ಮನೆ ಗೋಡೆ ಕುಸಿದು ಮನೆ ಮಂದಿಗೆ ಗಾಯ

0
161

ಕೊಳ್ಳೇಗಾಲ: ಕಳೆದ ರಾತ್ರಿ ಸುರಿದ ಮಳೆಗೆ ಮನೆ ಗೊಡೆ ಕುಸಿದು 7 ಮಂದಿಗೆ ತೀವ್ರಗಾಯ ಗೊಂಡಿರುವ ಘಟನೆ ಇಂದು ಮುಂಜಾನೆ ತಾಲ್ಲೂಕಿನ ಕೆಂಪನಪ್ಯಾಳ ಗ್ರಾಮದ ಮಡಿವಾಳ ಶೆಟ್ಟರ ಬೀದಿಯಲ್ಲಿ ಜರುಗಿದೆ.
ತಾಲ್ಲೂಕಿನ ಕೆಂಪನಪ್ಯಾಳ ಗ್ರಾಮದ ಮಡಿವಾಳ ಶೆಟ್ಟರ ಬೀದಿಯ ಮಹೇಶ್ 42, ಸವಿತಾ 35, ರತ್ನಮ್ಮ 44, ಚಂದ್ರು 12, ಪ್ರೀತಿ 9, ಸಂಜನಾ 3, ರಂಜಿತಾ12 , ಗಾಯ ಗೊಂಡವರು.
ನಿನ್ನೆ ರಾತ್ರಿ ಸುರಿದ ಮಳೆಗೆ ನಾಲ್ಕು ಮನೆಗಳ ಗೋಡೆ ಕುಸಿದ್ದು ಮನೆಯಲ್ಲಿ ಮಲಗಿದ್ದ ಒಂದೇ ಕುಟುಂಬದ ನಾಲ್ಕು ಮಕ್ಕಳು ಸೇರಿ ಒಟ್ಟು 7 ಮಂದಿ ಮೇಲೆ ಬಿದ್ದಿದೆ. ತಕ್ಷಣ ಅಕ್ಕಪಕ್ಕದ ಮನೆಯವರು ನೋಡಿ ಗಾಯಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನೂ ಕೆಲವು ಮನೆಯ ಗೋಡೆಗಳು ಕುಸಿಯುವ ಹಂತದಲ್ಲಿರುವುದ್ದು ಜನರು ಭಯದ ಪರಿಸ್ಥಿತಿ ಉಂಟಾಗಿದೆ.
ಶಾಸಕ ಎಸ್. ಜಯಣ್ಣ, ತಹಶೀಲ್ದಾರ್ ಕಾಮಾಕ್ಷಮ್ಮ, ಡಿವೈಎಸ್ಪಿ ಪುಟ್ಟಮಾದಯ್ಯ, ವೃತ್ತ ನಿರೀಕ್ಷಕರ ರಾಜಣ್ಣ ಸರ್ಕಾರಿ ಉಪವಿಭಾಗ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳಗಳ ಯೋಗಕ್ಷೇಮ ವಿಚಾರಿಸಿದರು.
ಗಾಯಾಳು ಕುಟುಂಬಕ್ಕೆ ಸರ್ಕಾರದಿಂದ ಬರುವ ಪರಿಹಾರ ಹಾಗೂ ವೈಯಕ್ತಿಕ ಹಣವನ್ನು ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಿದ್ದಯ್ಯನಪುರ ಗ್ರಾಪಂ ಉಪಾಧ್ಯಕ್ಷ ಗುಣಶೇಖರ್, ಮಾದೇಶ್, ಮುಡಿಗುಂಡ ಶಾಂತರಾಜು, ಪ್ರಕಾಶ್, ರಾಜು, ಹಾಗೂ ಗ್ರಾಮಸ್ಥರು ಹಾಜರಿದ್ದರು

LEAVE A REPLY

Please enter your comment!
Please enter your name here