ಮಳೆಗಾಗಿ-ಮುಸ್ಲಿಂ ಬಾಂಧವರಿಂದ ಸಾಮೂಹಿಕ ಪ್ರಾರ್ಥನೆ

0
284

ಬಳ್ಳಾರಿ /ಹೊಸಪೇಟೆ:  ಉತ್ತಮ ಮಳೆಯಾಗಿ ರೈತ ಬಾಂಧವರು ಹಾಗೂ ಸಾರ್ವಜನಿಕರ ಬದುಕು ಉತ್ತಮವಾಗಲಿ ಎಂದು ಸ್ಥಳೀಯ ಮುಸ್ಲಿಂ ಬಾಂಧವರು ನಗರದಲ್ಲಿಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ನಗರದ ಐಎಸ್ಆರ್ ರಸ್ತೆಯಲ್ಲಿನ ಈದ್ಗಾ ಮೈದಾನದಲ್ಲಿಂದು ಜರುಗಿದ ಕಾರ್ಯಕ್ರಮದಲ್ಲಿ ಮುಸ್ಲಿಂ ಬಾಂಧವರು ಬರಿಗಾಲಲ್ಲಿ, ತಲೆ ಮೇಲೆ ಟೋಪಿ ಹಾಕದೆ, ಕೈಯನ್ನು ಉಲ್ಟಾ ಮಾಡಿ ಸುಡು ಬಿಸಿಲಿನಲ್ಲಿ ವಿನೂತನವಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

1400 ವರ್ಷಗಳ ಹಿಂದೆ ಜಗತ್ತಿನಲ್ಲಿ ವ್ಯಾಪಕ ಬರಗಾಲ ಆವರಿಸಿದ ಸಂದರ್ಭದಲ್ಲಿ ಮುಸ್ಲಿಂ ಧರ್ಮಗುರು ಮಹಮದ್ ಪೈಗಂಬರ್, ಕಾಲಲ್ಲಿ ಚಪ್ಪಲಿ ಧರಿಸದೆ, ತಲೆ ಮೇಲೆ ಟೋಪಿ ಹಾಕದೆ, ಸುಡು ಬಿಸಿಲಿನಲ್ಲಿ ಪ್ರಾರ್ಥನೆ ಮಾಡಿದ್ದರು. ಅವರ ಪ್ರಾರ್ಥನೆಯಿಂದ ಉತ್ತಮ ಮಳೆಯಾಗಿತ್ತು. ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ ಕಳೆದ 2-3 ವರ್ಷಗಳಿಂದ ತೀವ್ರ ಬರಗಾಲ ಆವರಿಸಿ, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿರುವುದರಿಂದ, ರಾಜ್ಯದಲ್ಲಿ ಉತ್ತಮ ಮಳೆಯಾಗಲಿ ರೈತರ ಬದುಕು ಹಸನಾಗಲಿ ಎಂದು ಸ್ಥಳೀಯ ಅಂಜುಮನ್ ಕಮಿಟಿ ವತಿಯಿಂದ ಸಾಮೂಹಿಕ ಪ್ರಾರ್ಥನೆಯನ್ನು ಹಮ್ಮಿಕೊಂಡಿದ್ದೇವೆ ಎಂದು ಅಂಜುಮನ್ ಕಮಿಟಿ ಅಧ್ಯಕ್ಷ ಹೆಚ್.ಎನ್.ಎಫ್.ಮಹಮದ್ ಇಮಾಮ್ ನಿಯಾಜಿ ತಿಳಿಸಿದ್ದಾರೆ.

ಸಾಮೂಹಿಕ ಪ್ರಾರ್ಥನೆಯಲ್ಲಿ ನಗರಸಭೆ ಅಧ್ಯಕ್ಷ ಎನ್.ಅಬ್ದುಲ್ ಖದೀರ್, ನಗರಸಭೆ ಸದಸ್ಯರಾದ ಕೆ.ಬಡಾವಲಿ, ಕೆ.ಗೌಸ್, ಮುಖಂಡರಾದ ಖಾದರ್, ವಾಹಿದ್, ಅಬ್ದುಲ್ ಸೇರಿದಂತೆ ಅಂಜುಮನ್ ಕಮಿಟಿ ಪದಾಧಿಕಾರಿಗಳು ಹಾಗೂ ಮುಸ್ಲಿಂ ಬಾಂಧವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here