ಮಳೆ ಅವಾಂತರ ಮನೆಗಳಿಗೆ ನುಗ್ಗಿದ ಚರಂಡಿ ನೀರು…

0
46

ಚಿಕ್ಕಬಳ್ಳಾಪುರ/ಚಿಂತಾಮಣಿಯಲ್ಲಿಮಳೆ ಅವಾಂತರ ಮನೆಗಳಿಗೆ ನುಗ್ಗಿದ ಚರಂಡಿ ನೀರು.ಬೀದಿಗಿಳಿದು ಪ್ರತಿಭಟನೆ ನಡೆಸಿದ ಸ್ಥಳಿಯ ನಿವಾಸಿಗಳು..
ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ದ ಆಕ್ರೋಶ..
ಇಂದು ಸಂಜೆ ಸುರಿದ ದಾರಾಕಾರ ಮಳೆಯಿಂದಾಗಿ ಚರಂಡಿ ನೀರೆಲ್ಲಾ ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಗರದ 14 ನೇ ವಾರ್ಡ್ ನ ಸೊಣ್ಣಶೆಟ್ಟಿಹಳ್ಳಿ ಬಡಾವಣೆಯಲ್ಲಿ ನಡೆದಿದೆ. ಒಂದು ಗಂಟೆ ಕಾಲ ಸುರಿದ ದಾರಾಕಾರ ಮಳೆಗೆ ಬಡಾವಣೆಯ ತಗ್ಗುಪ್ರದೇಶದ ಬಹುತೆಕ ಮನೆಗಳಿಗೆ ಮಳೆಯ ಚರಂಡಿ ನೀರು ನುಗ್ಗಿದೆ..ಇದ್ರಿಂದ ಮನೆಗಳೊಳಗೆ ನುಗ್ಗಿದ ಚರಂಡಿ ನೀರನ್ನ ಹೊರಹಾಕಲು ಸ್ಥಳೀಯ ನಿವಾಸಿಗಳು ಇನ್ನಿಲ್ಲದ ಹರಸಾಹಸ ಪಟ್ಟರು.. ಸರಿಯಾದ ಚರಂಡಿ ನಿರ್ಮಾಣ ಮಾಡದಿರುವುದೇ ಇಷ್ಟೇಲ್ಲಾ ಅವಾಂತರಕ್ಕೆ ಕಾರಣ ಅಂತ ಸ್ಥಳೀಯರು ಆರೋಪಿಸಿದ್ದಾರೆ.. ಇಷ್ಟಕ್ಕೆ ಸುಮ್ಮನಾಗದ ಆಕ್ರೋಶಭರಿತ ಸ್ಥಳೀಯರು ಕೋಲಾರ –ಚಿಂತಾಮಣಿ ರಸ್ತೆಗೆ ಅಡ್ಡಲಾಗಿ ಕಲ್ಲುಗಳನ್ನ ಹಾಕಿ ಪ್ರತಿಭಟನೆ ನಡೆಸಿ ಚಿಂತಾಮಣಿ ನಗರಸಬೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ಥಳಕ್ಕೆ ಆಗಮಿಸಿ ತಮಗಾದ ಸಮಸ್ಯೆಯನ್ನು ಕೂಡಲೇ ಪರಿಹರಿಸುವಂತೆ ಒತ್ತಾಯಿಸಿದ್ರು..

LEAVE A REPLY

Please enter your comment!
Please enter your name here