ಮನೆಗಳಿಗೆ ನುಗ್ಗಿದ ಮಳೆ ನೀರು,ಪರದಾಡಿದ ಜನ.

0
151

ಬೀದರ್/ಬಸವಕಲ್ಯಾಣ: ಭಾರಿ ಮಳೆ
ಮನೆಗಳಿಗೆ ನುಗ್ಗಿದ ಮಳೆ ನೀರು. ನೀರಿನಲ್ಲಿ ಮನೆಯಿಂದ ಹೊರಬರಲಾಗದೆ ಪರದಾಡಿದ ಜನ.
ಬಸವಕಲ್ಯಾಣ: ನಗರ ಸೇರಿದಂತೆ ತಾಲೂಕಿನಾದ್ಯಂತ ಗುರುವಾರ ರಾತ್ರಿ ಭಾರಿ ಮಳೆ ಸುರಿದ್ದಿದ್ದು, ನಗರದ ಬಸ್ಸ್ಟ್ಯಾಂಡ್ ಸಮೀಪ ಮುಖ್ಯರಸ್ತೆ ಬಿದಿಯಲ್ಲಿರುವ ಈಶ್ವರ ನಗರ ಬಡಾವಣೆಯಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿ ಜನರು ಪರದಾಡಬೇಕಾದ ಪ್ರಸಂಗ ಜರುಗಿತು.
ಗುಡುಗು, ಸಿಡಿಲುಗಳ ಅಬ್ಬದೊಂದಿಗೆ ಸಂಜೆ 7.30ರ ಸುಮಾರಿಗೆ ಆರಂಭವಾಗಿ ಮಧ್ಯ ರಾತ್ರಿ 12ವರೆಗೂ ಎಡೆಬಿಡದೆ ಸುರಿದ ಮಳೆಯಿಂದಾಗಿ ಮನೆಯಲ್ಲಿದ್ದವರು ಹೊರ ಬರಲಾಗದೆ ಅತಂತ್ರಸ್ಥಿತಿಗೆ ಸಿಲುಕಿದ್ದರು. ಸುಮಾರು 15ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಮಹಿಳೆಯರು, ಚಿಕ್ಕ ಮಕ್ಕಳು ಸೇರಿದಂತೆ ಮನೆಗಳಲ್ಲಿದ್ದ 50ಕ್ಕೂ ಹೆಚ್ಚು ಜನರು ಮನೆಯಿಂದ ಹೊರ ಬರಲು ದಾರಿ ಇಲ್ಲದೆ ಕೆಲ ಸಮಯ ನೀರಲ್ಲಿಯೇ ಕಾಲ ಕಳೆಯಬೇಕಾಯಿತು.
ಬಡಾವಣೆಯಲ್ಲಿ ತಗಡಿನಿಂದ ನಿಮರ್ಿಸಿದ ತಾತ್ಕಾಲಿಕ ಸೇಡ್ಗಳಲ್ಲಿ ವಾಸಿಸುವ ಜನರು ತಮ್ಮ ಮನೆಗಳಲ್ಲಿ ನೀರು ನುಗ್ಗಿದ ಪರಿಣಾಮ ಆತಂಕದಲ್ಲಿ ಕಾಲ ಕಳೆಯಬೇಕಾಯಿತು. ಮತ್ತೆ ಕೆಲವರು ಇದೇ ವಸತಿ ಪ್ರದೇಶದಲ್ಲಿ ನೀರು ನುಗ್ಗದ ಮನೆಯೊಂದರಲ್ಲಿ ಆಶ್ರಯಪಡೆಯುತಿದ್ದರು.
ಸುದ್ದಿ ತಿಳಿದು ರಾತ್ರಿ 1.30 ಸುಮಾರಿಗೆ ಧಾರಾಕಾರವಾಗಿ ಸುರಿಯುತಿದ್ದ ಮಳೆಯಲ್ಲಿಯೇ ಸ್ಥಳಕ್ಕೆ ಆಗಮಿಸಿದ ಸಹಾಯಕ ಆಯುಕ್ತ ಶರಣಬಸಪ್ಪ ಕೊಟಪ್ಪಗೋಳ ಅವರು ಅಗ್ನಿ ಶಾಮಕ ದಳದ ಸಿಬ್ಬಂದಿಗಳೊಂದಿಗೆ ಜನರ ರಕ್ಷಣೆಗೆ ಮುಂದಾದರು. ನೀರಿನಲ್ಲಿ ಹಗ್ಗ ಬೀಟ್ಟು ಸ್ವತಃ ಜನರ ಬಳಿಗೆ ತೆರಳಿದ ಸಹಾಯಕ ಆಯುಕ್ತರು, ಜನರಲ್ಲಿ ಧೈರ್ಯ ತುಂಬುವ ಜತೆಗೆ ಅವರ ಮನವೊಲಿಸಿ ಎಲ್ಲರನ್ನು ಸುರಕ್ಷಿತವಾಗಿ ಹೊರತರುವಲ್ಲಿ ಶ್ರಮಿಸಿದರು. ಮಧ್ಯ ರಾತ್ರಿ 1 ಗಂಟೆವರೆಗೆ ಹಗ್ಗದ ಸಹಾಯದಿಂದ ಒಬಬ್ಬರನ್ನು ನೀರಿನಿಂದ ಪಾರುಮಾಡಿ, ಮುಖ್ಯರಸ್ತೆಗೆ ತಂದು ನಿಲ್ಲಿಸಿದರು.
ಮಳೆ ನೀರಿನಿಂದ ಕೇಲವರು ಭಯ ಭಿತರಾಗಿದ್ದರೆ ಮಕ್ಕಳು, ಮಹಿಳೆಯರು ಸೇರಿದಂತೆ ಮತ್ತೆ ಕೇಲವರಿಗೆ ಜ್ವರ ಆವರಿಸಿದ್ದವು, ಜ್ವರದಿಂದ ಬಳಲುತ್ತಿರುವವರನ್ನು ಪೊಲೀಸ್ ಜೀಪ್ಗಳಲ್ಲಿ ತಕ್ಷಣ ನಗರದ ಸಕರ್ಾರಿ ಆಸ್ಪತ್ರೆಗೆ ಸಾಗಿಸಿ, ಚಿಕಿತ್ಸೆ ಕೋಡಿಸಲಾಯಿತು. ಬಿಕೆಡಿಬಿ ಸದಸ್ಯ ಶಿವರಾಜ ನರಶಟ್ಟಿ, ನಗರ ಸಭೆ ಅಧ್ಯಕ್ಷ ಅಜರಲ್ಲಿ ನವರಂಗ, ಸಿಪಿಐ ಅಲಿ ಸಾಬ್ ಸ್ಥಳದಲ್ಲಿದ್ದು ರಕ್ಷಣಾ ಕಾರ್ಯಕ್ಕೆ ಸಹಕರಿಸಿದರು.
ಇಲ್ಲದ ವೈದ್ಯರು: ನೀರಿನಲ್ಲಿ ನೆನೆದು ಜ್ವರಕ್ಕೆ ತುತ್ತಾದವರನ್ನು ನಗರದ ಸಕರ್ಾರಿ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ ವೇಳೆ ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದ ಕಾರಣ ಕೆಲ ಕಾಲ ಪರದಾಡಬೇಕಾಯಿತು. ಓರ್ವ ಸ್ಟಾಪ್ನಸರ್್ ಹಾಗೂ ಓರ್ವ ಡಿ ಗ್ರೂಪ್ ಸಿಬ್ಬಂದಿ ಬೀಟ್ಟರೆ ವೈದ್ಯರು ಯಾರು ಇದಿರುವುದನ್ನು ಕಂಡು ಬಂತು. ಇದರಿಂದ ಕೆಂಡಮಂಡಲರಾದ ಸಹಾಯಕ ಆಯುಕ್ತ ಕೊಟಪ್ಪಗೋಳ ಅವರು, ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ಮೊಬೈಲ್ ಮೂಲಕ ಸಂಪಕಿಸರ್ಿ, ತರಾಟೆಗೆ ತಗೆದುಕೊಂಡರು.
ಮಳೆ ನೀರಿನಲ್ಲಿ ಸಿಲುಕಿದ ಜನರನ್ನು ಆಸ್ಪತ್ರೆ ಸಾಗಿಸಲಾಗುತ್ತಿದೆ. ಸೂಕ್ತ ವ್ಯವಸ್ಥೆ ಮಾಡಿಕೊಳ್ಳಿ ಎಂದು ಒಂದು ಗಂಟೆಗಳ ಮೊದಲೇ ಮುಖ್ಯ ವೈದ್ಯಾಧಿಕಾರಿಗಳಿಗೆ ಮಾಹಿತಿ ಸೂಚಿಸಲಾಗಿತ್ತು. ಆದರೂ ಇಲ್ಲಿ ಯಾರು ಇಲ್ಲ. 100 ಬೇಡ್ ಆಸ್ಪತ್ರೆ ಇದ್ದರು ಓರ್ವ ವೈದ್ಯರು ಇರುವುದಿಲ್ಲ. ಹೀಗಾದರೆ ಜನರಗತಿ ಏನು.? ಇಂಥ ಸಮಯದಲ್ಲಿಯೂ ವೈದ್ಯರು ಇಲ್ಲವೆಂದರೆ ಹೇಗೆ. ನಿಷ್ಕಾಕಾಳಜಿ ವಹಿಸಿದ ವೈದ್ಯರ ವಿರುದ್ಧ ಕ್ರಮಕೈಗೊಳ್ಳಿ ಎಂದು ಡಿಎಚ್ಒ ಡಾ. ಆಬ್ಬಾರ ಅವರಿಗೆ ಎಸಿ ಸೂಚಿಸಿದರು.
ಕೆಲ ಸಮಯದ ನಂತರ ಆಸ್ಪತ್ರೆಗೆ ಆಗಮಿಸಿದ ವೈದ್ಯ ಡಾ. ತಾಜೋದ್ದಿ ಅವರಿಗೂ ತರಾಟೆಗೆ ತಗೆದುಕೊಂಡ ಎಸಿ ಕೊಟಪ್ಪಗೋಳ, ಇಷ್ಟು ಸಮಯ ಎಲ್ಲಿದ್ದಿರಿ, ರಾತ್ರಿ ವೇಳೆ ಇಲ್ಲಿ ಯಾರು ಇರುವುದಿಲ್ಲವಾ. ಇಲ್ಲಿ ವೈದ್ಯರೆ ಇರುವುದಿಲ್ಲ ಎಂದರೆ ಜನರು ಎಲ್ಲಿಗೆ ಹೋಗಬೇಕು. ಆಸ್ಪತ್ರೆಯಲ್ಲಿ ಬೇಡ್ಗಳು ಸರಿ ಇಲ್ಲ. ಅವ್ಯವಸ್ಥೆ ಆಗರವಾಗಿದೆ ಎಂದು ಕಿಡಿ ಕಾರಿದರು.
ಜನರಿಗೆ ಅಗತ್ಯ ಚಿಕಿತ್ಸೆ ನೀಡಿ, ನಾಳೆವರೆಗೆ ಅವರಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಿ ಎಂದು ವೈದ್ಯರಿಗೆ ಎಸಿ ಸೂಚಿಸಿದರು.

ನೀರಿಗಿಳಿದ ಎಸಿ
ಬಸವಕಲ್ಯಾಣ: ಮಳೆಯಿಂದ ಮನೆಗಳಿಗೆ ನೀರು ನುಗ್ಗಿ ಜನ ಅತಂತ್ರರಾಗಿದ್ದರೆ, ಮನೆಗಳಿಗೆ ತೆರಳುವ ಮಾರ್ಗದಲ್ಲಿ ನಾಲೆಯೊಂದು ತುಂಬಿ ಹರಿಯುತಿದ್ದ ಕಾರಣ ಅಗ್ನಿ ಶಾಮಕ ದಳ ಸಿಬ್ಬಂದಿಗಳು ಜನರ ಬಳಿಗೆ ತೆರಳಲು ಹಿಂದೆಟು ಹಾಕುತಿದ್ದರು. ಸ್ಥಳದಲಿದ್ದ ಎಸಿ ಶರಣಬಸಪ್ಪ ಕೊಟಪ್ಪಗೋಳ ಅವರು ಸ್ವತಃ ನೀರಿಗಿಳಿದು ಮಳೆಯಲ್ಲಿಯೇ ನೆನೆಯುತ್ತ ಹಗ್ಗದ ಸಹಾಯದೊಂದಿಗೆ ಸುಮಾರು ಎರಡು ನೂರು ಮೀಟರಗಳಷ್ಟು ನೀರಿನಲ್ಲಿಯೇ ನಡೆದುಕೊಂಡು ಜನರ ಬಳಿಗೆ ತೆರಳಿದರು. ಎಸಿ ಜತೆಗೆ ತೆರಳಿದ ಅಗ್ನಿ ಶಾಮಕ ದಳ ಸಿಬ್ಬಂದಿ ನೀರಿನಲ್ಲಿ ಸಿಲುಕಿದವರನ್ನು ರಕ್ಷಣೆಗೆ ಮುಂದಾದರು.
ಅಸ್ವಚ್ಚ ನೀರಿನಲ್ಲಿ ತೆರಳಿ ಜನರನ್ನು ರಕ್ಷಿಸಿದ ಎಸಿ ಕಾರ್ಯಕ್ಕೆ ಸ್ಥಳದಲ್ಲಿದ್ದ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸುತಿದ್ದರು.

LEAVE A REPLY

Please enter your comment!
Please enter your name here