ಮಳೆಗಾಗಿ ತೊಗಲು ಹೂದಿಕೆ ಪೂಜೆ..

0
150

ತುಮಕೂರು:ಹಂದನಕೆರೆಯಲ್ಲಿ ಮಳೆಬೆಳೆಗಾಗಿ 9 ವರ್ಷಗಳ ನಂತರ “ತೊಗಲು ಹೊದಿಕೆ” ಸಾರ್ವಜನಿಕ ಪೂಜೆಗೆ

ಹಂದನಕೆರೆಯ ಶ್ರೀ ಗುರುಗಿರಿ ಸಿದ್ದೇಶ್ವರ ದೇವಸ್ಥಾನದ ಪುರಾಣಪ್ರಸಿದ್ಧ ಹೊದಿಕೆ
ಭಾನುವಾರ ಸಾರ್ವಜನಿಕ ಪೂಜೆಗೆ ಮೀಸಲಿದ್ದು ಸಹಸ್ತ್ರಾರು ಭಕ್ತರು ಸೇರುವ ನಿರೀಕ್ಷೆ
ರಾಜಕಾರಣಿಗಳ ಆರಾಧ್ಯದೈವವೆಂದೆ ಖ್ಯಾತಿ ಪಡೆದಿರುವ ದೇವರು
ಯಡಿಯೂರಪ್ಪ, ಎಚ್.ಕೆ.ಪಾಟೀಲ್, ಚಲುವನಾರಾಯಣಸ್ವಾಮಿ, ಟಿ.ಬಿ.ಜಯಚಂದ್ರ ಹೀಗೆ ಘಟಾನುಘಟಿಗಳ ಭೇಟಿ
ಭಕ್ತರ ಪ್ರಶ್ನೆಗಳಿಗೆ ಸ್ಲೇಟಿನಲ್ಲಿ ಬರೆಯುವ ಮೂಲಕ ಭವಿಷ್ಯ ಹೇಳುವ ದೇವರು

ಹುಳಿಯಾರು: ಭಕ್ತರ ಪ್ರಶ್ನೇಗಳಿಗೆ ಸ್ಲೇಟಿನಲ್ಲಿ ಭವಿಷ್ಯ ಬರೆಯುವ ಮೂಲಕ ಪ್ರಖ್ಯಾತಿಗಳಿಸಿರುವ ಹಂದನಕೆರೆಯ ಶ್ರೀ ಗುರುಗಿರಿ ಸಿದ್ದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮಳೆಬೆಳೆಗಾಗಿ 9 ವರ್ಷಗಳ ನಂತರ ಈಗ ಪುರಾಣ ಪ್ರಸಿದ್ಧ “ತೊಗಲು ಹೊದಿಕೆ” ಹೊರತೆಗೆದಿದ್ದು ಭಾನುವಾರ ಸಾರ್ವಜನಿಕ ದರ್ಶನ ಹಾಗೂ ಪೂಜೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.ದೇವಸ್ಥಾನದ ಇತಿಹಾಸ
ಶ್ರೀ ಸಿದ್ದೇಶ್ವರಸ್ವಾಮಿಗಳು 2000 ವರ್ಷಗಳ ಹಿಂದೆ ಪವಾಡ ಪುರುಷರಾಗಿದ್ದರು. ಅನೇಕ ಪವಾಡಗಳನ್ನು ಮಾಡಿ ಪ್ರಸಿದ್ಧರಾಗಿದ್ದ ಇವರು ಈ ಸ್ಥಳದಲ್ಲಿ ಐಕ್ಯರಾದರು. ನಂತರ ಪವಾಡವನ್ನು ಕಣ್ಣಾರೇ ಕಂಡು ಭಕ್ತರು ಸಿದ್ದೇಶ್ವರಸ್ವಾಮಿಯ ಮೂರ್ತಿಯನ್ನು ಮಾಡಿಸಿ ಇಲ್ಲಿ ಪ್ರತಿಷ್ಠಾಪಿಸಿದರು. ಅಲ್ಲಿಂದ ಭಯಾಭಕ್ತಿಯಿಂದ ಪೂಜಾ ಕೈಂಕರ್ಯಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಈ ದೇವಸ್ಥಾನವನ್ನು ಸಿದ್ದೇಶ್ವರಸ್ವಾಮಿಯ ಗದ್ದುಗೆ ಎಂತಲೂ ಕರೆಯುವುದುಂಟು.
ಭವಿಷ್ಯ ಬರೆಯುವ ದೇವರು
ಈ ದೇವಾಲಯಕ್ಕೆ ಸಿದ್ದರ ಮಠ ಎಂದು ಕರೆಯುವರು. ಪೂಜಾ ಕೈಂಕರ್ಯವನ್ನು ವಂಶ ಪಾರಂಪರಿಕವಾಗಿ ದಿ.ಮುದ್ವೀರಯ್ಯ ಕುಟುಂಬ ಮಾಡುತ್ತಿದ್ದು, ಈಗ ಅವರ ಮಗ ರುದ್ರೇಶ್ ನಡೆಸುತ್ತಿದ್ದಾರೆ. ಭಕ್ತರ ಪ್ರಶ್ನೆಗಳಿಗೆ ಸಿದ್ದಪ್ಪದೇವರ ಪೀಠಕ್ಕೆ ಒಂದು ಬಳಪ ಕಟ್ಟಲಾಗುತ್ತದೆ. ದೇವರನ್ನು ಹಿಡಿದಿರುವ ಅರ್ಚಕರು ಭಕ್ತರ ಕೋರಿಕೆಗೆ ಉತ್ತರವನ್ನು ಸ್ಲೇಟಿನ ಮೇಲೆ ಮೋಡಿ ಅಕ್ಷರದಲ್ಲಿ ಬರೆಯುತ್ತಾರೆ. ಸಿದ್ದಪ್ಪ ದೇವರು ಬರೆದ ಬರಹದ ಆಧಾರದ ಮೇಲೆ ಭಕ್ತರ ಭವಿಷ್ಯ ನಿರ್ಧಾರವಾಗುತ್ತದೆ.

LEAVE A REPLY

Please enter your comment!
Please enter your name here