ಮನೆಬೀಗ ಮುರಿದು ಒಡವೆ,ಹಣ ದೋಚಿದ ಕದೀಮರು

0
58

ಚಿಕ್ಕಬಳ್ಳಾಪುರ/ ಚಿಂತಾಮಣಿ :ನಗರದ ದೊಡ್ಡಪೇಟೆಯ ಬ್ರಾಹ್ಮನಬೀದಿಯಲ್ಲಿ ಕಳೆದ ರಾತ್ರಿ ಮನೆ ಬೀಗ ಮುರಿದು ಲಕ್ಷಾಂತರ ರೂಗಳ ಒಡವೆ ಮತ್ತು ಎಂಬತ್ತು ಸಾವಿರ ನಗದು ಹಣ ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ .
ಮನೆ ಮಾಲೀಕರು ಸುಜಾತಮ್ಮ ಹೇಳಿಕೆ ಪ್ರಕಾರ ಕಳೆದ ಮೂರು ದಿನಗಳ ಹಿಂದೆ ದೀಪಾವಳಿ ಹಬ್ಬ ಆಚರಿಸಲು ಮುಳಬಾಗಿಲಿಗೆ ತೆರಳಿದ್ದ ಸಮಯ ದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಹಬ್ಬ ಮುಗಿಸಿ ಹಿಂದಿರುಗಿದ ಸುಜಾತಮ್ಮನಿಗೆ ಮನೆ ತಲುಪುತಿದ್ದಂತೆ ದಿಗ್ರಮೆ ಕಾದಿತ್ತು,ಮನೆಯ ಬೀಗ ಹೊಡೆದಿದ್ದು ಬಾಗಿಲು ಮುರಿದಿದ್ದ ಕಂಡು ಬಂದಿತ್ತು. ಕೂಡಲೇ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ‌.
ದೂರು ಪಡೆದ ಪೊಲೀಸರು ಚಿಕ್ಕಬಳ್ಳಾಪುರ ದಿಂದ ಬೆರಳು ಮತ್ತು ಸ್ವಾನ ದಳ ಪೊಲೀಸ್ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಸಂಪೂರ್ಣ ಮಾಹಿತಿ ಕಲೆಹಾಕಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ.

LEAVE A REPLY

Please enter your comment!
Please enter your name here