ಮಳೆಗಾಗಿ ತನು ಬಿಂದಿಗೆ ಆಚರಣೆ..

0
168

ಬಳ್ಳಾರಿ /ಕುಡಿತಿನಿ: ಪಟ್ಟಣದಲ್ಲಿ ತನು ಬಿಂದಿಗೆ ಆಚರಣೆ-ಮಳೆ, ಬೆಳೆ ಮತ್ತು ಗ್ರಾಮದ ಸುಖ-ಸಂತೋಷಕ್ಕಾಗಿ ತನು ಬಿಂದಿಗೆ ಆಚರಣೆ- ಮಹಿಳೆಯರೊಂದಿಗೆ ತನು ಬಿಂದಿಗೆ ಹೊತ್ತ ಮಕ್ಕಳು-ಕರಿಯಮ್ಮ ದೇವಿಗಾಗಿ ನಿನ್ನೆ ಸಂಜೆ ನಡೆದ ಕಾರ್ಯಕ್ರಮ

ನಾಡಿನಲ್ಲಿ ಇನ್ನಾದರೂ ಉತ್ತಮ ಮಳೆಯಾಗಲಿ, ಮುಂಗಾರು ಬಿತ್ತನೆಗೆ ವಂಚಿತರಾಗಿರುವ ರೈತರಿಗೆ ಹಿಂಗಾರಾದ್ರೂ ಕೈಗೂಡಲಿ, ಆ ಮೂಲಕ ಜನಸಾಮಾನ್ಯರಿಗೆ ಉದ್ಯೋಗಾವಕಾಶ ದೊರೆತು ನೆಮ್ಮದಿಯ ಜೀವನ ಕಾಣುವಂತಾಗಲಿ ಎಂದು ಆಶಿಸಿ ಕುಡಿತಿನಿ ಪಟ್ಟಣದಲ್ಕಿ ತನು ಬಿಂದಿಗೆ ಕಾರ್ಯಕ್ರಮ ಆಚರಿಸಲಾಯಿತು.
ಪಟ್ಟಣದ ಗ್ರಾಮದೇವತೆ ಶ್ರೀ ಕರಿಯಮ್ಮನಿಗೆ ಮಹಿಳೆಯರು, ಯುವತಿಯರು ಮಂಗಲ ವಾದ್ಯಗಳು ಹಾಗೂ ಬಾಗೀನದೊಂದಿಗೆ ತನು ಬಿಂದಿಗೆ ಆಚರಣೆ ನಡೆಸಿದ್ರು. ಶ್ರಾವಣ ಮಾಸದ ಕೊನೆಯ ಮಂಗಳವಾರದಂದು ಈ ಆಚರಣೆ ವರ್ಷದಿಂದ ವರ್ಷ ಮುಂದುವರಿಸಿಕೊಂಡು ಬರಲಾಗುತ್ತಿದೆ. ಹೀಗಾಗಿ, ನಿನ್ನೆ ಸಂಜೆಯೂ ಕೂಡ ತನು ಬಿಂದಿಗೆ ಹೊತ್ತ ಮಕ್ಕಳೂ ಸಹ ಗಮನ ಸೆಳೆದ್ರು.
ಈ ಆಚರಣೆಯಿಂದ ಮಳೆ, ಬೆಳೆ ಸುಖ, ಸಮೃದ್ಧಿ ನೆಲೆಸುತ್ತೆ ಎನ್ನುವ ನಂಬಿಕೆ ಕುಡಿತಿನಿ ಜನ್ರಲ್ಲಿದೆ. ಕರಿಯಮ್ಮನಿಗಾಗಿ ಈ ಆಚರಣೆ ಜಾರಿಯಲ್ಲಿದ್ದು ಕರಿಯಮ್ಮ ತಮ್ಮನ್ನು ಕಾಪಾಡಿ, ಸಲಹುತ್ತಾಳೆ ಎನ್ನುವ ನಂಬಿಕೆಯೂ ಇದೆ.

LEAVE A REPLY

Please enter your comment!
Please enter your name here