ಮರುಳಸಿದ್ದೇಶ್ವರನಿಗೆ ತೈಲಾಭಿಷೇಕ

0
196

ಬಳ್ಳಾರಿ /ಕೂಡ್ಲಿಗಿ:ಕೂಡ್ಲಿಗಿಯನಾಡಿನ ಪಂಚಪೀಠಗಳಲ್ಲೊಂದಾದ ಕೂಡ್ಲಿಗಿ ತಾಲೂಕಿನ ಉಜ್ಜಯಿನಿ ಪೀಠದ ಮರುಳಸಿದ್ದೇಶ್ವರ ದೇವಸ್ಥಾನ ನಸ ಶಿಖರ ಕ್ಕೆ ಸಾವಿರಾರು ಜನ ಭಕ್ತರು ಮತ್ತು ಉಜ್ಜಯಿನಿ ಶ್ರೀ ಗಳ ಸಮ್ಮುಖದಲ್ಲಿ
ತೈಲಾಭಿಷೇಕ ಮಾಡಲಾಯಿತು.
ಜರಮಲೆಯ ಪಾಳೇಗಾರರ ವಂಶದ ವಾರಸದಾರರು ಹೊತ್ತುವತಂದ ಎಣ್ಣೆಯನ್ನ ಮೊದಲಿಗೆ ಶಿಖರಕ್ಕೆ ಎರೆದ ನಂತರ ಭಕ್ತರು ಎಣ್ಣೆ ಎರಚುವ ಮೂಲಕ ತಮ್ಮ ಅರಾದ್ಯ ದೈವ ಮರುಳಸಿದ್ದೇಶ್ವರನಿಗೆ ಭಕ್ತಿ ಸಮರ್ಪಿಸಿದರು.
ಈ ಭಾಗದಲ್ಲಿ ಮಳೆ ಪೀಠ ಅಂತನೆ ಹೆಸರು ಪಡೆದಿರುವ ಪೀಠದ ಕಾರ್ಯಕ್ರಮ ದಲ್ಲಿ ಕರ್ನಾಟಕ. ಮಹರಾಷ್ಟ್ರ ಸೇರಿದಂತೆ ನರೆಯ ಆಂಧ್ರಪ್ರದೇಶದಿಂದಲೂ ಹೆಚ್ಚಿನ ಭಕ್ತರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here