ಮಳೆಗಾಗಿ ಉಪವಾಸ…

0
151

ಬಳ್ಳಾರಿ / ಹಗರಿಬೊಮ್ಮನಹಳ್ಳಿ:ಜಿಲ್ಲೆಯಲ್ಲಿ ಈ ಭಾರಿಯೂ ಮಳೆ ಕುಠಿತಗೊಂಡಿದೆ. ಕಳೆದ ನಾಲ್ಕು ವರ್ಷಗಳಿಂದ ಬೀಕರ ಬರಗಾಲಕ್ಕೆ ತುತ್ತಾಗಿರುವ ಬಳ್ಳಾರಿ ಜಿಲ್ಲೆಯ ಜನರು ಮಳೆಯಿಲ್ಲದೆ ಕಂಗಾಲಾಗಿದ್ದಾರೆ. ಹೀಗಾಗಿ ವರುಣ ಆಗಮನಕ್ಕಾಗಿ ಜಿಲ್ಲೆಯ ಜನರು ಇದೀಗ ಪೂಜೆ ಪುರಸ್ಕಾರದ ಮೊರೆ ಹೋಗಿದ್ದಾರೆ. ಮಳೆಗಾಗಿ ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಸಂತರೊಬ್ಬರು ಇದೀಗ ಉಪವಾಸ ವೃತ್ರ ಕೈಗೊಳ್ಳುವ ಮೂಲಕ ವರುಣಿಗಾಗಿ ಪೂಜೆ ಮಾಡುತ್ತಿದ್ದಾರೆ, ಹಗರಿಬೊಮ್ಮನಹಳ್ಳಿ ತಾಲೂಕಿನ ಮೂರನೇ ಸಿಂಗನಹಳ್ಳಿ ಗ್ರಾಮದ ಪಾಡುರಂಗ ದೇವಾಲಯದಲ್ಲಿ ಸಂತ ಚುಚನಕಲ್ಲ ರಾಮಣ್ಣ ಕಳೆದ ಮದ್ಯಾಹ್ನದಿಂದ ದೇವಾಲಯದಲ್ಲಿ ಉಪವಾಸ ವೃತ್ರ ಕೈಗೊಂಡಿದ್ದಾರೆ. ಊಟ ನೀರು ತ್ಯಜಿಸಿ ಮೌನವೃತ್ರದೊಂದಿಗೆ ಉಪವಾಸ ವ್ರತ್ರ ಕೈಗೊಂಡಿರುವ ರಾಮಣ್ಣ ೫ ದಿನಗಳ ಕಾಲ ಉಪವಾಸ ನಡೆಸುವ ಮೂಲಕ ಮಳೆಗಾಗಿ ಪ್ರಾರ್ಥನೆ ನಡೆಸುತ್ತಿದ್ದಾರೆ,

LEAVE A REPLY

Please enter your comment!
Please enter your name here