ಮನೆಯ ಗೋಡೆ ಕುಸಿದು ವ್ಯಕ್ತಿ ಸಾವು.

0
139

ಬೆಂಗಳೂರು/ಮಹದೇವಪುರ:- ಬೆಂಗಳೂರಿನಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ತೇವಾಂಶಗೊಂಡಿದ್ದ ಮನೆಯ ಗೋಡೆ ಕುಸಿದುಬಿದ್ದ ಪರಿಣಾಮ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಹೂಡಿ ವಾರ್ಡ್‌ ನ ಸಾದರಮಂಗಲದಲ್ಲಿ ನಡೆದಿದೆ.ರಾಜು(೩೫) ಸಾವನ್ನಪ್ಪಿದ ದುರ್ದೈವಿ. ಕಳೆದ ರಾತ್ರಿ ೨:೪೫ ರ ಸುಮಾರಿನಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಈ ವೇಳೆ ಗಾಡ ನಿದ್ರೆಯಲ್ಲಿದ್ದ ರಾಜು ಸಾವನ್ನಪ್ಪಿದ್ದು, ರಾಜು ತಾಯಿಗೆ ಗಂಬೀರ ಗಾಯಗಳಾಗಿದ್ದು ಸ್ಥಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ರಾಜುಗೆ ವಿವಾಹವಾಗಿ ಆರು ವರ್ಷಗಳಾಗಿದ್ದು ಹಬ್ಬಕ್ಕೆಂದು ತವರು ಮನೆಗೆ ತೆರಳಿದ್ದು ಹೆಂಡತಿ ಪ್ರಣಾಪಾಯದಿಂದ ಪಾರಾದಂತಾಗಿದೆ.ಸ್ಥಳಕ್ಕೆ ಸ್ಥಳೀಯ ಪಾಲಿಕೆ ಸದಸ್ಯ ಎ.ಸಿ.ಹರಿಪ್ರಸಾದ್ ಹಾಗೂ ಅಧಿಕಾರಿಗಳು ಬೇಟಿ ಪರಿಶೀಲನೆ ನಡೆಸಿದ್ದಾರೆ.ಮೃತನ ಕುಟುಂಬಕ್ಕೆ 5ಲಕ್ಷ ರೂ ಪರಿಹಾರ ಘೋಷಿಸಿದ ಮೇಯರ್ ಸಂಪತ್ ರಾಜ್.

LEAVE A REPLY

Please enter your comment!
Please enter your name here