ಮಳೆಗಾಗಿ ವಿಶೇಷ ಪೂಜೆ..

0
253

ಬಳ್ಳಾರಿ /ಕೂಡ್ಲಿಗಿ:ತೊನ್ನು ಹತ್ತಿದ ಹೂತಿಟ್ಟಿದ್ದ ಹೆಣ ಹೊರತೆಗೆದು ಸುಡ್ತಾರೆ,ಮಳೆ ಬರಲಿಲ್ಲವೆಂದು ಮೂಡನಂಬಿಕೆಯತ್ತ ಚಿತ್ತ ತೊನ್ನು ರೋಗವಿರುವ ಹೆಣ ಹೊರತೆಗೆದು ಸುಡುತ್ತಾರೆ ಮೂಡನಂಬಿಕೆ ಎಂದು ಗೊತ್ತಿದ್ರು. ಅನಿವಾರ್ಯ

ಅಲ್ಲಿ ಹೂತಿಟ್ಟಿದ್ದ ಹೆಣವನ್ನು ಹೊರಗೆ ತೆಗೆದು ಸುಟ್ಟರು.. ಇದ ಕ್ಕಾಗಿ  ಊರಿಂದ ಮೆರವಣಿಗೆ ಮಾಡಿಕೊಂಡು ಸ್ಮಶಾನದ ಹತ್ತಿರ ಬಂದ್ರು.. ಹೆಣದ ಮುಂಡವನ್ನು ಕೊಲಿನಿಂದ ಎತ್ತಿ ತೆಗೆದು ವಿವಿಧ ರೀತಿಯಲ್ಲಿ ಪ್ರಾಥಿಸಿ ಮತ್ತೆ ಸುಟ್ಟು ಬಿಟ್ಟರು. ಅರೆ ಏನೀ ಆಚರಣೆ ?  ಹೂತಿಟ್ಟಿದ್ದ ಹೆಣವನ್ನು ಹೊರಗೆ ತೆಗೆದು ಸುಡುವ ಸ್ಥಿತಿ ಯಾಕೆ ಬಂತು ? ಅಂತೀರಾ

ಸತತ  ನಾಲ್ಕು ವರ್ಷದ ಬರಗಾಲದಿಂದ ಕೆಂಗಟ್ಟಿರುವ ಬಳ್ಳಾರಿ ರೈತರು….ಮಳೆಗಾಗಿ ಮೂಡ ನಂಬಿಕೆಯತ್ತ ತಮ್ಮ ಚಿತ್ತ ವನ್ನು ಹರಿಸುತ್ತಿರುವ ಜನರು…  ಹೌದು, ಬೀಕರ ಬರಗಾಲ ದಿಂದ ತತ್ತರಿಸಿದ ಬಳ್ಳಾರಿ ಜನರು ಇದೀಗ ಯಾರು ಏನ್ ಆಚರಣೆ ಹೇಳಿ ದ್ರು, ಕೇಳುವ ಸ್ಥಿತಿಗೆ ಬಂದಿದ್ದಾರೆ. ಕಪ್ಪೆ, ಕತ್ತೆ ಮದುವೆ ಸೇರಿದಂತೆ ವಿವಿಧ ಆಚರಣೆ ಮಾಡಿದ ಜನರು ಇದೀಗ  ತೊನ್ನು ರೋಗ ಇರು ವ ವ್ಯಕ್ತಿಯ ಶವವನ್ನು ಹೊರತೆಗೆದು ಸುಟ್ಟರೇ ಮಳೆ ಬರುತ್ತೆನ್ನು ವ ನಂಬಿಕೆಯಿಂದ  ಅದನ್ನು ಕೂಡ ಮಾಡಿದ್ದಾರೆ..  ಕೂಡ್ಲಿಗಿ ತಾಲೂಕಿನ ಉಜ್ಜೈನಿ ಗ್ರಾಮದ ಜನರು ಇಂದು ಶವ ವನ್ನು ಹೊರ ತೆಗೆದು ಮುಂಡದ ಪೂಜೆ ಮಾಡಿ  ಉಳಿದ ಅವಶೇಷವನ್ನೆಲ್ಲವನ್ನು ಸುಟ್ಟು ಹಾಕಿದರು.

ಬೈಟ್ 1 : ನಾಗಪ್ಪ         ಆಚರಣೆ ಮಾಡುವವರು

ತೊನ್ನು ಹತ್ತಿದ ವ್ಯಕ್ತಿಯನ್ನು ಮುಖ ಮೇಲೆ ಮಾಡಿ ಹೂತಿಟ್ಟಿರುತ್ತಾರೆ.  ತೊನ್ನು ಹತ್ತಿದವರ ಮುಖ ನೋಡಿದ ಮಳೆ ರಾಯ  ಆ ಪ್ರದೇಶದಲ್ಲಿ ಬರುವುದಿಲ್ಲವಂತೆ ..ಹೀಗಾಗಿ ಮಳೆ ಬಾರದ ಸಂದರ್ಭಗಳಲ್ಲಿ ಈ ರೀತಿ ಮಾಡಲಾಗುವುದು ಎನ್ನುತ್ತಾರೆ ಇಲ್ಲಿಯ ಜನರು.  ಇದು ನಿನ್ನೆ ಮೊನ್ನೆಯಿಂದ ನಡೆದುಕೊಂಡು ಬಂದ ಆಚರಣೆಯ.. ಹಲವು ದಶಕಗಳಿಂದ ನಡೆದುಕೊಂಡಿ ಬಂದಿದೆಯಂತೆ..

ಮೂಡನಂಬಿಕೆ ಎಂದು ಗೊತ್ತಿದ್ದರು. ಮಳೆ ಇಲ್ಲದೇ ಕಂಗಾಲಾಗಿರುವ  ಎಲ್ಲ ರೀತಿಯ ಆಚರಣೆಯನ್ನು ಮಾಡುತ್ತಿ ದ್ದಾರೆ. ಒಟ್ಟಲ್ಲಿ ನಂಬಿಕೆಯೋ ಮೂಡ ನಂಬಿಕೆಯೋ ಗೊತ್ತಿಲ್ಲ ಈ ರೀತಿಯಿಂದಾದ್ರೂ  ಮಳೆ ಬರಲಿ ಎನ್ನವುದು ಈ ಭಾಗದ ಜನರ ಆಸೆಯಾಗಿದೆ

LEAVE A REPLY

Please enter your comment!
Please enter your name here