ಮನೆ ಮನೆಗೆ ಕಾಂಗ್ರೆಸ್ ಅಭಿಯಾನಕ್ಕೆ ಚಾಲನೆ

0
531

ಬಳ್ಳಾರಿ /ಹೊಸಪೇಟೆ.:ಸ್ಥಳೀಯ ಚಿತ್ತವಾಡ್ಗಿಯಲ್ಲಿ ಇತ್ತೀಚೆಗೆ ಮನೆ ಮನೆ ಕಾಂಗ್ರೆಸ್ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಕಾಂಗ್ರೆಸ್ ಅಭಿಯಾನಕ್ಕೆ ಕಾಂಗ್ರೆಸ್ ಮುಖಂಡ ಹೆಚ್.ಎನ್.ಎಫ್.ಮಹಮದ್ ಇಮಾಮ್ ನಿಯಾಜಿ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಗಳನ್ನು ಸಂಪೂರ್ಣವಾಗಿ ಈಡೇರಿಸಿದೆ. ಬಡವರಿಗಾಗಿ ಅನ್ನಭಾಗ್ಯ, ಕ್ಷೀರಭಾಗ್ಯ, ರೈತರಿಗಾಗಿ ಕೃಷಿ ಭಾಗ್ಯ, ಸೇರಿದಂತೆ ಹಲವಾರು ಮಹತ್ತರ ಯೋಜನೆಗಳನ್ನು ರಾಜ್ಯದ ಜನತೆಗೆ ನೀಡಿದ್ದಾರೆ. ಸರ್ಕಾರದ ಜನಪರ ಯೋಜನೆಗಳನ್ನು ರಾಜ್ಯದ ಜನರಿಗೆ ತಿಳಿಸುವ ಮನೆ ಮನೆ ಕಾಂಗ್ರೆಸ್ ಅಭಿಯಾನವನ್ನು ಕಾಂಗ್ರೆಸ್ ರಾಜ್ಯದ್ಯಂತ ಹಮ್ಮಿಕೊಂಡಿದ್ದು. ಅದರ ಭಾಗವಾಗಿ ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಚಿತ್ತವಾಡ್ಗಿಯಿಂದ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಈ ಅಭಿಯಾನ ನಗರದ ಎಲ್ಲಾ ವಾರ್ಡುಗಳಲ್ಲಿ, ಗ್ರಾಮಗಳಲ್ಲಿ ನಡೆಯಲಿದೆ ಎಂದರು.
ಕಾರ್ಯಕ್ರಮದಲ್ಲಿ ಎಮ್ಮಿ ಕೊಟ್ರಪ್ಪ, ಎಂ.ಕೊಟ್ರಪ್ಪ, ಬಣಕಾರ ಗೌರೀಶ, ಹೆಚ್.ಎನ್.ಮಹಮದ್ ರಫೀಕ್, ಸಣ್ಣ ಹೊನ್ನೂರಪ್ಪ, ಎನ್,ನಾಸೀರ್, ಎನ್.ಎಸ್.ರಫೀಕ್, ಡೊಮ್ಮಿ ರಮೇಶ್, ಹಾನಗಲ್ ಯಂಕಪ್ಪ, ಹನುಮಂತಪ್ಪ, ಹೊಸೂರು ಕಾಳಪ್ಪ, ಪಿ.ಸಾಧಿಕ್ ಅಲಿ, ವಡ್ರು ವೀರಣ್ಣ, ಲೋಕೇಶ್, ಸುಂಕಪ್ಪ, ಖಾಜಾಸಾಬ್, ಭರಮಪ್ಪ, ಪಕ್ಕೀರಪ್ಪ, ಜಫ್ರುಲ್ಲಾ ಖಾನ್, ಬಷೀರ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here