ಬಳ್ಳಾರಿ/ ಹೊಸಪೇಟೆ: ಐತಿಹಾಸಿಕ ಹಂಪಿಯ ಬ್ರಹ್ಮರಥೋತ್ಸವದ ಮೂರನೇದಿನ ದೇವಸ್ಥಾನದ ಪಕ್ಕದಲ್ಲಿರುವ
ಮನ್ಮಥ ಹೊಂಡದಲ್ಲಿ ವಿಧ್ಯಾರಣ್ಯಮಠದ ವಿಧ್ಯಾರಣ್ಯ ಭಾರತೀ ಸ್ವಾಮಿಜೀಗಳ ದಿವ್ಯ ಸಾನಿಧ್ಯದಲ್ಲಿ ಅದ್ದೂರಿಯಾಗಿ ಜರುಗಿದ ತೆಪ್ಪೋತ್ಸವ
ಪ್ಪೋತ್ಸವದ ಅಂಗವಾಗಿ ಉತ್ಸವ ಮೂರ್ತಿಗಳಿಗೆ ಬೆಳಿಗ್ಗೆ ಚಕ್ರಸ್ನಾನಮಡಿಸಿದನಂತರ ಫಲ್ಲಕ್ಕಿಯಲ್ಲಿ ಮೆರವಣಿಗೆ ಮೂಲಕ ತಂದುಬಾಳೆಕಂಬ ಹೂವುಗಳಿಂದ ಅಲಂಕಾರ ಮಾಡಲಾಗಿದ್ದ ತೆಪ್ಪದಲ್ಲಿಕುಳ್ಳಿರಿಸಿ ದೇವರಿಗೆ ದೇವಸ್ಥಾನದ ಪುರೋಹಿತರು ಮಹಾಮಂಗಳಾರತಿಬೆಳಗಲಾಯಿತು
ನಂತರ ತೆಪ್ಪವು ಮನ್ಮಥ ಹೊಂಡದಲ್ಲಿ ಐು ಸುತ್ತು ಪ್ರದಕ್ಷಿಣೆ ಹಾಕಿಸಲಾಯಿತು ಇನ್ನು ತೆಪ್ಪೋತ್ಸವವು ಒಂದು ಸುತ್ತು ಪ್ರದಕ್ಷಿಣೆ ಹಾಕುತ್ತಿದ್ದಂತೇ ಯುವಕರ ದಂಡು ಮನ್ಮಥಹೊಂಡದ ನೀರಿನಲ್ಲಿಜಿಗಿದು ಸ್ನಾನ ಮಾಡಿದರು
ತೆಪ್ಪೋತ್ಸವ ವೀಕ್ಷಿಸಲು ಸುತ್ತಮುತ್ತಲ ಗ್ರಾಮಾಸ್ಥರು, ನೂರಾರು ಭಕ್ತರು ಹಾಗು ವಿದೇಶಿಗರು ನೆರೆದಿದ್ದರು ಹಂಪಿ ಉಪವಿಭಾಗದ ಪೊಲೀಸರು ಸೂಕ್ತ ಬಂದೋ ಬಸ್ತ್ ಕೈಗೊಂಡಿದ್ದರು