ಮಳೆ ನೀರಿನಲ್ಲೆ ಶಿಕ್ಷಕರ ದಿನಾಚರಣೆ

0
196

ಬಳ್ಳಾರಿ /ಬಳ್ಳಾರಿ:ಯಲ್ಲಿ ಕಳೆದ ರಾತ್ರಿಯಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಕಳೆದ ರಾತ್ರಿ ಹಾಗೂ ನಸುಕಿನ ಜಾವ ಸುಮಾರು ೩ ಗಂಟೆಗೂ ಹೆಚ್ಚು ಕಾಲ ಸುರಿದ ಧಾರಾಕಾರ ಮಳೆಗೆ ಸಾಕಷ್ಟು ಅನಾಹುತ ಸೃಷ್ಟಿಯಾಗಿದೆ, ಭಾರಿ ಮಳೆಗೆ
ಬಳ್ಳಾರಿ ತಾಲೂಕಿನ ಬೆಳಗಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೀರು ನುಗ್ಗಿದೆ, ಶಾಲೆಯ ಕೊಠಡಿ ಹಾಗೂ ಶಾಲಾ ಆವರಣದಲ್ಲಿ ಸಾಕಷ್ಟು ನೀರು ಬಂದ ಪರಿಣಾಮ ಇಂದು ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಲು ಬಂದ ಮಕ್ಕಳು ಮತ್ತು ಶಿಕ್ಷಕರು ನೀರಿನಲ್ಲೆ ಶಿಕ್ಷಕರ ದಿನಾಚರಣೆ ಆಚರಿಸುವಂತಾಗಿದೆ. ಭಾರಿ ಮಳೆಗೆ ಬಳ್ಳಾರಿಯ ಹಲವು ತಗ್ಗು ಪ್ರದೇಶಗಳ ಮನೆಗಳಿಗೂ ನೀರು ನುಗ್ಗಿದ್ದು ಜನ ಜೀವನ ಅಸ್ತವ್ತಸ್ಥಗೊಂಡಿದೆ,

LEAVE A REPLY

Please enter your comment!
Please enter your name here