೆಯರು….

0
165

ಬಾಗಲಕೋಟೆ/ ಬಾದಾಮಿ: ರಸ್ತೆಯ ಬದಿಯಲ್ಲಿರೋ ಮದ್ಯದಂಗಡಿಗಳನ್ನ ಬಂದ್​ಗೊಳಿಸುವಂತೆ ಆಗ್ರಹಿಸಿ ನೂರಾರು ಮಹಿಳೆಯರು ಬೀದಿಗಿಳಿದು ಹೋರಾಟ ನಡೆಸಿರೋ ಘಟನೆ ನಗರದಲ್ಲಿ ನಡೆದಿದೆ.

ನಗರದ ಅಕ್ಕಮಹಾದೇವಿ ಕಲ್ಯಾಣ ಮಂಟಪದ ಬಳಿ ಜಮಾಯಿಸಿದ ಸ್ಪೂರ್ತಿ ಸ್ತ್ರೀಶಕ್ತಿ ಹಾಗೂ ಕನಕಶ್ರೀ ನಿರಂತರ ಉಳಿತಾಯ ಸ್ತ್ರೀಶಕ್ತಿ ಗುಂಪುಗಳ ನೂರಾರು ಮಹಿಳೆಯರು ಬೃಹತ್ ಪ್ರತಿಭಟನಾ ಮೆರವಣಿಗೆಯನ್ನ ನಡೆಸಿದ್ರು. ನಗರದ ಬಸವೇಶ್ವರ ವೃತ್ತ, ಕಬ್ಬಲಗೇರಿ ವೃತ್ತದ ಮೂಲಕ ವಿವಿಧ ರಸ್ತೆಗಳಲ್ಲಿ ಸಂಚರಿಸಿದ ಮಹಿಳೆಯರು ಸಂಭಂದಪಟ್ಟವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಘೋಷಣೆಗಳನ್ನ ಕೂಗಿದ್ರು.ರಸ್ತೆಯಪಕ್ಕದಲ್ಲಿರೋ ಮದ್ಯದಂಗಡಿಗಳನ್ನ ತಕ್ಷಣ ಬಂದ್​ಗೊಳಿಸಬೇಕು ಇಲ್ಲದೆ ಹೋದ್ರೆ ಇದ್ರಿಂದ ಶಾಲೆ, ಕಾಲೇಜು ಮತ್ತು ಆಸ್ಪತ್ರೆಗಳು ಇದೇ ರಸ್ತೆಯಲ್ಲಿರೋದ್ರಿಂದ ವ್ಯತಿರಿಕ್ತ ಪರಿಣಾಮ ಬೀರಲಿವೆ ಹೀಗಾಗಿ ಕೂಡಲೇ ಇಲ್ಲಿರೋ ಸರಾಯಿ ಅಂಗಡಿಗಳನ್ನ ಬಂದ್​ಗೊಳಿಸಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ರು. ಅಂತಿಮವಾಗಿ ತಹಶೀಲ್ದಾರವರ ಕಚೇರಿಗೆ ತೆರಳಿ ಮನವಿಯನ್ನ ಸಲ್ಲಿಸಲಾಯಿತು..

LEAVE A REPLY

Please enter your comment!
Please enter your name here