ಮಳೆರಾಯನನ್ನು ಕೃಪೆಗಾಗಿ ಪರ್ಜನ್ಯಯಾಗ

0
128

ಚಿಕ್ಕಬಳ್ಳಾಪುರ / ಶಿಡ್ಲಘಟ್ಟ:ಪರ್ಜನ್ಯ ಯಾಗ ದಿಂದ ಬಯಲು ಸೀಮೆಯ ಪ್ರದೇಶಕ್ಕೆ ಈ ಬಾರಿ ಹೆಚ್ಚಾಗಿ ಮಳೆ ಬಿದ್ದು ಕೆರೆ ಕುಂಟೆಗಳಿಗೆ ನೀರು ತುಂಬಿ ರೈತಾಪಿ ವರ್ಗದ ಜನತೆ ಹಾಗೂ ದನ ಕರುರಗಳಿಗೆ ಹರುಷ ಒದಗಿಬರಲೆಂದು ಐದು ದಿನಗಳ ಕಾಲ ಪರ್ಜನ್ಯ ಯಾಗ ನಡೆಸಲಾಗುತ್ತದೆ ಎಂದು ಹೆಚ್.ಡಿ ದೇವೆಗೌಡ ಮತ್ತು ಜಯಪ್ರಕಾಶ್ ನಾರಾಯಣ್ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷ ಮೇಲೂರು ರವಿಕುಮಾರ್ ಹೇಳಿದರು.

ತಾಲ್ಲೂಕಿನ ಬಸೆಟ್ಟಹಳ್ಳಿ ಹೋಬಳಿಯ ನಲ್ಲರಾಳ್ಳ ಹಳ್ಳಿಯಲ್ಲಿ ನೆಲೆಸಿರುವ ಶ್ರೀ ಚಾಮುಂಡೇಶ್ವರಿ ದೇವಾಲಯದ ಸನ್ನಿಧಿಯಲ್ಲಿ 5 ದಿನಗಳ ಕಾಲ ನಡೆಸುವ ಯಾಗದಲ್ಲಿ ಪಂಚ ಭೂತಗಳಲ್ಲಿ ಒಂದಾದ ಮಳೆರಾಯನನ್ನು ಕೃಪೆಗಾಗಿ ಮಹಾಯಾಗದಿಂದ ಯಜ್ಞ ನಡೆಯುವ ಸಂದರ್ಭದಲ್ಲಿ ಮಾತನಾಡಿದರು.

ರೈತಾಪಿ ವರ್ಗದ ಜನತೆ ಪ್ರತಿ ವರ್ಷದಂತೆ ಮಳೆಯನ್ನು ನಂಬಿ ಭೂಮಿಯನ್ನು ಉತ್ತು ಬಿತ್ತಿ ಹಲವಾರು ರೀತಿಯ ಬೆಳೆಗಳಾದ ರಾಗಿ, ಅವರೆಕಾಯಿ, ಜೋಳ, ತೊಗರಿ,ಉರುಳಿ, ಕಡಲೆಕಾಯಿ ಬೆಳೆಗಳು ಬೆಳೆಯುವ ಪದ್ದತಿಯಿದ್ದು ಹಲವಾರು ವರ್ಷಗಳಿಂದ ಸಮಯಕ್ಕೆ ಸರಿಯಾಗಿ ಮಳೆ ಬೀಳದೆ ಬೆಳೆದ ಬೆಳಗಳಿಂದ ಪಸಲು ಕಾಣದೆ ಕಂಗಾಲಾಗಿದ್ದಾರೆ. ಈ ವರ್ಷವು ಸಹ ಅದೇ ಸಂಕಷ್ಟಗಳಿಗೆ ಜನರು ಹಾಗೂ ದನ ಕರುಗಳು ಒಳಗಾಗದಿರಲೆಂದು ಪರ್ಜನ್ಯ ಯಾಗ ಮಾಡಲಾಗುತ್ತಿದೆ. ಅನಾದಿಕಾಲದಿಂದಲು ನಡೆದು ಬಂದ ರೀತಿಯಲ್ಲಿ ಪ್ರಕೃತಿಯನ್ನು ಒಲಿಸಿಕೊಳ್ಳುವಂತ ಪುಣ್ಯ ಕೆಲಸಕ್ಕೆ ಹಾಗೂ ಪರ್ಜನ್ಯ ಯಾಗಕ್ಕೆ ಈ ಭಾಗದ ಜನತೆ ಭಾಗವಹಿಸುವ ಮೂಲಕ ದೇವರ ಹಾಗೂ ಮಳೆರಾಯನ ಕೃಪೆಗೆ ಪಾತ್ರರಾಗಬೇಕು ಎಂದರು.

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಹೆಚ್. ನರಸಿಂಹಯ್ಯ, ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಬಶೆಟ್ಟಹಳ್ಳಿ ವೆಂಕಟೇಶಪ್ಪ, ಮುಗಿಲಡಿಪಿ ನಂಜಪ್ಪ, ರಘ, ಚಾಮುಂಡೇಶ್ವರಿ ದೇವಾಲಯದ ಅಧ್ಯಕ್ಷ ಶ್ರೀನಿವಾಸರೆಡ್ಡಿ ಹಾಗೂ ಮುಂತಾದವರು ಹಾಜರಿದ್ದರು.

ಪರ್ಜನ್ಯ ಯಾಗ ಹಮ್ಮಿಕೊಂಡ ದಿನದಿಂದಲು ಸಹ ಮಳೆ ಬೀಳುತ್ತದೆ ರೈತಾಪಿ ವರ್ಗದ ಜನತೆ ಹರ್ಷ ಪಂಡುವಂತಾಗಿದೆ ಎಂದು ಸ್ಥಳಿಯರು ತಿಳಿಸಿದರು.

ಆ ಸ್ಥಳದಲ್ಲಿ 5 ದಿನಗಳಿಂದ ಹೆಚ್ಚಿನ ಜನರು ಬಾಗವಹಿಸುತ್ತಿದ್ದು ಅಲ್ಲಿ ಪ್ರತಿ ದಿನ ಪ್ರವಾಸಿಗರಂತೆ ಜನ ಜಂಗುಳಿಯಿಂದ ಕೊಡಿರುವ ವಾತಾವರಣ ನಿರ್ಮಾಣವಾಗಿದೆ.

LEAVE A REPLY

Please enter your comment!
Please enter your name here